ರಾಜ್‌ಕೋಟ್: ನ್ಯೂಜಿಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ (IND vs NZ) 4 ವಿಕೆಟ್ ಗೆಲುವು ಪಡೆದ ಬಳಿಕ ಭಾರತ ತಂಡ (India) ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. ಇದೀಗ ಜನವರಿ 14 ರಂದು ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ವಡೋದರರ ಬಿಸಿಐ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕಿವೀಸ್ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 300 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ 301 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ (Virat Kohli) ಅರ್ಧಶತಕಗಳ ಬಲದಿಂದ 49 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದ ಗೆಲುವಿನ ದಡ ಸೇರಿತು.
ವಡೋದರದಲ್ಲಿ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಆಡುವುದು ಅನುಮಾನವಾಗಿದೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆರು ಮಂದಿ ಬೌಲರ್‌ಗಳು ಆಡಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಆಲ್‌ರೌಂಡರ್ ಅಥವಾ ಬೌಲರ್ ಅನ್ನು ಪರಿಗಣಿಸಬಹುದು. ಇದರ ಜೊತೆಗೆ ವಾಷಿಂಗ್ಟನ್ ಸ್ಥಾನಕ್ಕೆ ಧ್ರುವ್ ಜುರೆಲ್‌ಗೆ ಅವಕಾಶ ನೀಡಿದರೂ ಅಚ್ಚರಿ ಪಡಬೇಕಿಲ್ಲ. ರಾಜ್‌ಕೋಟ್ ಪಿಚ್ ಪ್ಲ್ಯಾಟ್ ಆಗಿದ್ದು, ಧ್ರುವ್ ಜುರೆಲ್ ಅವರಿಂದ ಭಾರತದ ಬ್ಯಾಟಿಂಗ್ ಡೆಪ್ತ್ ಹೆಚ್ಚಾಗಲಿದೆ.
IND vs NZ: ವಿರಾಟ್ ಕೊಹ್ಲಿ ಅರ್ಧಶತಕ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ!
ಕೊನಯ ಓವರ್‌ಗಳಲ್ಲಿ ಮ್ಯಾಚ್ ಫಿನಿಷರ್ ಪಾತ್ರವನ್ನು ನಿರ್ವಹಿಸುವ ಆಟಗಾರ ಸದ್ಯ ಭಾರತ ತಂಡದಲ್ಲಿಲ್ಲ. ಐವರು ಬೌಲರ್‌ಗಳಿಂದ ಇನಿಂಗ್ಸ್ ಅನ್ನು ಮುಗಿಸುವುದು ಕಷ್ಟದ ಕೆಲಸ, ಹಾಗಾಗಿ ಇದು ಭಾರತ ತಂಡಕ್ಕೆ ಸವಾಲಿನ ಸಂಗತಿಯಾಗಿದೆ. ಈ ಕಾರಣದಿಂದಲೇ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಅಗತ್ಯ. ಆದರೆ, ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಲ್ಲಿ ಹಾರ್ದಿಕ್‌ಗೆ ಒಡಿಐ ಸರಣಿಯಲ್ಲಿ ವಿಶ್ರಾಂತಿಯನ್ನು ನೀಡಲಾಗಿದೆ.
ನಿತೀಶ್ ರೆಡ್ಡಿಗೆ ಅವಕಾಶ ನೀಡುವ ಸಾಧ್ಯತೆ
ನಿತೀಶ್ ಕುಮಾರ್ ರೆಡ್ಡಿ ಅವರನ್ನು ವಾಷಿಂಗ್ಟನ್ ಸುಂದರ್ ಅವರ ಸ್ಥಾನದಲ್ಲಿ ಆಡಿಸಬಹುದು. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕುಸಿದರೆ, ಇದರ ಒತ್ತಡ ಕೆಳ ಮಧ್ಯಮ ಕ್ರಮಾಂಕದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ರಾಜ್‌ಕೋಟ್ ಪಿಚ್‌ನಲ್ಲಿ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಅನ್ನು ಆಡಿಸುವುದಕ್ಕಿಂತ ಧ್ರುವ್ ಜುರೆಲ್ ಅವರನ್ನು ಆಡಿಸುವುದು ಒಳಿತು. ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಹಾಗೂ ಪ್ರಸಿಧ್ ಕೃಷ್ಣ ಅವರ ಸ್ಥಾನದಲ್ಲಿ ಒಂದು ಬದಲಾವಣೆಯನ್ನು ಮಾಡಲು ಟೀಮ್ ಮ್ಯಾನೇಜ್‌ಮೆಂಟ್ ಬಯಸಬಹುದು. ಹಾಗಾಗಿ ಪ್ರಸಿದ್ಧದ ಸ್ಥಾನಕ್ಕೆ ಅರ್ಷದೀಪ್ ಸಿಂಗ್ ಅವರನ್ನು ಕರೆತರಬಹುದು. ಏಕೆಂದರೆ ಕಿವೀಸ್ ತಂಡದ ಎಡಗೈ ಬ್ಯಾಟ್ಸ್‌ಮನ್‌ಗಳು ಹೆಚ್ಚಾಗಿ ಇದ್ದಾರೆ.
28000 ರನ್ ಪೂರ್ಣಗೊಳಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
- ರೋಹಿತ್ ಶರ್ಮಾ (ಓಪನರ್)
- ಶುಭಮನ್ ಗಿಲ್ (ಓಪನರ್, ನಾಯಕ)
- ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
- ಶ್ರೇಯಸ್ ಅಯ್ಯರ್ (ಬ್ಯಾಟ್ಸ್‌ಮನ್, ಉಪ ನಾಯಕ)
- ಕೆಎಲ್ ರಾಹುಲ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್)
- ಧ್ರುವ್‌ಜುರೆಲ್ (ಬ್ಯಾಟ್ಸ್‌ಮನ್)
- ರವೀಂದ್ರ ಜಡೇಜಾ (ಸ್ಪಿನ್ ಆಲ್‌ರೌಂಡರ್)
- ಹರ್ಷಿತ್ ರಾಣಾ (ವೇಗದ ಬೌಲರ್)
- ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
- ಅರ್ಷದೀಪ್ ಸಿಂಗ್/ಪ್ರಸಿಧ್ ಕೃಷ್ಣ (ವೇಗದ ಬೌಲರ್)
- ಕುಲ್ದೀಪ್ ಯಾದವ್ (ಸ್ಪಿನ್ನರ್)