ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2026ರ ಏಷ್ಯಾ ಕ್ರೀಡಾಕೂಟದಿಂದಲೂ ವರುಣ್‌ ಚಕ್ರವರ್ತಿ ಔಟ್‌? ವಿಪ್ರಜ್‌ ನಿಗಮ್‌ಗೆ ಸ್ಥಾನ!

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಂದ ಹೊರ ನಡೆದಿರುವ ಭಾರತದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, 2026ರ ಏಷ್ಯಾ ಕ್ರೀಡಾಕೂಟದಿಂದಲೂ ಹೊರ ನಡೆಯುವ ಸಾಧ್ಯತೆ ಇದೆ. ಅವರು ಹೊರ ನಡೆದರೆ, ಅವರ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸ್ಟಾರ್‌ ಆಟಗಾರ ವಿಪ್ರಝ್‌ ನಿಗಮ್‌ ಭಾರತ ಟಿ20 ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ.

ಏಷ್ಯಾ ಕ್ರೀಡಾಕೂಟದಿಂದಲೂ ವರುಣ್‌ ಚಕ್ರವರ್ತಿ.

ನವದೆಹಲಿ: ಮುಂಬರುವ 2026ರ ಏಷ್ಯಾ ಕ್ರೀಡಾಕೂಟ (Asian Games 2026) ಆರಂಭವಾಗುವುದಕ್ಕೂ ಮುನ್ನವೇ ಭಾರತ ಕ್ರಿಕೆಟ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಭಾರತದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) ಅವರು ಮತ್ತೊಮ್ಮೆ ಗಾಯಕ್ಕೆ ತುತ್ತಾಗಿದ್ದು, ಅವರು ಏಷ್ಯಾ ಕ್ರೀಡಾಕೂಟದಿಂದಲೂ ಹೊರ ನಡೆದಿದ್ದಾರೆಂದು ಬೆಳವಣಿಗೆಗಳಲ್ಲಿ ಟೈಮ್ಸ್‌ ನೌ ವರದಿ ಮಾಡಿದೆ. ಸೆಪ್ಟಂಬರ್‌ 13 ರಂದು ಭಾನುವಾರ ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ವರುಣ್‌ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಅವರು ಸೆಪ್ಟಂಬರ್‌ 15 ರಂದು ನಡೆದಿದ್ದ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ ಹಾಗೂ ಅವರು ಸರಣಿಯ ಇನ್ನುಳಿದ ಭಾಗದಿಂದಲೂ ಹೊರ ನಡೆದಿದ್ದಾರೆ.

ಏಷ್ಯಾ ಕ್ರೀಡಾಕೂಟದಿಂದ ವರುಣ್‌ ಚಕ್ರವರ್ತಿ ಅಲಭ್ಯರಾಗಿದ್ದು, ಅವರ ಸ್ಥಾನಕ್ಕೆ ಮತ್ತೊಬ್ಬ ಆಟಗಾರನನ್ನು ಆಯ್ಕೆ ಮಾಡಲು ಬಿಸಿಸಿಐ ಸೆಲೆಕ್ಟರ್‌ಗಳು ಎದುರು ನೋಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಲ್‌ರೌಂಡರ್‌ ವಿಪ್ರಜ್‌ ನಿಗಮ್‌ ಅವರನ್ನು ಏಷ್ಯಾ ಕ್ರೀಡಾಕೂಟದ ಭಾರತ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆದಾರರು ಚಿಂತಿಸುತ್ತಿದ್ದು, ಈ ಬಗ್ಗೆ ಅಧಿಕೃತವಾಗಿ ಬಿಸಿಸಿಐ ಪ್ರಕಟಿಸುವುದು ಬಾಕಿ ಇದೆ. ಈ ತಿಂಗಳಾಂತ್ಯದಲ್ಲಿ ಜಪಾನ್‌ ಎದುರು ಆಡುವ ಮೂಲಕ ಭಾರತ ಏಷ್ಯನ್‌ ಗೇಮ್ಸ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

