ಹರಾರೆ: ಇಂಗ್ಲೆಂಡ್ ವಿರುದ್ಧ 2026ರ ಅಂಡರ್-19 ವಿಶ್ವಕಪ್ ಟೂರ್ನಿಯ (U-19 World Cup 2026) ಫೈನಲ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryanshi) ಅವರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 80 ಎಸೆತಗಳಲ್ಲಿ 15 ಭರ್ಜರಿ ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 175 ರನ್‌ಗಳನ್ನು ಬಾರಿಸಿದರು. ಮೂಲಕ ಯುವ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವರ ಶತಕದ ಬಲದಿಂದ ಭಾರತ (India U-19) ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 411 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 412 ರನ್‌ಗಳ ಗುರಿಯನ್ನು ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿಅತ್ಯುತ್ತಮ ಲಯದಲ್ಲಿರುವ ಸೂರ್ಯವಂಶಿ ಕ್ರಮವಾಗಿ 2, 72, 40, 52, 30, 68 ಹಾಗೂ 175 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಏನೆಂದು ಸಾಬೀತುಪಡಿಸಿದ್ದಾರೆ. ಅಂದ ಹಾಗೆ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 55ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ನಂತರ 100 ರಿಂದ 150 ರನ್‌ಗಳನ್ನು ತಲುಪಲು ಕೇವಲ 16 ಎಸೆತಗಳನ್ನು ತೆಗೆದುಕೊಂಡರು. ಆ ಮೂಲಕ 71 ಎಸೆತಗಳ ಮೂಲಕ 151 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಅವರು 175 ರನ್‌ಗಳಿಗೆ ತಮ್ಮ ಸ್ಪೋಟಕ ಇನಿಂಗ್ಸ್ ಅನ್ನು ಮುಗಿಸಿದರು.
WPL 2026: ಚಾಂಪಿಯನ್ ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನವೆಷ್ಟು? ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ!
ಯೂಥ್ ಒಡಿಐ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಬ್ಯಾಟರ್ಸ್
42 ಎಸೆತಗಳು - ಸಮೀರ್ ಮಿನ್ಹಾಸ್ vs ಜಿಂಬಾಬ್ವೆ, 2026
51 ಎಸೆತಗಳು - ವಿಲ್ ಮಾಲೆನ್‌ಜುಕ್ vs ಜಪಾನ್, 2026
52 ಬಾಲ್‌ಗಳು- ವೈಭವ್ ಸೂರ್ಯವಂಶಿ vs ಇಂಗ್ಲೆಂಡ್, 2025
53 ಎಸೆತಗಳು -ಕಮ್ರಾನ್ ಗುಲಾಮ್ vs ಇಂಗ್ಲೆಂಡ್, 2013
55 ಬಾಲ್‌ಗಳು - ವೈಭವ್ ಸೂರ್ಯವಂಶಿ vs ಇಂಗ್ಲೆಂಡ್
56 ಬಾಲ್‌ಗಳು - ವೈಭವ್ ಸೂರ್ಯವಂಶಿ vs ಯುಎಇ, 2025
ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಟ ಸ್ಕೋರ್
2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇದು ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. 2012ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಉನ್ಮುಕ್ತ್ ಚಾಂದ್ ಅವರ 130 ಎಸೆತಗಳಲ್ಲಿ 111 ರನ್ ಮತ್ತು 1998 ರ ಪ್ರಶಸ್ತಿ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಪರ ಬ್ರೆಟ್ ವಿಲಿಯಮ್ಸ್ ಅವರ 134 ಎಸೆತಗಳಲ್ಲಿ 108 ರನ್ ಗಳಿಸಿದ್ದರು. ಇದೀಗ ಅವರನ್ನು ವೈಭವ್ ಸೂರ್ಯವಂಶಿ ಹಿಂದಿಕ್ಕಿದ್ದಾರೆ.
ವೈಭವ್ ಸೂರ್ಯವಂಶಿ vs ಇಂಗ್ಲೆಂಡ್- 175 ರನ್, 80 ಎಸೆತಗಳು-2026
ಉನ್ಮುಕ್ತ್ ಚಾಂದ್ vs ಆಸ್ಟ್ರೇಲಿಯಾ- 111 ರನ್, 130 ಎಸೆತಗಳು-2012
ಬ್ರೆಟ್ ವಿಲಿಯಮ್ಸನ್ vs ಪಾಕಿಸ್ತಾನ - 108 ರನ್, 134 ಎಸೆತಗಳು-1998
ಎರಡನೇ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ
ಯುವ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಂಬಾಟಿ ರಾಯುಡು ಈ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು 2002ರಲ್ಲಿ ಇಂಗ್ಲೆಂಡ್ ವಿರುದ್ಧ 177 ರನ್‌ಗಳನ್ನು ಸಿಡಿಸಿದ್ದಾರೆ. ಒಟ್ಟಾರೆ ಅಗ್ರ 10 ಬ್ಯಾಟ್ಸ್‌ಮನ್‌ಗಳ ಸಾಲಿಗೆ ವೈಭವ್ ಸೇರ್ಪಡೆಯಾಗಿದ್ದಾರೆ.
ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು
15* - ವೈಭವ್ ಸೂರ್ಯವಂಶಿ (IND) vs ENG, ಹರಾರೆ, 2026
12 -ಮೈಕಲ್ ಹಿಲ್ (AUS) vs NAM, ಪೆನಾಂಗ್, 2008
11 - ಕ್ರೈಗ್ ಸೀಮನ್ಸ್ (AUS) vs KEN, ಡ್ಯೂನೆಡಿನ್, 2002