ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: 7 ರನ್‌ಗೆ ಔಟಾದರೂ ರಿಕಿ ಪಾಟಿಂಗ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ನ್ಯೂಜಿಲೆಂಡ್‌ ವಿರುದ್ಧ ಅತಿ ಹೆಚ್ಚು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ ಅವರನ್ನು ಹಿಂದಿಕ್ಕಿದ್ದಾರೆ. ಎರಡನೇ ಪಂದ್ಯದಲ್ಲಿ ಕೇವಲ 7 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಪಾಟಿಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ರಿಕಿ ಪಾಟಿಂಗ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ.

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ (IND vs NZ) 7 ರನ್‌ಗೆ ವಿಕೆಟ್‌ ಒಪ್ಪಿಸಿದರೂ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ (Ricky Ponting) ಅವರ ದಾಖಲೆಯನ್ನು ವಿರಾಟ್‌ ಕೊಹ್ಲಿ (Virat Kohli) ಮುರಿದಿದ್ದಾರೆ. ಒಡಿಐ ಇತಿಹಾಸದಲ್ಲಿ ಕಿವೀಸ್‌ ಎದುರು ಅತಿ ಹೆಚ್ಚು ರನ್‌ ದಾಖಲಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್‌ ಕೊಹ್ಲಿ, ರಿಕಿ ಪಾಟಿಂಗ್‌ ಅವರನ್ನು ಹಿಂದಿಕ್ಕಿದ್ದಾರೆ.

ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಕಿವೀಸ್‌ ಎದುರು ಒಡಿಐ ರನ್‌ಗಳ ಸಾಲಿನಲ್ಲಿ ಕೊಹ್ಲಿ ಹಾಗೂ ಪಾಟಿಂಗ್‌ 1971 ರನ್‌ಗಳ ಮೂಲಕ ಜಂಟಿ ಸ್ಥಾನದಲ್ಲಿದ್ದರು. ಆದರೆ, ಭಾರತದ ಚೇಸಿಂಗ್‌ನ ಎರಡನೇ ಓವರ್‌ನಲ್ಲಿ ಕವರ್‌ ಡ್ರೈವ್‌ ಮೂಲಕ ಕೊಹ್ಲಿ, ಪಾಟಿಂಗ್‌ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನದಲ್ಲಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಡೂಲ್ಕರ್‌, ಕುಮಾರ ಸಂಗಕ್ಕಾರ ಹಾಗೂ ಸನತ್‌ ಜಯಸೂರ್ಯ ನಂತರದ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ.

IND vs NZ: ಗುರ್ನೂರ್‌ ಬ್ರಾರ್‌ ಮಾರಕ ದಾಳಿಗೆ 134ಕ್ಕೆ ನ್ಯೂಜಿಲೆಂಡ್‌ ಆಲ್‌ಔಟ್‌, ಭಾರತಕ್ಕೆ 135 ರನ್‌ ಗುರಿ!

ನ್ಯೂಜಿಲೆಂಡ್‌ ಎದುರು ಅತಿ ಹೆಚ್ಚು ಒಡಿಐ ರನ್‌ ಗಳಿಸಿದ ಬ್ಯಾಟರ್ಸ್‌

ವಿರಾಟ್‌ ಕೊಹ್ಲಿ: 1978 ರನ್‌ಗಳು

ರಿಕಿ ಪಾಂಟಿಂಗ್‌: 1971 ರನ್‌ಗಳು

ಸಚಿನ್‌ ತೆಂಡೂಲ್ಕರ್‌: 1750 ರನ್‌ಗಳು

ಕುಮಾರ ಸಂಗಕ್ಕಾರ: 1568 ರನ್‌ಗಳು

ಸನತ್‌ ಜಯಸೂರ್ಯ: 1519 ರನ್‌ಗಳು

ವಿರಾಟ್‌ ಕೊಹ್ಲಿ ಮೊದಲನೇ ಪಂದ್ಯದಂತೆ ಎರಡನೇ ಪಂದ್ಯದಲ್ಲಿ ತಮ್ಮ ಲಯವನ್ನು ಮುಂದುವರಿಸುವಲ್ಲಿ ವಿಫಲರಾದರು. ನಾಲ್ಕನೇ ಓವರ್‌ನಲ್ಲಿ ಕವರ್‌ ಡ್ರೈವ್‌ ಹೊಡೆಯಲು ಪ್ರಯತ್ನಿಸಿ ಕ್ಯಾಚ್‌ ಕೊಟ್ಟರು. ಆ ಮೂಲಕ ಕೊಹ್ಲಿ ಕೇವಲ 7 ರನ್‌ಗೆ ಪೆವಿಲಿಯನ್‌ಗೆ ಮರಳಿದರು. ಇದಕ್ಕೂ ಮುನ್ನ ನಾಯಕ ಶುಭಮನ್‌ ಗಿಲ್‌ ಡಕ್‌ಔಟ್‌ ಆಗಿದ್ದರು.

IND vs NZ: ಸಚಿನ್‌ ತೆಂಡೂಲ್ಕರ್‌ರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

134 ರನ್‌ ಕಲೆ ಹಾಕಿದ ನ್ಯೂಜಿಲೆಂಡ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ನ್ಯೂಜಿಲೆಂಡ್‌ ತಂಡ, ಗುರ್ನೂರ್‌ ಬ್ರಾರ್‌ ಸೇರಿದಂತೆ ಟೀಮ್‌ ಇಂಡಿಯಾ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ನಲುಗಿತು. 100 ರನ್‌ ಕಲೆ ಹಾಕುವುದು ಅನುಮಾನ ಎಂಬ ಪರಿಸ್ಥಿತಿಯಲ್ಲಿ ಡ್ಯಾರಿಲ್‌ ಮಿಚೆಲ್‌ (55 ರನ್‌) ಹಾಗೂ ನಾಯಕ ಮಿಚೆಲ್‌ ಸ್ಯಾಂಟ್ನರ್‌ (31 ರನ್‌) ಅವರ ನಿರ್ಣಾಯಕ ಬ್ಯಾಟಿಂಗ್‌ ಬಲದಿಂದ ಕಿವೀಸ್‌ 134 ರನ್‌ಗಳನ್ನು ಕಲೆ ಹಾಕಿತು. ಇಲ್ಲವಾದಲ್ಲಿ ನ್ಯೂಜಿಲೆಂಡ್‌ ತಂಡ 100 ರನ್‌ ಗಳಿಸುವುದೂ ಕಷ್ಟವಾಗುತ್ತಿತ್ತು.

ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಗುರ್ನೂರ್‌ ಬ್ರಾರ್‌ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ಆಕಿಬ್‌ ನಬಿ, ಅನ್ಶುಲ್‌ ಕಾಂಬೋಜ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಅರ್ಷದೀಪ್‌ ಸಿಂಗ್‌ ಕೂಡ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದರಾದರೂ ಅವರಿಗೆ ಒಂದೂ ವಿಕೆಟ್‌ ಸಿಗಲಿಲ್ಲ.