ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಇಶಾನ್‌ ಕಿಶನ್‌ ಬಳಿ ಕಲಿಯಿರಿʼ: ವೈಭವ್‌ ಸೂರ್ಯವಂಶಿಗೆ ವಿವೇಕ್‌ ರಾಝ್ದಾನ್‌ ಸಂದೇಶ!

ದಕ್ಷಿಣ ವಲಯ ವಿರುದ್ಧ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಅವರು 37 ಎಸೆತಗಳಲ್ಲಿ 44 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಯುವ ಬ್ಯಾಟ್ಸ್‌ಮನ್‌ಗೆ ಕಾಮೆಂಟೇಟರ್‌ ವಿವೇಕ್‌ ರಾಝ್ದಾನ್‌ ಅವರು ಮಹತ್ವದ ಸಲಹೆಯನ್ನು ನೀಡಿದ್ದಾರೆ.

ವೈಭವ್‌ ಸೂರ್ಯವಂಶಿಗೆ ವಿವೇಕ್‌ ರಜ್ಧಾನ್‌ ಮಹತ್ವದ ಸಲಹೆ.

ಚೆನ್ನೈ: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರು ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪೂರ್ವ ವಲಯ ಪರ ಆಡುತ್ತಿದ್ದಾರೆ. ಅವರು 37 ಎಸೆತಗಳಲ್ಲಿ 44 ರನ್‌ಗಳನ್ನು ಗಳಿಸುವ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಅಲ್ಲದೆ ತಮ್ಮ ಬ್ಯಾಟಿಂಗ್‌ ಕೌಶಲವನ್ನು ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಮುಂದುವರಿಸಲು ಅವರು ಮತ್ತೊಮೆ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಕಾಮೆಂಟೇಟರ್‌ ವಿವೇಕ್‌ ರಾಝ್ದಾನ್‌ ಅವರು, ಯುವ ಬ್ಯಾಟ್ಸ್‌ಮನ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ದಕ್ಷಿಣ ವಲಯ ವಿರುದ್ಧದ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಶಾನ್‌ ಕಿಶನ್‌ ದ್ವಿಶತಕ ದೊಡ್ಡ ಇನಿಂಗ್ಸ್‌ ಆಡಿದರು. ಇದರ ಬೆನ್ನಲ್ಲೆ ವಿವೇಕ್‌ ರಾಝ್ದಾನ್‌ ಅವರು ಈ ಮಹತ್ವದ ಸಲಹೆಯನ್ನು ನೀಡಿದ್ದಾರೆ. ನಾಯಕ ಇಶಾನ್‌ ಕಿಶನ್‌ ಅವರನ್ನು ನೋಡಿ ವೈಭವ್‌ ಕಲಿಯಬೇಕೆಂದು ಹೇಳಿದ್ದಾರೆ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಕಾಮೆಂಟೇಟರ್ ವಿವೇಕ್ ರಾಝ್ಧಾನ್ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. “ಸೂರ್ಯವಂಶಿ ಸಾಹೇಬರೇ, ಈಗ ನೀವು ಇಶಾನ್ ಕಿಶನ್ ಅವರಂತಹ ಆಟಗಾರರಿಂದ ಕಲಿಯಬೇಕು. ಒಮ್ಮೆ ಕ್ರೀಸ್‌ನಲ್ಲಿ ಸೆಟ್ ಆದ ಬಳಿಕ ದೀರ್ಘ ಇನಿಂಗ್ಸ್‌ ಆಡುವುದು ಹೇಗೆ ಎಂಬುದನ್ನು ಕಲಿಯಬೇಕು,” ಎಂದು ರಾಝ್ದಾನ್ ನೇರಪ್ರಸಾರದ ವೇಳೆ ಹೇಳಿದ್ದಾರೆ.

IND vs JAP ಭಾರತ ವಿರುದ್ದದ ಐತಿಹಾಸಿಕ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್‌ ತಂಡ ಪ್ರಕಟ!

