ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ತಿರುವನಂತಪುರಂನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಒಡಿಐ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಶತಕ ಸಿಡಿಸಿದರು. ಇದರ ಜೊತೆಗೆ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 15,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ ತವರಿನಲ್ಲಿ 7,000 ಒಡಿಐ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ.

ತವರಿನಲ್ಲಿ 7,000 ಒಡಿಐ ರನ್‌ ಪೂರ್ಣಗೊಳಿಸಿದ ವಿರಾಟ್‌ ಕೊಹ್ಲಿ.

ತಿರುವನಂತಪುರಂ: ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೆಪ್ಟೆಂಬರ್ 27ರಂದು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (IND vs WI) ಭರ್ಜರಿ ಶತಕವನ್ನು ಬಾರಿಸಿದರು. ಆ ಮೂಲಕ ತವರಿನಲ್ಲಿ 7,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. ಇಲ್ಲಿನ ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ ಅಜೇಯ 139 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವೆಸ್ಟ್ ಇಂಡೀಸ್ ನೀಡಿದ್ದ 296 ರನ್‌ಗಳ ಗುರಿಯನ್ನು ಭಾರತ ಕೇವಲ 41.4 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ತಲುಪಿತು. ಕೊಹ್ಲಿ ಕೇವಲ 88 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 139 ರನ್ ಗಳಿಸಿದರು. ಈ ಮೂಲಕ ತವರಿನಲ್ಲಿ 7,000 ಏಕದಿನ ರನ್‌ಗಳ ಮೈಲುಗಲ್ಲು ತಲುಪಿದರು. ಇದು ವಿರಾಟ್‌ ಕೊಹ್ಲಿಯ 131ನೇ ತವರಿನ ಏಕದಿನ ಪಂದ್ಯವಾಗಿತ್ತು. ಈ ಪಂದ್ಯದ ಮೂಲಕ ಅವರು ಒಟ್ಟು 7,006 ರನ್‌ಗಳನ್ನು ಪೂರೈಸಿದರು. ತವರಿನಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ. ತಮ್ಮ 23 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ಭಾರತದಲ್ಲಿ 164 ಏಕದಿನ ಪಂದ್ಯಗಳನ್ನಾಡಿ 6,976 ರನ್ ಗಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

ತವರಿನಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರು

ವಿರಾಟ್ ಕೊಹ್ಲಿ: 131 ಪಂದ್ಯಗಳಿಂದ 7,006 ರನ್‌ಗಳು

ಸಚಿನ್ ತೆಂಡೂಲ್ಕರ್: 164 ಪಂದ್ಯಗಳಿಂದ 6,976

ರಿಕಿ ಪಾಂಟಿಂಗ್: 153 ಪಂದ್ಯಗಳಿಂದ 5,406 ರನ್‌ಗಳು

ರೋಹಿತ್ ಶರ್ಮಾ: 104 ಪಂದ್ಯಗಳಿಂದ 5,249 ರನ್‌ಗಳು

ಜಾಕ್ ಕಾಲಿಸ್: 142 ಪಂದ್ಯಗಳಿಂದ 5,178

ವಿಂಡೀಸ್‌ ಎದುರು ವಿರಾಟ್‌ ಕೊಹ್ಲಿಯ 10ನೇ ಶತಕ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ತಮ್ಮ 10ನೇ ಏಕದಿನ ಶತಕ ದಾಖಲಿಸಿದರು. ಈ ಮೂಲಕ ಎರಡು ವಿಭಿನ್ನ ತಂಡಗಳ ವಿರುದ್ಧ ತಲಾ 10 ಏಕದಿನ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನೂ ಅವರು ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಏಕದಿನ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯೂ ಕೊಹ್ಲಿಯ ಹೆಸರಿನಲ್ಲಿದೆ.

ಕೊಹ್ಲಿ, ಗಿಲ್‌ ಬೊಂಬಾಟ್‌ ಶತಕ; ವಿಂಡಿಸ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಜಯ

ವೆಸ್ಟ್ ಇಂಡೀಸ್ ವಿರುದ್ಧ 10 ಏಕದಿನ ಶತಕಗಳನ್ನು ಗಳಿಸಿರುವ ಕೊಹ್ಲಿ, ಶ್ರೀಲಂಕಾ ವಿರುದ್ಧವೂ 10 ಶತಕಗಳನ್ನು ದಾಖಲಿಸಿದ್ದಾರೆ. ಕೆರಿಬಿಯನ್ ತಂಡದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿ ಕೊಹ್ಲಿ ಒಟ್ಟು 13 ಶತಕಗಳನ್ನು ಬಾರಿಸಿದ್ದಾರೆ. ಭಾರತದ ಮಾಜಿ ನಾಯಕ ಹಾಗೂ ಆರಂಭಿಕ ಬ್ಯಾಟರ್ ಸುನೀಲ್ ಗವಾಸ್ಕರ್ ಕೂಡ ವೆಸ್ಟ್ ಇಂಡೀಸ್ ವಿರುದ್ಧ ಎಲ್ಲ ಮಾದರಿಗಳಲ್ಲಿ 13 ಶತಕಗಳನ್ನು ಗಳಿಸಿದ್ದಾರೆ.

15,000 ರನ್‌ಗಳನ್ನು ಪೂರ್ಣಗೊಳಿಸಿದ ಕಿಂಗ್‌ ಕೊಹ್ಲಿ

ಇದಲ್ಲದೆ, ಮೊದಲ ಏಕದಿನ ಪಂದ್ಯದಲ್ಲಿನ ಅಮೋಘ ಇನಿಂಗ್ಸ್ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಮೈಲಿಗಲ್ಲನ್ನೂ ತಲುಪಿದರು. ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ 463 ಪಂದ್ಯಗಳಲ್ಲಿ 18,426 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 315 ಪಂದ್ಯಗಳಲ್ಲಿ 15,079 ರನ್ ಗಳಿಸಿದ್ದಾರೆ.