ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ನಡುವೆ ಮುನಿಸು? ವಿಡಿಯೊ ವೈರಲ್‌

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಕ್ಯಾಂಪ್‌ನಲ್ಲಿ ಒಂದು ಅಚ್ಚರಿಯ ಸಂಗತಿ ಕಂಡುಬಂದಿದೆ. ಮೊದಲನೇ ಪಂದ್ಯದ ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿ ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನಡುವಣ ಬಾಂಧವ್ಯದ ಬಗ್ಗೆ ಅನುಮಾನಗಳು ಮೂಡಿಂ ಬಂದಿವೆ. ಈ ಸಂಬಂಧ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.

ಗೌತಮ್‌ ಗಂಭೀರ್‌-ವಿರಾಟ್‌ ಕೊಹ್ಲಿ ನಡುವೆ ಮುನಿಸು?

ಬರ್ಮಿಂಗ್‌ಹ್ಯಾಮ್‌: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಣ ಮೊದಲನೇ ಏಕದಿನ ಪ೦ದ್ಯದ ನಿಮಿತ್ತ ಅಭ್ಯಾಸದ ವೇಳೆ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ನಡುವೆ ಯಾವುದೇ ಸಂಭಾಷಣೆ ನಡೆಯಲಿಲ್ಲ. ಅಭ್ಯಾಸದ ಯಾವುದೇ ಹಂತದಲ್ಲಿಯೂ ಕೊಹ್ಲಿ ಹಾಗೂ ಗಂಭೀರ್‌ ಮಾತನಾಡಿದ ದೃಶ್ಯಗಳು ಎಲ್ಲಿಯೂ ಕಾಣಲೇ ಇಲ್ಲ. ಇದರಿಂದಾಗಿ ಕೊಹ್ಲಿ ಹಾಗೂ ಗಂಭೀರ್‌ ನಡುವೆ ಸಂಗತಿಗಳು ಉತ್ತಮವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆದರೆ, ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ಬಹುತೇಕ ಸಮಯ ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ಅವರು ಮಾತ್ರ ಹಿರಿಯ ಬ್ಯಾಟ್ಸ್‌ಮನ್‌ ಬಳಿ ಸಂಭಾಷಣೆ ನಡೆಸುತ್ತಿದ್ದರು.

ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ ಹಾಗೂ ಕೆಎಲ್‌ ರಾಹುಲ್‌ ಅವರ ಜತೆ ಮಾತ್ರ ಗೌತಮ್‌ ಗಂಭೀರ್‌ ಮಾತನಾಡುತ್ತಿರುವುದು ಕಂಡುಬಂತು. ವರದಿಗಳ ಪ್ರಕಾರ, ವಿರಾಟ್‌ ಕೊಹ್ಲಿ ಅವರು ನೇರವಾಗಿ‌ ಗಂಭೀರ್ ಜೊತೆ ಎಲ್ಲಿಯೂ ಮಾತನಾಡಲಿಲ್ಲ. ಕೊಹ್ಲಿ ಹಾಗೂ ಗಂಭೀರ್‌ ಇಬ್ಬರೂ ದೆಹಲಿ ಆಟಗಾರರಾಗಿದ್ದು, ದೇಶಿ ಕ್ರಿಕೆಟ್‌ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೊತೆಯಾಗಿ ಆಡಿದ್ದಾರೆ.

ಆದರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಬಂದಾಗ ಈ ಇಬ್ಬರು ಬದ್ಧ ವೈರಿಗಳು ಎಂಬುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಆರ್‌ಸಿಬಿ vs ಕೆಕೆಆರ್‌ ಮತ್ತು ಆರ್‌ಸಿಬಿ vs ಎಲ್‌ಎಸ್‌ಜಿ ತಂಡಗಳ ನಡುವಣ ಪಂದ್ಯಗಳ ಸಮಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಇದಕ್ಕೆ ಸಂಬಧಿಸಿದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದರು.

ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ. 2026ರ ಐಪಿಎಲ್ ಫೈನಲ್‌ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಗೊಂಡಿದ್ದ ಕಾರಣ, ಅವರು ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು.

