ನವದೆಹಲಿ: ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಐರ್ಲೆಂಡ್ ಎದುರು ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿಯೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕಾಗಿತ್ತು. ಆದರೆ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ತಮ್ಮ ಸ್ಥಾನಗಳನ್ನು ಗಟ್ಟಿ ಮಾಡಿಕೊಂಡಿದ್ದರಿಂದ ಯುವ ಬ್ಯಾಟ್ಸ್‌ಮನ್‌ಗೆ ಚೊಚ್ಚಲ ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಐದು ಪಂದ್ಯಗಳ ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ 15ನೇ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್‌ಗೆ ಪದಾರ್ಪಣೆ ಮಾಡಲು ಅವಕಾಶ ಸಿಗಬಹುದು. ಅಂದ ಹಾಗೆ ವೈಭವ್ ಸೂರ್ಯವಂಶಿ ಬಗ್ಗೆ ಸ್ಪಿನ್ ದಿಗ್ಗಜ ಗ್ರೇಮ್ ಸ್ವಾನ್ (Graem Swann) ಅವರು ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
ಮುಂಬರುವ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇಂಗ್ಲೆಂಡ್‌ಗೆ ಅತಿದೊಡ್ಡ ಸವಾಲುದಾಯಕ ಆಟಗಾರರಲ್ಲಿ ಒಬ್ಬರಾಗಬಹುದು. ಇತ್ತೀಚಿನ ವರ್ಷಗಳಲ್ಲಿ ಇಂತಹ ಬ್ಯಾಟರ್‌ರನ್ನು ಇಂಗ್ಲೆಂಡ್ ಎದುರಿಸಿಲ್ಲ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ವೈಭವ್ ಸೂರ್ಯವಂಶಿಯಂತಹ ಆಟಗಾರನ ವಿರುದ್ಧ ಯೋಜನೆ ರೂಪಿಸುವುದು ತುಂಬಾ ಕಷ್ಟ. ಅವರು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸಬರಾಗಿದ್ದರೂ, ಈಗಾಗಲೇ ಎರಡು ಐಪಿಎಲ್ ಋತುಗಳನ್ನು ಆಡಿದ್ದಾರೆ. ಹೀಗಾಗಿ ಅವರ ಆಟದ ಸಾಕಷ್ಟು ವಿಡಿಯೊ ದೃಶ್ಯಗಳು ಲಭ್ಯವಿವೆ. ಇಂಗ್ಲೆಂಡ್‌ನ ಕೆಲವು ಬೌಲರ್‌ಗಳು ಐಪಿಎಲ್‌ನಲ್ಲಿ ಅವರಿಗೆ ಬೌಲ್ ಮಾಡಿರಬಹುದು. ಆದರೆ ನಿಜವೆಂದರೆ, ಇದುವರೆಗೆ ಅವರ ವಿರುದ್ಧ ಯಾರಿಗೂ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಅವರು ಬಹುತೇಕ ಆಡಲಾಗದ ಬ್ಯಾಟರ್‌ನಂತೆ ಕಾಣುತ್ತಿದ್ದಾರೆ," ಎಂದು ಸ್ವಾನ್ ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
IND vs ENG: ವೈಭವ್ ಸೂರ್ಯವಂಶಿ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಶ್ರೇಯಸ್ ಅಯ್ಯರ್!
ಇಂಗ್ಲೆಂಡ್‌ನ ಬೌಲರ್‌ಗಳಿಗೆ ಇದು ಕಠಿಣ ಸರಣಿಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಸ್ವಾನ್, ಒಬ್ಬ ಬೌಲರ್‌ಗೆ ಮಾತ್ರ ಇತರೆ ಬೌಲರ್‌ಗಳಿಗಿಂತ ಮೇಲುಗೈ ಸಾಧಿಸಬಹುದು ಎಂದು ಹೇಳಿದರು. ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿಯೊಂದಿಗೆ ಕಳೆದ ಅನುಭವದ ಹಿನ್ನೆಲೆಯಲ್ಲಿ ಜೋಫ್ರಾ ಆರ್ಚರ್ ಅವರಿಗೆ ಉಳಿದವರಿಗಿಂತ ಹೆಚ್ಚಿನ ಅರಿವು ಇರಬಹುದು ಎಂದು ಅವರು ಅಭಿಪ್ರಾಯಪಟ್ಟರು.
"ಸ್ವಲ್ಪ ಮಟ್ಟಿನ ಅನುಕೂಲ ಹೊಂದಿರುವ ಏಕೈಕ ಬೌಲರ್ ಜೋಫ್ರಾ ಆರ್ಚರ್ ಆಗಿರಬಹುದು. ಅವರು ಡಗೌಟ್‌ನಿಂದ ಸೂರ್ಯವಂಶಿಯನ್ನು ಗಮನಿಸಿದ್ದಾರೆ, ನೆಟ್ಸ್‌ನಲ್ಲಿ ಅವರಿಗೆ ಬೌಲಿಂಗ್ ನಡೆಸಿದ್ದಾರೆ ಮತ್ತು ಅವರ ಆಟವನ್ನು ಹತ್ತಿರದಿಂದ ವೀಕ್ಷಿಸಿದ್ದಾರೆ. ಬಹುಶಃ ತಂಡದಲ್ಲಿರುವ ಯಾರಿಗಿಂತಲೂ ಅವರು ಸೂರ್ಯವಂಶಿಯ ಆಟವನ್ನು ಹೆಚ್ಚು ನೋಡಿರಬಹುದು," ಎಂದು ಸ್ವಾನ್ ತಿಳಿಸಿದ್ದಾರೆ.
IND vs ENG: ಮೊದಲನೇ ಟಿ20ಐಗೂ ಮುನ್ನ ಭಾರತ ತಂಡಕ್ಕೆ ಸೇರಿದ ವರುಣ್ ಚಕ್ರವರ್ತಿ!
2026ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿಯ ಅಂಕಿಅಂಶಗಳು
ರಾಜಸ್ಥಾನ್ ರಾಯಲ್ಸ್ ಪರ 2026ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ವೈಭವ್ ಸೂರ್ಯವಂಶಿ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 15ನೇ ವಯಸ್ಸಿನ ಈ ಆರಂಭಿಕ ಬ್ಯಾಟರ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರು 237.30ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್‌ಗಳನ್ನು ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಅವರ ಸ್ಮರಣೀಯ ಋತುವಿನಲ್ಲಿ ಒಂದು ಶತಕ, ಐದು ಅರ್ಧಶತಕಗಳು ಹಾಗೂ ದಾಖಲೆಯ 72 ಸಿಕ್ಸರ್‌ಗಳು ಸೇರಿವೆ.