ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯ ಭೇಟಿ ವೇಳೆ ನಡೆದಿದ್ದ ಆಘಾತಕಾರಿ ಘಟನೆಗಳನ್ನು ರಿವೀಲ್‌ ಮಾಡಿದ ಜೋರ್ಡನ್‌ ಕಾಕ್ಸ್!

ಇಂಗ್ಲೆಂಡ್‌ ತಂಡದ ಆಟಗಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಟಗಾರ ಜೋರ್ಡನ್‌ ಕಾಕ್ಸ್‌ ಅವರು ಕಳೆದ ತಿಂಗಳು ಲಂಡನ್‌ನಲ್ಲಿ ಭಾರತೀಯ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾಗಿದ್ದರು. ಇಬ್ಬರೂ ಭೇಟಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಕಾಕ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ಲಂಡನ್‌ನಲ್ಲಿ ವಿರಾಟ್‌ ಕೊಹ್ಲಿ, ಜೋರ್ಡನ್‌ ಕಾಕ್ಸ್ ಭೇಟಿ.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG) ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಎದುರು ನೋಡುತ್ತಿದ್ದಾರೆ. 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 600ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ಸ್ಕಾಯು ಸೆಳೆತದ ಗಾಯದ ಕಾರಣ, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಇದೀಗ ಅವರು ಇಂಗ್ಲೆಂಡ್‌ ಸರಣಿಯಲ್ಲಿ ಆಡಲಿದ್ದಾರೆ. ಜುಲೈ 14 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲನೇ ಪಂದ್ಯ ನಡೆಯಲಿದೆ. ಮೊದಲನೇ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜೋರ್ಡನ್‌ ಕಾಕ್ಸ್‌ (Jordan Cox) ಅವರು ಲಂಡನ್‌ನಲ್ಲಿ ವಿರಾಟ್‌ ಕೊಹ್ಲಿಯನ್ನು ಭೇಟಿ ಮಾಡಿದ್ದ ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಸಹ ಆಟಗಾರನಾಗಿರುವ ಕಾಕ್ಸ್, ಕಳೆದ ತಿಂಗಳು ಲಂಡನ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಅನ್ನು ಭೇಟಿಯಾಗಿದ್ದರು. ಇಬ್ಬರ ಭೇಟಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಈ ಭೇಟಿಯ ಕುರಿತು ಮಾತನಾಡಿದ ಕಾಕ್ಸ್, ತಮ್ಮಿಬ್ಬರೂ ಈ ಭೇಟಿಯನ್ನು ಸಾಧ್ಯವಾದಷ್ಟು ಗೌಪ್ಯವಾಗಿಡಲು ಪ್ರಯತ್ನಿಸಿದ್ದರೂ, ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರಿಂದ ತಾವು ಆಶ್ಚರ್ಯಗೊಂಡಿದ್ದಾಗಿ ತಿಳಿಸಿದ್ದಾರೆ.

ENG vs IND: 'ಮುಂದಿನ ಪಂದ್ಯವನ್ನು ಗೆದ್ದು ನಂ 1 ಸ್ಥಾನಕ್ಕೇರುವುದು ನಮ್ಮ ಗುರಿ'-ಭಾರತಕ್ಕೆ ಹ್ಯಾರಿ ಬ್ರೂಕ್‌ ವಾರ್ನಿಂಗ್‌!

"ಅವರಿಗೆ ಹೆಚ್ಚು ಬೇಸರವಾಗುವುದು ಏನೆಂದರೆ, ಕೆಲವರು ಅವರಿಗೆ ಗೊತ್ತಾಗದಂತೆ ಅವರನ್ನು ಹಿಂಬಾಲಿಸುತ್ತಿರುತ್ತಾರೆ. ನಮ್ಮ ಪಕ್ಕದಿಂದ ನೂರಾರು ಜನ ಹಾದುಹೋದರು. ಯಾರೂ ನಮ್ಮನ್ನು ತಡೆಯಲಿಲ್ಲ, ಯಾರೂ ಏನೂ ಹೇಳಲಿಲ್ಲ. ಆದರೆ ಸುಮಾರು ಎರಡು ಗಂಟೆಗಳ ನಂತರ ಅವರು ನನಗೆ ಸಂದೇಶ ಕಳುಹಿಸಿ, 'ಈ ಎಲ್ಲ ಫೋಟೋಗಳನ್ನು ನೋಡಿದ್ದೀರಾ?' ಎಂದು ಕೇಳಿದರು. ಅದನ್ನು ನೋಡಿ ನನಗೆ 'ಇದು ಹೇಗೆ ಸಾಧ್ಯ?' ಎಂಬ ಆಶ್ಚರ್ಯವಾಯಿತು," ಎಂದು ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಜೋರ್ಡನ್ ಕಾಕ್ಸ್ ಹೇಳಿ‌ಕೊಂಡಿದ್ದಾರೆ.

