ನವದೆಹಲಿ: ಗೋವಾ ವಿರುದ್ಧದ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಮುಂಬೈ (Mumbia) ತಂಡದ ಸರ್ಫರಾಝ್ ಖಾನ್ (Sarfaraz Khan) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಬುಧವಾರ ಜೈಪುರದ ಜೈಪೂರಿಯಾ ವಿದ್ಯಾಲಯದ ಗ್ರೌಂಡ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಅವರು ಆಡಿದ್ದ 75 ಎಸೆತಗಳಲ್ಲಿ ಬರೋಬ್ಬರಿ 14 ಸಿಕ್ಸರ್‌ಗಳು ಹಾಗೂ 9 ಬೌಂಡರಿಗಳೊಂದಿಗೆ 157 ರನ್‌ಗಳನ್ನು ಬಾರಿಸಿದ್ದಾರೆ. ಇವರ ಸ್ಪೋಟಕ ಶತಕದ ಮೂಲಕ ಶಾರ್ದುಲ್ ಠಾಕೂರ್ ನಾಯತ್ವದ ಮುಂಬೈ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 444 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗೋವಾಗೆ 445 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತು.
2024ರಲ್ಲಿ ಸರ್ಫರಾಝ್ ಖಾನ್ ಅವರು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಗೋವಾ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಸರ್ಫರಾಝ್ ಖಾನ್ ಅವರು ತಮ್ಮ ವೃತ್ತಿ ಜೀವನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಅನ್ನು ಆಡಿದ್ದಾರೆ. ಸರ್ಫರಾಝ್ ಖಾನ್ ಅವರ ಸಹೋದರ ಮುಶೀರ್ ಖಾನ್ ಕೂಡ 66 ಎಸೆತಗಳಲ್ಲಿ 60 ರನ್‌ಗಳನ್ನು ಬಾರಿಸಿದರು. ಇನ್ನು ವಿಕೆಟ್ ಕೀಪರ್ ಹಾರ್ದಿಕ್ ತೋಮರ್ ಕೇವಲ 28 ಎಸೆತಗಳಲ್ಲಿ 53 ರನ್‌ಗಳನ್ನು ಬಾರಿಸಿದ್ದಾರೆ.
ನ್ಯೂಜಿಲೆಂಡ್ ಏಕದಿನ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ
ಸರ್ಫರಾಝ್ ಖಾನ್ ಅವರು ತಮ್ಮ ಸಹೋದರ ಮುಶೀರ್ ಖಾನ್ ಅವರ ಜೊತೆ ಮೂರನೇ ವಿಕೆಟ್‌ಗೆ 60 ಎಸೆತಗಳಲ್ಲಿ 93 ರನ್‌ಗಳ ಜೊತೆಯಾಟವನ್ನು ಆಡಿದ್ದರು. ನಂತರ ನಾಯಕ ಶಾರ್ದುಲ್ ಠಾಕೂರ್ ಅವರ ಜೊತೆಗೆ ಐದನೇ ವಿಕೆಟ್‌ಗೆ 13 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಇದಾದ ಬಳಿಕ ಹಾರ್ದಿಕ್ ತೋಮರ್ ಅವರ ಜೊತೆಗೆ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ59 ರನ್‌ಗಳನ್ನು ಬಾರಿಸಿದ್ದಾರೆ.
ಅಂದ ಹಾಗೆ ಯುವ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ಅವರು ಕೇವಲ 56 ಎಸೆತಗಳಲ್ಲಿಯೇ ಶತಕವನ್ನು ಪೂರ್ಣಗೊಳಿಸಿದ್ದರು. ಅಲ್ಲದೆ ತಮ್ಮ 72ನೇ ಎಸೆತದಲ್ಲಿ ಹಾಗೂ 42ನೇ ಓವರ್‌ನ ಮೊದಲನೇ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸುವ ಮೂಕ 150 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಮುಂಬೈ ತಂಡದ ಮೂರನೇ ಪಂದ್ಯದಲ್ಲಿ ಆಡಲು ಮುಂಬೈ ಬ್ಯಾಟ್ಸ್‌ಮನ್‌ಗೇ ಅವಕಾಶ ಸಿಕ್ಕಿರಲಿಲ್ಲ. ಅವರು ಇದಕ್ಕೂ ಮುನ್ನ ಉತ್ತರಾಖಂಡ ವಿರುದ್ಧ 55 ರನ್‌ಗಳನ್ನು ಬಾರಿಸಿದ್ದರು.
ನ್ಯೂಜಿಲೆಂಡ್ ಏಕದಿನ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ
ಸರ್ಫರಾಝ್ ಖಾನ್ ಅವರು ಇದಕ್ಕೂ ಮುನ್ನ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿಯೂ ತಮ್ಮ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಅಸ್ಸಾಂ ವಿರುದ್ಧ ಅಜೇಯ ಶತಕ ಸಿಡಿಸಿದ ಬಳಿಕ ಕೇರಳ, ಹರಿಯಾಣ ಹಾಗೂ ರಾಜಸ್ಥಾನ್ ವಿರುದ್ಧ ಕ್ರಮವಾಗಿ 52, 64 ಹಾಗೂ 73 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಫಲವಾಗಿ ಅವರನ್ನು 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂಲ ಬೆಲೆ 75 ಲಕ್ಷ ರು. ಗಳಿಗೆ ಖರೀದಿಸಿತ್ತು.