ಫೈನಲ್ ಪಂದ್ಯದ ಮಧ್ಯದಲ್ಲೇ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರೂ ನೋವನ್ನು ಲೆಕ್ಕಿಸದೇ ಬ್ಯಾಟಿಂಗ್ ಮುಂದುವರಿಸಿದ್ದ ಕೊಹ್ಲಿ ಅಜೇಯ 75 ರನ್‌ಗಳ ಅಮೋಘ ಇನಿಂಗ್ಸ್ ಆಡಿ ಆರ್‌ಸಿಬಿಗೆ ಸತತ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇನ್ನೊಂದೆಡೆ, ಇದೇ ಪ್ರವಾಸದ ಟಿ20ಐ ಸರಣಿಯಲ್ಲಿ ಭಾರತವನ್ನು 4-0 ಅಂತರದಿಂದ ವೈಟ್‌ವಾಶ್ ಮಾಡಿರುವ ಇಂಗ್ಲೆಂಡ್ ತಂಡ ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದು, ಅದೇ ಲಯವನ್ನು ಏಕದಿನ ಸರಣಿಯಲ್ಲೂ ಮುಂದುವರಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ.



ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಖಾತೆಯೊಂದು ಹಂಚಿಕೊಂಡಿರುವ ವಿಡಿಯೊದಲ್ಲಿ ಎಜ್‌ಬಾಸ್ಟನ್‌ನ ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಯಾವುದೇ ಮಾತುಕತೆ ಅಥವಾ ಪರಸ್ಪರ ಸಂವಹನ ಕಂಡುಬರದಿರುವುದು ಗಮನ ಸೆಳೆದಿದೆ. ಈ ದೃಶ್ಯ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಊಹಾಪೋಹಗಳಿಗೆ ಮತ್ತೆ ಜೀವ ತುಂಬಿದೆ. ಆದರೆ ಈ ಕುರಿತು ಕೊಹ್ಲಿ ಅಥವಾ ಗಂಭೀರ್ ಯಾರೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಇದೀಗ ಭಾರತ ಪರ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಅವರು ಮೈದಾನಕ್ಕಿಳಿಯುವ ಪ್ರತಿಯೊಂದು ಪಂದ್ಯವೂ ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದ ತೀವ್ರ ಗಮನ ಸೆಳೆಯುತ್ತಿದೆ.

ಭಾರತ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌

ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ನೆಟ್ಸ್ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಶುಭ್‌ಮನ್ ಗಿಲ್ ಸುದೀರ್ಘವಾಗಿ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು. ಈ ಕುರಿತು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ತಮ್ಮ ಮಾತುಕತೆ 2027ರ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ತಂಡದ ಸಂಯೋಜನೆ ರೂಪಿಸುವ ವಿಚಾರ ಎಂದು ತಿಳಿಸಿದರು.

"ನಾವು ತಂಡದ ಸಂಯೋಜನೆಯ ಬಗ್ಗೆ ಚರ್ಚಿಸುತ್ತಿದ್ದೆವು. ಯಾವ ರೀತಿಯ ತಂಡದ ಸಂಯೋಜನೆ ನಮಗೆ ಅತ್ಯುತ್ತಮವಾಗಿರುತ್ತದೆ? ಈಗ ತಂಡದಲ್ಲಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ನಮಗೆ ನೆರವಾಗಬಲ್ಲ ಆಟಗಾರರು ಯಾರು? ಯಾವ ಬೌಲರ್‌ಗಳು, ಯಾವ ಆಲ್‌ರೌಂಡರ್‌ಗಳು ಮತ್ತು ಯಾವ ಸ್ಪಿನ್ನರ್‌ಗಳು ತಂಡಕ್ಕೆ ಸೂಕ್ತರಾಗಬಹುದು? ಇಂತಹ ಎಲ್ಲ ವಿಷಯಗಳ ಬಗ್ಗೆ ನಾವು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ," ಎಂದು ಶುಭ್‌ಮನ್ ಗಿಲ್ ಹೇಳಿದ್ದರು.