ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KAR vs KER: ದೇವದತ್‌ ಪಡಿಕ್ಕಲ್‌, ಕರುಣ್‌ ನಾಯರ್‌ ಭರ್ಜರಿ ಶತಕ, ಕೇರಳ ಎದುರು ಕರ್ನಾಟಕಕ್ಕೆ ಭರ್ಜರಿ ಜಯ!

KAR vs KER Match Highlights: ದೇವದತ್‌ ಪಡಿಕ್ಕಲ್‌ ಹಾಗೂ ಕರುಣ್‌ ನಾಯರ್‌ ಅವರ ಶತಕಗಳ ಬಲದಿಂದ ಕರ್ನಾಟಕ ತಂಡ, ಕೇರಳ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಎರಡನೇ ಜಯ ಗಳಿಸಿದೆ ಹಾಗೂ ಪಾಯಿಂಟ್ಸ್‌ ಟೇಬಲ್‌ನ ಗ್ರೂಪ್‌ ಎ ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.

ಕೇರಳ ಎದುರು ಶತಕ ಬಾರಿಸಿದ ದೇವದತ್‌ ಪಡಿಕ್ಕಲ್‌.

ಅಹಮದಾಬಾದ್‌: ದೇವದತ್‌ ಪಡಿಕ್ಕಲ್‌ (Devdutt Padikkal) ಹಾಗೂ ಕರುಣ್‌ ನಾಯರ್‌ (Karun Nair) ಅವರ ಶತಕಗಳ ಮೂಲಕ ಕರ್ನಾಟಕ (Karnataka) ತಂಡ, ಕೇರಳ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಸತತ ಎರಡನೇ ಜಯ ಪಡೆದಿದ್ದು, ಎ ಗ್ರೂಪ್‌ನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 285 ರನ್‌ಗಳ ಚೇಸಿಂಗ್‌ನಲ್ಲಿ 130 ಎಸೆತಗಳಲ್ಲಿ ಅಜೇಯ 130 ರನ್‌ ಬಾರಿಸಿ ಕರ್ನಾಟಕ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕರುಣ್‌ ನಾಯರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕೇರಳ ನೀಡಿದ್ದ 285 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಒಂದು ರನ್‌ ಇರುವಾಗಲೇ ನಾಯಕ ಮಯಂಕ್‌ ಅಗರ್ವಾಲ್‌ ಅವರ ವಿಕೆಟ್‌ ಅನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕ್ಕಲ್‌ ಹಾಗೂ ಕರುಣ್‌ ನಾಯರ್‌ ತಲಾ ಶತಕಗಳನ್ನು ಸಿಡಿಸುವ ಜೊತೆಗೆ ಎರಡನೇ ವಿಕೆಟ್‌ಗೆ 222 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಕರ್ನಾಟಕ ತಂಡವನ್ನು ಗೆಲ್ಲಿಸಿದರು. ಕರ್ನಾಟಕ ತಂಡ 48.2 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 285 ರನ್‌ ಗಳಿಸಿ ಗೆಲುವು ಪಡೆಯಿತು.

Vijay Hazare Trophy: ದೇವದತ್‌ ಪಡಿಕ್ಕಲ್‌ ಶತಕ, 413 ರನ್‌ ಚೇಸ್‌ ಮಾಡಿ ಗೆದ್ದ ಕರ್ನಾಟಕ!

ಪಡಿಕ್ಕಲ್‌-ಕರುಣ್‌ ಅಬ್ಬರದ ಶತಕ

ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕರುಣ್‌ ನಾಯರ್‌ ಹಾಗೂ ದೇವದತ್ ಪಡಿಕ್ಕಲ್‌ ತಲಾ ಶತಕಗಳನ್ನು ಬಾರಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿಯೂ ಶತಕ ಸಿಡಿಸಿದ್ದ ದೇವದತ್‌ ಪಡಿಕ್ಕಲ್‌, 137 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 124 ರನ್‌ಗಳನ್ನು ಬಾರಿಸಿದರು. ಆ ಮೂಲಕ ಈ ಟೂರ್ನಿಯಲ್ಲಿ ಸತತ ಎರಡನೇ ಶತಕವನ್ನು ಬಾರಿಸಿದರು. ಇನ್ನು ಇವರ ಜೊತೆ ಮತ್ತೊಂದು ತುದಿಯಲ್ಲಿ ದ್ವಿಶತಕದ ಜೊತೆಯಾಟವನ್ನು ಆಡಿದ್ದ ಕರುಣ್‌ ನಾಯರ್‌ ಅವರು ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಅವರು ಆಡಿದ 130 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 130 ರನ್‌ಗಳನ್ನು ಗಳಿಸಿದರು. ಆ ಮೂಲಕ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲ್ಲಿಸಿದರು. ಕೊನೆಯಲ್ಲಿ ಸ್ಮರಣ್‌ ರವಿಚಂದ್ರನ್‌ 16 ಎಸೆತಗಳಲ್ಲಿ 25 ರನ್‌ಗಳನ್ನು ಗಳಿಸಿದರು.

Vijay Hazare Trophy: ಶತಕ ಸಿಡಿಸಿದ ಮುಂದಿನ ಪಂದ್ಯದಲ್ಲಿಯೇ ಡಕ್‌ಔಟ್‌ ಆದ ರೋಹಿತ್‌ ಶರ್ಮಾ!

284 ರನ್‌ಗಳನ್ನು ಕಲೆ ಹಾಕಿದ್ದ ಕೇರಳ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಕೇರಳ ತಂಡ, ಬಾಬಾ ಅಪರಿಜೀತ್‌ (71) ಹಾಗೂ ಮೊಹಮ್ಮದ್‌ ಅಝರುದ್ದೀನ್‌ (84) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 284 ರನ್‌ಗಳನ್ನು ಕಲೆ ಹಾಕಿತು. ಅಂದ ಹಾಗೆ ಕೇರಳ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ತಂಡದ ಮೊತ್ತ 12 ರನ್‌ ಗಳಿಸಿರುವ ವೇಳೆ ಅಭಿಷೇಕ್‌ ನಾಯರ್‌ ಹಾಗೂ ಅಹಮದ್‌ ಇಮ್ರಾನ್‌ ವಿಕೆಟ್‌ ಒಪ್ಪಿಸಿದ್ದರು. ನಂತರ ತಂಡದ ಮೊತ್ತ 49 ರನ್‌ ಇರುವಾಗ ಕಣ್ಣುಮಲ್‌ ಔಟ್‌ ಆಗಿದ್ದರು.ಈ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಅಭಿಲಾಷ್‌ ಶೆಟ್ಟಿ ಔಟ್‌ ಮಾಡಿದ್ದರು ಹಾಗೂ ಕೇರಳ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.