ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಭಾರತದಲ್ಲಿ ಉತ್ಪಾದಿಸಿದ ಮೊದಲ ಮಾರುತಿ ಸುಜುಕಿ ಇ-ವಿಟಾರಾ ಕಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಮಾರುತಿ ಸುಜುಕಿಯ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಇ-ವಿಟಾರಾವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು. ಗುಜರಾತ್‌ನ ಅಹಮದಾಬಾದ್‌ನ ಹಂಸಲ್‌ಪುರದಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್‌ಗೆ ಭೇಟಿ ನೀಡಿದ ಮೋದಿ ಮಾರುತಿ ಸುಜುಕಿ ಕಂಪನಿಯ ಎಲೆಕ್ಟ್ರಿಕ್ ಕಾರು ‘ಮಾರುತಿ ಇ ವಿಟಾರಾ’ಗೆ ಗ್ರೀನ್‌ಗೆ ಚಾಲನೆ ನೀಡಿದರು.

ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನವನ್ನು ಲೋಕಾರ್ಪಣೆಗೊಳಿಸಿದ ಮೋದಿ

Profile Sushmitha Jain Aug 26, 2025 6:59 PM

ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಗುಜರಾತ್‌ನ (Gujarat) ಹಂಸಲ್‌ಪುರದ (Hansalpur) ಸುಜುಕಿ ಮೋಟಾರ್ ಉತ್ಪಾದನ ಘಟಕದಲ್ಲಿ(Suzuki Motor Plant) ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದರು. ಮೊದಲನೆಯದಾಗಿ ಮಾರುತಿ ಸುಜುಕಿಯ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದರು. ಎರಡನೆಯದಾಗಿ, ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್‌ಗಳ ಉತ್ಪಾದನೆಗೆ ಮೊದಲ ಕಾರ್ಖಾನೆಯ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಜಪಾನ್ ರಾಯಭಾರಿ ಕೀಚಿ ಒನೊ ಉಪಸ್ಥಿತರಿದ್ದರು.

ಪಿಎಂ ಮೋದಿ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಈ ಉದ್ಘಾಟನೆಯನ್ನು “ಭಾರತದ ಸ್ವಾವಲಂಬನೆಯ ಯಾತ್ರೆಯಲ್ಲಿ ವಿಶೇಷ ದಿನ” ಎಂದು ಕರೆದಿದ್ದಾರೆ. ಈ ಕಾರ್ಖಾನೆಯಲ್ಲಿ ತಯಾರಾದ ಎಲೆಕ್ಟ್ರಿಕ್ ವಾಹನಗಳು ವಿಶ್ವದ 100 ದೇಶಗಳಿಗೆ ರಫ್ತಾಗಲಿವೆ. ಮೊದಲ ಘಟಕವು ಇಂಗ್ಲೆಂಡ್‌ಗೆ ರವಾನೆಯಾಗಲಿದೆ. ಇ-ವಿಟಾರಾವನ್ನು ಕಳೆದ ವರ್ಷ ಯುರೋಪ್‌ನಲ್ಲಿ ಮೊದಲು ಪರಿಚಯಿಸಲಾಯಿತು ಮತ್ತು 2025ರ ಭಾರತ್ ಮೊಬಿಲಿಟಿ ಶೋದಲ್ಲಿ ಭಾರತದಲ್ಲಿ ಪ್ರದರ್ಶಿಸಲಾಯಿತು. ಇದನ್ನು ಟೊಯೊಟಾದ ಸಹಯೋಗದೊಂದಿಗೆ 40PL ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗಿದೆ. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಟೊಯೊಟಾದ ಅರ್ಬನ್ ಕ್ರೂಸರ್ ಇವಿ ಕೂಡ ತಯಾರಾಗಲಿದೆ.

ಈ ಸುದ್ದಿಯನ್ನು ಓದಿ: Namma Metro: ಬೆಂಗಳೂರಿನಲ್ಲಿ ಮೆಟ್ರೋ ಹಳಿಗೆ ಆಯತಪ್ಪಿ ಬಿದ್ದ ಭದ್ರತಾ ಸಿಬ್ಬಂದಿ; ಮುಂದೇನಾಯ್ತು? video Viral

ಈ ಎಲೆಕ್ಟ್ರಿಕ್ ಎಸ್‌ಯುವಿ 49 ಕಿಲೋವ್ಯಾಟ್ ಮತ್ತು 61 ಕಿಲೋವ್ಯಾಟ್‌ನ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ದೊಡ್ಡ ಬ್ಯಾಟರಿಯು ಡ್ಯುಯಲ್-ಮೋಟರ್ ಆಲ್‌ಗ್ರಿಪ್-ಇ ಆಲ್-ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿರುತ್ತದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ಸುಮಾರು 20 ಲಕ್ಷ ರೂಪಾಯಿಗಳು (ಎಕ್ಸ್-ಶೋರೂಮ್) ಇರಬಹುದು. ಇದು ಮಹೀಂದ್ರಾ BE6, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಝಡ್‌ಎಸ್ ಇವಿ ಜತೆ ಸ್ಪರ್ಧಿಸಲಿದೆ.

ಇದೇ ಸಂದರ್ಭದಲ್ಲಿ ಟಿಡಿಎಸ್ ಲಿಥಿಯಂ-ಐಯಾನ್ ಬ್ಯಾಟರಿ ಗುಜರಾತ್ (ಟಿಡಿಎಸ್‌ಜಿ) ಕಾರ್ಖಾನೆಯಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಸೆಲ್‌ಗಳು ಮತ್ತು ಹೈಬ್ರಿಡ್ ವಾಹನಗಳಿಗೆ ಎಲೆಕ್ಟ್ರೋಡ್‌ಗಳ ಉತ್ಪಾದನೆಗೆ ಮೋದಿ ಚಾಲನೆ ನೀಡಿದರು. ಇದು ತೋಶಿಬಾ, ಡೆನ್ಸೋ ಮತ್ತು ಸುಜುಕಿ ಸಹಯೋಗದ ಯೋಜನೆಯಾಗಿದೆ. ಈ ಕಾರ್ಖಾನೆಯು ಶೇ. 80 ಬ್ಯಾಟರಿ ಮೌಲ್ಯವನ್ನು ಸ್ಥಳೀಯವಾಗಿ ಉತ್ಪಾದಿಸಲಿದ್ದು, ಆಮದು ಅವಲಂಬನೆಯನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಭಾರತವನ್ನು ಗ್ರೀನ್ ಮೂವ್‌ಮೆಂಟ್‌ ಕೇಂದ್ರವನ್ನಾಗಿಸುವ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬಲಪಡಿಸುತ್ತವೆ.