ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ರೋಹಿತ್‌ ಶರ್ಮಾ ಅಲ್ಲ! ಬೆಸ್ಟ್‌ ಟಿ20 ಓಪನರ್‌ ಆರಿಸಿದ ವಿರಾಟ್‌ ಕೊಹ್ಲಿ!

Virat Kohli on Best T20 Opener: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದರ ನಡುವೆ ಅವರು ಟಿ20 ಕ್ರಿಕೆಟ್‌ನ ಅತ್ಯುತ್ತಮ ಓಪನಿಂಗ್‌ ಬ್ಯಾಟ್ಸ್‌ಮನ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ರೋಹಿತ್‌ ಶರ್ಮಾ ಅವರನ್ನು ಕಡೆಗಣಿಸಿ ವೆಸ್ಟ್‌ ಇಂಡೀಸ್‌ ದಿಗ್ಗಜನನ್ನು ಅವರು ಆರಿಸಿದ್ದಾರೆ.

ತಮ್ಮ ನೆಚ್ಚಿನ ಓಪನರ್‌ ಆರಿಸಿದ ವಿರಾಟ್‌ ಕೊಹ್ಲಿ.

ಬೆಂಗಳೂರು: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯು ಮಾರ್ಚ್‌ 28 ರಂದು ಆರಂಭವಾಗಲಿದೆ. ಈ ಟೂರ್ನಿಯ ನಿಮಿತ್ತ ಎಲ್ಲಾ ತಂಡಗಳು ಸಜ್ಜಾಗುತ್ತಿವೆ. ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಪರ ಕಣಕ್ಕೆ ಇಳಿಯಲಿದ್ದಾರೆ. ಇದೀಗ ಆರ್‌ಸಿಬಿ ಜೊತೆಗಿನ ಸಂಭಾಷಣೆಯಲ್ಲಿ ವಿರಾಟ್‌ ಕೊಹ್ಲಿ, ತಮ್ಮ ನೆಚ್ಚಿನ ಅತ್ಯುತ್ತಮ ಟಿ20 ಓಪನಿಂಗ್‌ ಬ್ಯಾಟ್ಸ್‌ಮನ್‌ ಅನ್ನು ಆರಿಸಿದ್ದಾರೆ. ಅವರು ಭಾರತ ತಂಡದ ಸಹ ಆರಂಭಿಕ ರೋಹಿತ್‌ ಶರ್ಮಾ ಅವರನ್ನು ಕೈ ಬಿಟ್ಟು, ವೆಸ್ಟ್‌ ಇಂಡೀಸ್‌ ದಿಗ್ಗಜ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್‌ ಗೇಲ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಟಿ20 ಕ್ರಿಕೆಟ್ ಲೆಜೆಂಡ್ ಗೇಲ್, 462 ಪಂದ್ಯಗಳಲ್ಲಿ 14,562 ರನ್ ಗಳಿಸಿದ್ದಾರೆ. ಮಾಜಿ ವೆಸ್ಟ್ ಇಂಡೀಸ್ ಓಪನರ್ 144.75 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಗೇಲ್ ಟಿ20 ಕ್ರಿಕೆಟ್‌ನಲ್ಲಿ ಕ್ರಾಂತಿಕಾರಿ ಪಾತ್ರವಹಿಸಿದ ಆಟಗಾರರಲ್ಲೊಬ್ಬರು. ಅವರು ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಟಿ20ಯಲ್ಲಿ 22 ಶತಕಗಳನ್ನು ಬಾರಿಸಿರುವ ಗೇಲ್, 1056 ಸಿಕ್ಸ್‌ಗಳನ್ನು ದಾಖಲಿಸಿದ್ದಾರೆ. ಅವರು ವಿಶ್ವ ಕ್ರಿಕೆಟ್‌ನಲ್ಲಿ 1000ಕ್ಕೂ ಹೆಚ್ಚು ಟಿ20 ಸಿಕ್ಸ್ ಹೊಂದಿರುವ ಏಕೈಕ ಬ್ಯಾಟ್ಸ್‌ಮನ್. ಜೊತೆಗೆ, ಚುಟಕು ಸ್ವರೂಪದಲ್ಲಿ 15ಕ್ಕಿಂತ ಹೆಚ್ಚು ಶತಕಗಳನ್ನು ಹೊಂದಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಹುದ್ದೆಯನ್ನು ತೊರೆದ ಕೆವಿನ್‌ ಪೀಟರ್ಸನ್‌!