ಆರಂಭವನ್ನು ದೊಡ್ಡ ಇನಿಂಗ್ಸ್‌ ಆಗಿ ಪರಿವರ್ತಿಸುವುದು ಮುಖ್ಯ

ಕಠಿಣ ಪರಿಸ್ಥಿತಿಗಳಲ್ಲಿ ದೀರ್ಘ ಸಮಯ ಬ್ಯಾಟ್‌ ಮಾಡುವುದು ದೈಹಿಕ ಹಾಗೂ ಮಾನಸಿಕವಾಗಿ ಎಷ್ಟು ಸವಾಲಿನದ್ದು ಎಂಬುದನ್ನು ರಾಝ್ಧಾನ್ ಒತ್ತಿಹೇಳಿದರು. ಕಿಶನ್ ಇಷ್ಟು ದೀರ್ಘ ಸಮಯ ಕ್ರೀಸ್‌ನಲ್ಲಿ ನೆಲೆಸಿ ಬ್ಯಾಟ್‌ ಮಾಡಿರುವುದು ಕೇವಲ ಅವರ ತಾಂತ್ರಿಕ ಕೌಶಲ ಅಥವಾ ಮಾನಸಿಕ ದೃಢತೆಯನ್ನು ಮಾತ್ರ ತೋರಿಸುವುದಿಲ್ಲ. ಅದರಲ್ಲಿ ಪಂದ್ಯದ ಫಿಟ್‌ನೆಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

“ಈ ಸಮಯದಲ್ಲಿ ಇಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರೂ ಎದ್ದು ನಿಂತು ಈ ಇನಿಂಗ್ಸ್‌ಗೆ ಚಪ್ಪಾಳೆ ತಟ್ಟಿದರು. ಏಕೆಂದರೆ ಇದು ಕೇವಲ ತಂತ್ರವಲ್ಲ, ಕೇವಲ ಮಾನಸಿಕ ಸ್ಥೈರ್ಯವೂ ಅಲ್ಲ. ಇದು ಪಂದ್ಯದ ಫಿಟ್‌ನೆಸ್ ಕೂಡ ಹೌದು. ಇಷ್ಟು ಬಿಸಿಲಿನಲ್ಲೂ ಇಷ್ಟು ದೀರ್ಘ ಸಮಯ ಕ್ರೀಸ್‌ನಲ್ಲಿ ನಿಂತು ಇಂತಹ ಇನಿಂಗ್ಸ್ ಆಡುವುದು ಸುಲಭದ ಮಾತಲ್ಲ. ಇಶಾನ್ ಕಿಶನ್ ಅವರ ಅದ್ಭುತ ಇನಿಂಗ್ಸ್ ಇದು,” ಎಂದು ರಾಝ್ದಾನ್ ಹೇಳಿದರು.

ಟಿ20 ಶ್ರೇಯಾಂಕ; ಆರನೇ ಸ್ಥಾನಕ್ಕೆ ಜಿಗಿದ ದೀಪ್ತಿ, ಅಗ್ರಸ್ಥಾನ ಕಾಯ್ದುಕೊಂಡ ಶ್ರೀ ಚರಣಿ

ಇಶಾನ್ ಕಿಶನ್‌ರಿಂದ ಐತಿಹಾಸಿಕ ಇನಿಂಗ್ಸ್

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ಅವರ ಪ್ರದರ್ಶನ ಗಮನಾರ್ಹವಾಗಿತ್ತು. ಅವರು 334 ಎಸೆತಗಳಲ್ಲಿ 270 ರನ್‌ಗಳ ಐತಿಹಾಸಿಕ ಇನಿಂಗ್ಸ್ ಆಡಿದರು. ಅವರ ಇನಿಂಗ್ಸ್‌ನಲ್ಲಿ 30 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಈಸ್ಟ್‌ ಝೋನ್ ತಂಡ 147 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಕಿಶನ್, ಬಳಿಕ ದಕ್ಷಿಣ ವಲಯದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಬೃಹತ್ ಮೊತ್ತದ ಇನಿಂಗ್ಸ್ ಕಟ್ಟಿದರು.

ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಿಶನ್ ಅವರ ಮೊದಲ ದ್ವಿಶತಕವಾಗಿತ್ತು. ಅಲ್ಲದೆ, ಅವರ 270 ರನ್‌ಗಳ ಇನಿಂಗ್ಸ್ ದುಲೀಪ್ ಟ್ರೋಫಿಯಲ್ಲಿ ವಿಕೆಟ್‌ಕೀಪರ್‌ವೊಬ್ಬರು ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಎಂಬ ದಾಖಲೆಯನ್ನೂ ನಿರ್ಮಿಸಿತು. ಈ ಹಿಂದೆ ಈ ದಾಖಲೆ ನಮನ್ ಓಜಾ ಅವರ ಹೆಸರಿನಲ್ಲಿತ್ತು. ಓಜಾ 2014ರಲ್ಲಿ 217 ರನ್ ಗಳಿಸಿದ್ದರು.