VHT 2025-26: ಸತತ 5 ಶತಕಗಳನ್ನು ಬಾರಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಧ್ರುವ್ ಶೋರೆ!
2025-26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯ ವಿದರ್ಭ ಪರ ಆಡುತ್ತಿರುವ ದೆಹಲಿಯ ಧ್ರುವ್ ಶೋರೆ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ಐದು ಶತಕಗಳನ್ನು ಬಾರಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ಭಾರತೀಯ ಆಟಗಾರನ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ 5 ಶತಕಗಳನ್ನು ಬಾರಿಸಿದ ಧ್ರುವ್ ಶೋರೆ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿದರ್ಭ (Vidarbha) ತಂಡ 89 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ವಿದರ್ಭ ತಂಡದ ಗೆಲುವಿಗೆ ನೆರವು ನೀಡಿದ್ದು ಧ್ರುವ್ ಶೋರೆ (Dhruv Shorey). ಇವರು ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ 77 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 109 ರನ್‌ಗಳನ್ನು ಬಾರಿಸಿದರು. ಆ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ ಐದನೇ ಲಿಸ್ಟ್ ಎ ಪಂದ್ಯದಲ್ಲಿ ಧ್ರುವ್ ಶೋರೆ ಅವರ ಐದನೇ ಶತಕ ಇದಾಗಿದೆ. ಇದರೊಂದಿಗೆ, ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದ ತಮಿಳುನಾಡಿನ ಎನ್. ಜಗದೀಶನ್ ಅವರ ವಿಶ್ವ ದಾಖಲೆಯನ್ನು ಅವರು (ಧ್ರುವ್ ಶೋರೆ) ಸರಿಗಟ್ಟಿದರು. ಧ್ರುವ್ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾರೆ, ಚೆನ್ನೈ ಪರ ಅವರು ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದಾರೆ.
AUS vs ENG: 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಇಂಗ್ಲೆಂಡ್!
2022-23ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಐದು ಶತಕಗಳನ್ನು ಗಳಿಸುವ ಮೂಲಕ ಜಗದೀಶನ್ ಹೊಸ ದಾಖಲೆಯನ್ನು ಬರೆದಿದ್ದರು. ಇದರಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಅವರ 277 ರನ್ ಇನಿಂಗ್ಸ್ ಕೂಡ ಸೇರಿದೆ. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನ ಅತ್ಯಧಿಕ ಸ್ಕೋರ್ ಆಗಿ ಉಳಿದಿದೆ. ಕರುಣ್ ನಾಯರ್, ದೇವದತ್ ಪಡಿಕ್ಕಲ್, ಕುಮಾರ್ ಸಂಗಕ್ಕಾರ ಮತ್ತು ಅಲ್ವಿರೊ ಪೀಟರ್ಸನ್ ಕೂಡ ಸತತ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಇವರಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಕುಮಾರ್ ಸಂಗಕ್ಕಾರ.
ಹೈದರಾಬಾದ್ ವಿರುದ್ಧ ಗೆದ್ದಿದ್ದ ವಿದರ್ಭ
ವಿದರ್ಭ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡುವಂತಾದ ವಿದರ್ಭ 5 ವಿಕೆಟ್ ನಷ್ಟಕ್ಕೆ 365 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಹೈದರಾಬಾದ್ 49.2 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಗಿ 89 ರನ್‌ಗಳಿಂದ ಪಂದ್ಯವನ್ನು ಸೋತಿತು. ಶತಕ ಬಾರಿಸಿದ ಧ್ರುವ್ ಶೋರೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Vijay Hazare Trophy: ಮೈಕಲ್ ಬೆವನ್‌ರ ವಿಶ್ವ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ!
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು
5 - ಧ್ರುವ್ ಶೋರೆ - 2025-26
5 – ಎನ್ ಜಗದೀಸನ್ – 2022-23
4 – ಕರುಣ್ ನಾಯರ್ – 2024-25
4 - ದೇವದತ್ ಪಡಿಕ್ಕಲ್ - 2020-21
4 - ಅಲ್ವಿರೋ ಪೀಟರ್ಸನ್ - 2015-16
4 – ಕುಮಾರ್ ಸಂಗಕ್ಕಾರ – 2014-15
5 innings. 5 hundreds. 🥶🔥
— Shiva Chaudhary (@imshiva_1) December 26, 2025
Dhruv Shorey in #VijayHazareTrophy
118*, 114, 110, 136, 109*
Pure DOMINANCE 💯💯💯💯💯 🙌
pic.twitter.com/lDPFa83jWw
ಸತತವಾಗಿ ಅತಿ ಹೆಚ್ಚು ಒಡಿಐ ಶತಕ ಸಿಡಿಸಿದ ಬ್ಯಾಟರ್‌ಗಳು
4 – ಕುಮಾರ ಸಂಗಕ್ಕಾರ – 2014-15
3 – ಜಹೀರ್ ಅಬ್ಬಾಸ್ – 1982-83
3 – ಸಯೀದ್ ಅನ್ವರ್ – 1993-94
3 - ಹರ್ಷಲ್ ಗಿಬ್ಸ್ - 2002
3 - ಎಬಿ ಡಿವಿಲಿಯರ್ಸ್ - 2010
3 - ಕ್ವಿಂಟನ್ ಡಿ ಕಾಕ್ - 2013-14
3 - ರಾಸ್ ಟೇಲರ್ - 2013-14
3 - ಬಾಬರ್ ಆಝಮ್ - 2016
3 - ಜಾನಿ ಬೈರ್‌ಸ್ಟೋವ್ - 2018
3 - ವಿರಾಟ್ ಕೊಹ್ಲಿ - 2018
3 - ರೋಹಿತ್ ಶರ್ಮಾ - 2019
3 - ಬಾಬರ್ ಆಝಮ್ - 2022
3 - ಫಖಾರ್ ಝಮಾನ್ - 2022-23