ಕ್ರಿಸ್‌ ಗೇಲ್‌ ಅವರು ವಿರಾಟ್‌ ಕೊಹ್ಲಿ ಅವರೊಂದಿಗೆ ಆರ್‌ಸಿಬಿ ತಂಡದಲ್ಲಿ ಏಳು ವರ್ಷಗಳ ಕಾಲ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದರು. ಈ ಅವಧಿಯಲ್ಲಿ ಇಬ್ಬರೂ ಅನೇಕ ಸ್ಮರಣೀಯ ಜೊತೆಯಾಟಗಳನ್ನು ಆಡಿದ್ದಾರೆ. ಆರ್‌ಸಿಬಿ ಪರ ಆಡಿದ 85ಐಪಿಎಲ್‌ ಪಂದ್ಯಗಳಲ್ಲಿ ಗೇಲ್ 3,163 ರನ್ ಗಳಿಸಿದ್ದು, 152.72 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದ್ದಾರೆ. ಅವರ ಆಕ್ರಮಣಕಾರಿ ಬ್ಯಾಟಿಂಗ್ ತಂಡದ ಹಲವು ಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ.

ರೋಹಿತ್‌ ಶರ್ಮಾ 2022ರ ಐಸಿಸಿ ಟಿ20 ವಿಶ್ವಕಪ್‌ ನಂತರ ಭಾರತ ತಂಡದ ಬ್ಯಾಟಿಂಗ್ ಶೈಲಿಯಲ್ಲಿ ದೊಡ್ಡ ಬದಲಾವಣೆ ತಂದರು. ಅವರು ವೇಗವಾಗಿ ಹಾಗೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿದ್ದು, ಅವರ ಆಕ್ರಮಣಕಾರಿ ಶೈಲಿ ಇತರ ಆಟಗಾರರ ಮೇಲೂ ಪ್ರಭಾವ ಬೀರಿತು. ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಯಶಸ್ಸಿಗೆ “ದಿ ಹಿಟ್‌ಮ್ಯಾನ್” ಎಂದೇ ಪ್ರಸಿದ್ಧರಾದ ರೋಹಿತ್ ಅವರಿಗೆ ದೊಡ್ಡ ಕ್ರೆಡಿಟ್ ಸಲ್ಲುತ್ತದೆ.

ʻಶ್ರೇಯಸ್‌ ಅಯ್ಯರ್‌ರನ್ನು ರಿಲೀಸ್‌ ಮಾಡಬಾರದಿತ್ತುʼ-ಕೋಲ್ಕತಾ ಫ್ರಾಂಚೈಸಿಯನ್ನು ಟೀಕಿಸಿದ ಅನಿಲ್‌ ಕುಂಬ್ಳೆ!

ಇನ್ನೂ ಟಿ20 ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ರೋಹಿತ್, 2026 ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರವಾಗಿ ಆಡಲಿದ್ದಾರೆ. ರೋಹಿತ್ ಮತ್ತು ವಿರಾಟ್‌ ಕೊಹ್ಲಿ ಇಬ್ಬರೂ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಈಗ ಅವರು ಕೇವಲ ಒಡಿಐ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಏಪ್ರಿಲ್ 12ರಂದು ನಡೆಯಲಿರುವ 20ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿದೆ. ಆರ್‌ಸಿಬಿ ಈ ಸೀಸನ್‌ಗೆ ಹಾಲಿ ಚಾಂಪಿಯನ್ ತಂಡವಾಗಿ ಪ್ರವೇಶಿಸುತ್ತಿದೆ. ಇತ್ತ ಮುಂಬೈ ಇಂಡಿಯನ್ಸ್ 2025ರ ಐಪಿಎಲ್‌ನಲ್ಲಿ ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.