ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs GT: ರಜತ್‌ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್‌, ಅಂಪೈರ್‌ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!

RCB vs GT: ಗುಜರಾತ್‌ ಟೈಟನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಜತ್‌ ಪಾಟಿದಾರ್‌ ಅವರ ವಿವಾದಾತ್ಮಕ ಕ್ಯಾಚ್‌ ಬಗ್ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂಪೈರ್‌ಗಳ ವಿರುದ್ಧ ಕಿಡಿಕಾರಿದ್ದಾರೆ. ಜೇಸನ್‌ ಹೋಲ್ಡರ್‌ ಕ್ಯಾಚ್‌ ಪಡೆದ ಬಳಿಕ ಚೆಂಡನ್ನು ನೆಲಕ್ಕೆ ತಾಗಿಸಿದ್ದಾರೆಂದು ಹೇಳಿದ್ದಾರೆ.

ರಜತ್‌ ಪಾಟಿದಾರ್‌ರ ಕ್ಯಾಚ್‌ ಪಡೆದ ಜೇಸನ್‌ ಹೋಲ್ಡರ್‌.

ಅಹಮದಾಬಾದ್‌: ಗುಜರಾತ್‌ ಟೈಟನ್ಸ್‌ ವಿರುದ್ದದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ರಜತ್‌ ಪಾಟಿದಾರ್‌ (Rajat Patidar) ಅವರ ವಿವಾದಾತ್ಮಕ ಕ್ಯಾಚ್‌ ಬಗ್ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಫೀಲ್ಡ್‌ ಅಂಪೈರ್‌ಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಏಪ್ರಿಲ್‌ 30 ರಂದು ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಜತ್‌ ಪಾಟಿದಾರ್‌ ಅವರ ಕ್ಯಾಚ್‌ ಪಡೆಯುವ ವೇಳೆ ಜೇಸನ್‌ ಹೋಲ್ಡರ್‌ ಚೆಂಡನ್ನು ನೆಲಕ್ಕೆ ತಾಗಿಸಿರುವ ಟಿವಿ ರೀಪ್ಲೇನಲ್ಲಿ ಕಾಣುತ್ತಿತ್ತು. ಇದರ ಬಗ್ಗೆ ಕೊಹ್ಲಿ ಅಂಪೈರ್‌ಗಳ ವಿರುದ್ಧ ಕೊಹ್ಲಿ ರೊಚ್ಚಿಗೆದ್ದಿದ್ದರು.

ಪಂದ್ಯದ ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಅರ್ಷದ್‌ ಖಾನ್‌ ಎಸೆದ ಶಾರ್ಟ್‌ ಎಸೆತದಲ್ಲಿ ರಜತ್‌ ಪಾಟಿದಾರ್‌ ಸಿಕ್ಸರ್‌ ಬಾರಿಸಲು ಪ್ರಯತ್ನ ನಡೆಸಿದರು. ಆದರೆ, ಆರ್‌ಸಿಬಿ ನಾಯಕ ಸರಿಯಾಗಿ ಟೈಮ್‌ ಹಾಗೂ ಚೆಂಡನ್ನು ಮಿಡೆಲ್‌ ಮಾಡುವಲ್ಲಿ ವಿಫಲರಾದರು. ಇದರ ಪರಿಣಾಮ ಚೆಂಡು ಡೀಪ್‌ ಸ್ಕೈರ್‌ ಲೆಗ್‌ನಲ್ಲಿ ಗಾಳಿಯಲ್ಲಿ ಹಾರಿತು. ಇಲ್ಲಿ ಬೌಂಡರಿ ಲೈನ್‌ ಬಳಿ ನಿಂತಿದ್ದ ಜೇಸನ್‌ ಹೋಲ್ಡರ್‌ ಒಂದು ಕಡೆಯಿಂದ ಓಡಿ ಬಂದರೆ, ಮತ್ತೊಂದು ಕಡೆ ಕಗಿಸೊ ರಬಾಡ ಕೂಡ ಕ್ಯಾಚ್‌ ಪಡೆಯಲು ಮುಂದಾದರು.

RCB vs GT: ಟಾಸ್‌ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬ್ಯಾಟಿಂಗ್‌!

