ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೊಹ್ಲಿ-ಸಾಲ್ಟ್‌ ಓಪನರ್ಸ್‌, ಕೆಕೆಆರ್‌ ವಿರುದ್ದದ ಆರಂಭಿಕ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

RCB Probable Playing against KKR: ಬಹುನಿರೀಕ್ಷಿರ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್‌ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಆರ್‌ಸಿಬಿಯ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ಕೆಕೆಆರ್‌ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿನ ಕ್ಷಣವನ್ನು ಆನಂದಿಸಿರುವ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಇದೀಗ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯನ್ನು ಕಣ್ತುಂಬಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮಾರ್ಚ್‌ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (RCB vs KKR) ತಂಡಗಳು ಕಾದಾಟ ನಡೆಸಲಿವೆ. 18 ವರ್ಷಗಳ ಚೊಚ್ಚಲ ಕಪ್‌ ಗೆಲುವಿನ ಕನಸಿನೊಂದಿಗೆ ಆರ್‌ಸಿಬಿ ಈ ಬಾರಿಯೂ ಕಣಕ್ಕೆ ಇಳಿಯಲಿದೆ. ಈ ಬಾರಿ ರಜತ್‌ ಪಾಟಿದಾರ್‌ (Rajat Patidar) ಅವರ ನಾಯಕತ್ವದಲ್ಲಿ ಬೆಂಗಳೂರು ತಂಡ ಅಖಾಡಕ್ಕೆ ಇಳಿಯಲಿದೆ.

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಆರ್‌ಸಿಬಿ ತಂಡದ ಪ್ಲೇಯಿಂಗ್‌ XI ಬಗ್ಗೆ ಸಾಕಷ್ಟು ಕುತೂಹಲವಿದೆ. ನೂತನ ನಾಯಕ ರಜತ್‌ ಪಾಟಿದಾರ್‌ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಆದರೆ, ಕೆಕೆಆರ್‌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XI ಯಾವ ರೀತಿ ಇರಬಹುದೆಂದು ಇಲ್ಲಿ ವಿವರಿಸಲಾಗಿದೆ. ಎಂದಿನಂತೆ ವಿರಾಟ್‌ ಕೊಹ್ಲಿ ಇನಿಂಗ್ಸ್‌ ಆರಂಭಿಸಲಿದ್ದಾರೆ. ಹೊಸ ಆಟಗಾರ ಫಿಲ್‌ ಸಾಲ್ಟ್‌ ಮತ್ತೊಂದು ತುದಿಯಲ್ಲಿ ವಿರಾಟ್‌ ಕೊಹ್ಲಿಗೆ ಸಾಥ್‌ ನೀಡಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ನಾಯಕ ರಜತ್‌ ಪಾಟಿದಾರ್‌ ಆಡಲಿದ್ದಾರೆ. ನಂತರದ ಕ್ರಮಾಂಕಗಳಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ಟಿಮ್‌ ಡೇವಿಡ್‌ ಹಾಗೂ ಕೃಣಾಲ್‌ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ.

IPL 2025: ಕ್ರಿಕೆಟ್‌ ಆಡುವಾಗ ಗಾಯಕ್ಕೆ ತುತ್ತಾಗಿದ್ದ ರಾಹುಲ್‌ ದ್ರಾವಿಡ್‌ ರಾಜಸ್ಥಾನ್‌ ರಾಯಲ್ಸ್‌ಗೆ ಸೇರ್ಪಡೆ!

ಇನ್ನು ಜಿತೇಶ್‌ ಶರ್ಮಾ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಆಡಲಿದ್ದಾರೆ. ಆ ಮೂಲಕ ಮತ್ತೊರ್ವ ಆರಂಭಿಕ ಹಾಗೂ ವಿಕೆಟ್‌ ಕೀಪರ್‌ ಫಿಲ್‌ ಸಾಲ್ಟ್‌ ಕೇವಲ ಬ್ಯಾಟ್ಸ್‌ಮನ್‌ ಆಗಿ ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ಆರಂಭಿಕ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ.

ಜಾಶ್‌ ಹೇಝಲ್‌ವುಡ್‌ ಇಲ್ಲ

ಮೆಗಾ ಹರಾಜಿನಲ್ಲಿ 12.5 ಕೋಟಿ ರೂ. ಗಳಿಗೆ ಖರೀದಿಸಿದ್ದ ಆಸ್ಟ್ರೇಲಿಯಾ ವೇಗದ ಬೌಲರ್‌ ಜಾಶ್‌ ಹೇಝಲ್‌ವುಡ್‌, ಗಾಯದ ಕಾರಣ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಕಳೆದುಕೊಂಡಿದ್ದರು. ಇದೀಗ ಅವರಿಗೆ ಆರ್‌ಸಿಬಿ ತಂಡ ಸಂಪೂರ್ಣ ಫಿಟ್‌ ಆಗಲು ಇನ್ನಷ್ಟು ಸಮಯ ನೀಡಬಹುದು. ಈ ಕಾರಣದಿಂದ ಆರ್‌ಸಿಬಿ ಸ್ಟ್ರೈಕ್‌ ವೇಗಿ ಇಲ್ಲದೆ ತನ್ನ ಮೊದಲನೇ ಪಂದ್ಯವನ್ನುಆಡಲಿದೆ.

ಜಾಶ್‌ ಹೇಝಲ್‌ವುಡ್‌ ಅನುಪಸ್ಥಿತಿಯಲ್ಲಿ ಆರ್‌ಸಿಬಿಯ ವೇಗದ ಬೌಲಿಂಗ್‌ ವಿಭಾಗವನ್ನು ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ಮುನ್ನಡೆಸಲಿದ್ದಾರೆ., ಲುಂಗಿ ಎನ್‌ಗಿಡಿ ಮೊದಲ ವಿದೇಶಿ ಫಾಸ್ಟ್‌ ಬೌಲರ್‌ ಆಗಿ ಆಡಲಿದ್ದಾರೆ. ರಾಸಿಕ್‌ ದಾರ್‌ ಹಾಗೂ ಯಶ್‌ ದಯಾಳ್‌ ಅವರು ಕೂಡ ವೇಗದ ಬೌಲಿಂಗ್‌ ವಿಭಾಗಕ್ಕೆ ಬಲವನ್ನು ತಂದುಕೊಡಲಿದ್ದಾರೆ. ಇನ್ನು ಮುಂಚೂಣಿ ಸ್ಪಿನ್ನರ್‌ ಆಗಿ ಕೃಣಾಲ್‌ ಪಾಂಡ್ಯ ಆಡಲಿದ್ದಾರೆ.

IPL 2025: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆಯಲು ವಿರಾಟ್‌ ಕೊಹ್ಲಿಗೆ ಒಂದು ಶತಕ ಅಗತ್ಯ!

ಕೆಕೆಆರ್‌ ವಿರುದ್ದದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ (ವಿ.ಕೀ), ಟಿಮ್‌ ಡೇವಿಡ್‌, ಕೃಣಾಲ್‌ ಪಾಂಡ್ಯ, ರಾಸಿಕ್‌ ದಾರ್‌, ಭುವನೇಶ್ವರ್‌ ಕುಮಾರ್‌, ಲುಂಗಿ ಎನ್‌ಗಿಡಿ, ಯಶ್‌ ದಯಾಳ್‌

ಇಂಪ್ಯಾಕ್ಟ್‌ ಪ್ಲೇಯರ್‌: ಸುಯೇಶ್‌ ಪ್ರಭು ದೇಸಾಯಿ