"ಅವರ (ವಿರಾಟ್‌ ಕೊಹ್ಲಿ) ಜೊತೆ ಒಂದು ಕ್ಷಣ ಕಳೆಯಬೇಕು ಎಂಬ ಆಸೆ ಎಷ್ಟೋ ಮಂದಿಗೆ ಇದೆ ಎಂಬುದು ನಿಜಕ್ಕೂ ವಿಷಾದದ ಸಂಗತಿ. ಅವರು ಎಲ್ಲರ ಗಮನದಿಂದ ದೂರವಾಗಿ, ಸಾಮಾನ್ಯ ವ್ಯಕ್ತಿಯಂತೆ ಸಂತೋಷವಾಗಿ ಬದುಕಲು ಬಯಸುತ್ತಾರೆ. ಆದರೆ ದುರದೃಷ್ಟವಶಾತ್ ಅದು ಯಾವಾಗಲೂ ಸಾಧ್ಯವಾಗುವುದಿಲ್ಲ," ಎಂದು ಇಂಗ್ಲೆಂಡ್‌ ಬ್ಯಾಟರ್‌ ತಿಳಿಸಿದ್ದಾರೆ.

ಸೂರ್ಯ ನಾಯಕ, ಭಾರತ ಟಿ20 ತಂಡದ ಪರ್ಯಾಯ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

ವಿರಾಟ್‌ ಕೊಹ್ಲಿಯ ದೊಡ್ಡ ಗುಣವನ್ನು ಶ್ಲಾಘಿಸಿದ ಕಾಕ್ಸ್‌

25ರ ವರ್ಷದ ಇಂಗ್ಲೆಂಡ್‌ನ ಯುವ ಆಟಗಾರ ಕಾಕ್ಸ್ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ ವೇಳೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಪಡೆದ ಬೆಂಬಲ ಮತ್ತು ಮಾರ್ಗದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

"ಐಪಿಎಲ್‌ ಟೂರ್ನಿಯಲ್ಲಿ ನನಗೆ ಅತ್ಯಂತ ವಿಶೇಷವಾಗಿ ಅನಿಸಿದ ಸಂಗತಿಯೆಂದರೆ, ವಿರಾಟ್ ಕೊಹ್ಲಿ ನನ್ನಂತಹ ಆಟಗಾರನಿಗೆ ನೀಡಿದ ಸಮಯ. ಕ್ರಿಕೆಟ್‌ನಲ್ಲಿ ಇಷ್ಟೊಂದು ಸಾಧನೆ ಮಾಡಿದ ವ್ಯಕ್ತಿಯಾಗಿದ್ದರೂ, ಅವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಮುಂದಿರುತ್ತಾರೆ. ಕೆಲವರು ತಮ್ಮ ಆಟದ ಮೇಲಷ್ಟೇ ಗಮನ ಹರಿಸುತ್ತಾರೆ. ಆದರೆ ಕೊಹ್ಲಿ ಮೊದಲು ಇತರರಿಗೆ ಸಹಾಯ ಮಾಡುತ್ತಾರೆ, ನಂತರ ತಮ್ಮ ಬಗ್ಗೆ ಯೋಚಿಸುತ್ತಾರೆ. ಇಂತಹ ಗುಣ ಬಹಳ ಅಪರೂಪ," ಎಂದು ಕಾಕ್ಸ್ ಹೇಳಿದ್ದಾರೆ.