ಈ ವೇಳೆ ಜೇಸನ್‌ ಹೋಲ್ಡರ್‌ ವೇಗವಾಗಿ ಬಂದು ಚೆಂಡನ್ನು ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದರು, ಆದರೆ ಅವರು ಕ್ಯಾಚ್‌ ಪಡೆದ ಬಳಿಕ ಚೆಂಡನ್ನು ನೆಲಕ್ಕೆ ತಾಗಿಸುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಸುತ್ತಿತ್ತು. ಇದನ್ನು ಗಮನಿಸಿದ ವಿರಾಟ್‌ ಕೊಹ್ಲಿ ಡಗೌಟ್‌ನಿಂದ ಹೊರಗಡೆ ಬಂದು ಅಂಪೈರ್‌ಗಳಿಗೆ ಚೆಂಡು ನೆಲಕ್ಕೆ ತಾಗಿಸುತ್ತಿರುವ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಅವರು ಅಂಪೈರ್‌ಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು.



ಕ್ಯಾಚ್ ನಂತರ ಭುಗಿಲೆದ್ದ ವಿವಾದ

ಕ್ಯಾಚ್ ಪಡೆದ ತಕ್ಷಣ ವಿವಾದ ಉಂಟಾಯಿತು. ಹೋಲ್ಡರ್ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಪಡೆದಿರಲಿಲ್ಲ ಮತ್ತು ಅವರು ಕ್ಯಾಚ್ ಪೂರ್ಣಗೊಳಿಸುವಾಗ ಚೆಂಡು ನೆಲಕ್ಕೆ ಉಜ್ಜಿದ್ದರು ಎಂದು ಆರ್‌ಸಿಬಿ ಆಟಗಾರರು ಭಾವಿಸಿದರು. ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಕೋಚ್ ಆಂಡಿ ಫ್ಲವರ್ ಈ ನಿರ್ಧಾರದಿಂದ ಅತೃಪ್ತರಾಗಿದ್ದರು. ಕಾಮೆಂಟರಿ ಬಾಕ್ಸ್‌ನಲ್ಲಿ ಆರ್‌ಸಿಬಿ ಶಿಬಿರಕ್ಕೆ ಇದು ಋತುವಿನ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲ್ಪಡುತ್ತಿದ್ದರೂ, ಅದು ವಿವಾದಾತ್ಮಕ ತೀರ್ಪಾಗಿ ಮಾರ್ಪಟ್ಟಿತು.



ವಿರಾಟ್ ಕೊಹ್ಲಿ ವಾದಕ್ಕೆ ಧುಮುಕಿದರು

ವಿರಾಟ್ ಕೊಹ್ಲಿ ನಾಲ್ಕನೇ ಅಂಪೈರ್ ಮತ್ತು ಮ್ಯಾಚ್ ರೆಫರಿಯೊಂದಿಗೆ ದೀರ್ಘಕಾಲ ವಾಗ್ವಾದದಲ್ಲಿ ತೊಡಗಿರುವುದು ಕಂಡುಬಂದಿತು. ಪಂದ್ಯದ ನಿರ್ಣಾಯಕ ಹಂತದಲ್ಲಿ ಪಾಟಿದಾರ್ 19 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಎಂಬ ಕಾರಣಕ್ಕೆ ತಂತ್ರಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕಿತ್ತು ಎಂದು ಕೊಹ್ಲಿ ವಾದಿಸಿದರು. ಆರ್‌ಸಿಬಿ ಡಗೌಟ್‌ನಲ್ಲಿಯೂ ಸಹ ಆಂಡಿ ಫ್ಲವರ್ ಪದೇ-ಪದೆ ಅಂಪೈರ್‌ಗಳಿಂದ ಸ್ಪಷ್ಟೀಕರಣಗಳನ್ನು ಕೋರಿದರು; ಆದಾಗ್ಯೂ, ಅಧಿಕಾರಿಗಳು ತಮ್ಮ ನಿರ್ಧಾರವನ್ನು ಎತ್ತಿಹಿಡಿದರು ಮತ್ತು ಪಾಟಿದಾರ್ ಪೆವಿಲಿಯನ್‌ಗೆ ಮರಳಬೇಕಾಯಿತು.