IND vs AFG: ಸಂಜು ಸ್ಯಾಮ್ಸನ್‌ ಬಗ್ಗೆ ಆಶಾದಾಯಕ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

ಮಂಗಳವಾರ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ವರುಣ್‌ ಚಕ್ರವರ್ತಿ, ಸೆಪ್ಟಂಬರ್‌ 17 ರಂದು ನಡೆಯುವ ಮೂರನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಿಂದಲೂ ಹೊರ ನಡೆಯಲಿದ್ದಾರೆ. ಏಷ್ಯನ್‌ ಗೇಮ್ಸ್‌ಗೂ ಮುನ್ನ ವರುಣ್‌ ಚಕ್ರವರ್ತಿ ಹೊಸ ಗಾಯಕ್ಕೆ ತುತ್ತಾಗಿರುವುದು ಭಾರತ ತಂಡದ ಕ್ಯಾಂಪ್‌ನಲ್ಲಿ ಗಾಯಾಳುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಎರಡನೇ ಟಿ20ಐ ಪಂದ್ಯದಲ್ಲಿ ವರುಣ್‌ ಚಕ್ರವರ್ತಿ ಅವರ ಸ್ಥಾನದಲ್ಲಿ ಆಡಿದ್ದ ರವಿ ಬಿಷ್ಣೋಯ್‌ ಅವರು ಉತ್ತಮ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಪ್ರದರ್ಶನವನ್ನು ತೋರಿದ್ದರು.

ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸದ ವೇಳೆ ವರುಣ್‌ ಚಕ್ರವರ್ತಿ ಅವರು ಎರಡನೇ ದರ್ಜೆಯ ಹ್ಯಾಮ್‌ಸ್ಟ್ರಿಂಗ್‌ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಅವರು ಭಾರತ ತಂಡದಿಂದ ಹೊರಗುಳಿದಿದ್ದರು. ನಂತರ ತಮಿಳುನಾಡು ಪ್ರೀಮಿಯರ್‌ ಲೋಗ್‌ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು ಹಾಗೂ ಬೆಂಗಳೂರು ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಲ್ಲಿ ಅವರು ಪುನಶ್ಚೇತಕ ಕಾರ್ಯದಲ್ಲಿ ತೊಡಗಿದ್ದರು.

ಮೂರನೇ ಟಿ20ಐನಲ್ಲಿ ವೈಭವ್‌ ಸೂರ್ಯವಂಶಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ನೀಡಿದ ಶ್ರೇಯಸ್‌ ಅಯ್ಯರ್‌!

ಎರಡು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವರುಣ್‌ ಚಕ್ರವರ್ತಿ, ಅಫ್ಘಾನಿಸ್ತಾನ ಟಿ20ಐ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಇದಕ್ಕೂ ಮುನ್ನ ಅವರು ತಮಿಳುನಾಡು ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡದ ಪರ ಆಡಿದ್ದರು ಹಾಗೂ ಒಂದು ಪಂದ್ಯದಲ್ಲಿ 34 ರನ್‌ ನೀಡಿ ಒಂದೂ ವಿಕೆಟ್‌ ಪಡೆದಿರಲಿಲ್ಲ.

ಅಫ್ಘಾನಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿಯೂ ಅವರು ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಬೌಲ್‌ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ ಒಂದು ವಿಕೆಟ್‌ ಕಿತ್ತಿದ್ದರು. ಮೊದಲನೇ ಪಂದ್ಯದಲ್ಲಿಯೇ ಗಾಯಕ್ಕೆ ತುತ್ತಾದ ಅವರು, ಎರಡು ಹಾಗೂ ಮೂರನೇ ಪಂದ್ಯಗಳಿಂದ ಹೊರ ನಡೆದಿದ್ದಾರೆ. ಇದೀಗ ಏಷ್ಯನ್‌ ಗೇಮ್ಸ್‌ ಅವರು ಅಲಭ್ಯರಾಗಲಿದ್ದಾರೆ.