ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅರ್ಜಿ ಸಲ್ಲಿಸಿದ ವಾಸೀಮ್‌ ಜಾಫರ್‌, ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಹುದ್ದೆಗೆ ಪ್ರಜ್ಞಾನ್‌ ಓಜಾ ನೇಮಕ ಸಾಧ್ಯತೆ!

ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ವಾಸೀಮ್‌ ಜಾಫರ್, ಅಜಿತ್ ಅಗರ್ಕರ್ ನಿರ್ಗಮನದಿಂದ ಖಾಲಿಯಾಗಿರುವ ಬಿಸಿಸಿಐ ಹಿರಿಯ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರಜ್ಞಾನ್ ಓಜಾಗೆ ಬಿಸಿಸಿಐನಿಂದ ಬಲವಾದ ಬೆಂಬಲ ವ್ಯಕ್ತವಾಗಿದೆ. ಹಾಗಾಗಿ ಅವರು ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ.

ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಹುದ್ದಗೆ ಪ್ರಜ್ಞಾನ್‌ ಓಜಾ ಆಯ್ಕೆಯಾಗುವ ಸಾಧ್ಯತೆ.

ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟರ್ ವಾಸೀಮ್‌ ಜಾಫರ್ (Wasim Jaffer), ಬಿಸಿಸಿಐನ ಹಿರಿಯ ರಾಷ್ಟ್ರೀಯ ಆಯ್ಕೆಗಾರರ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅಜಿತ್ ಅಗರ್ಕರ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಹುದ್ದೆ ಖಾಲಿಯಾಗಿದೆ. ಇದೀಗ ಈ ಸ್ಥಾನಕ್ಕೆ ಜಾಫರ್ ಸ್ಪರ್ಧೆಯಲ್ಲಿದ್ದು, ಆಯ್ಕೆ ಸಮಿತಿಯ ಮುಂದಿನ ಅಧ್ಯಕ್ಷರು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಆದರೆ, ಪ್ರಜ್ಞಾನ್‌ ಓಜಾ (Pragyan Ojha) ಅವರು ಈ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ. ಏಕೆಂದರೆ ಬಿಸಿಸಿಐ ಆಡಳಿತ ಮಂಡಳಿ ಅವರಿಗೆ ಬೆಂಬಲ ನೀಡುತ್ತಿದೆ.

“ಹೌದು, ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ,” ಎಂದು 48ರ ವಯಸ್ಸಿನ ವಾಸೀಮ್‌ ಜಾಫರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಜಾಫರ್ ಭಾರತ ತಂಡದ ಪರ 31 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸುಮಾರು 2,000 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕಗಳು ಸೇರಿವೆ. ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿರುವುದು ಅವರ ಪ್ರಮುಖ ಸಾಧನೆಗಳಾಗಿವೆ. ಅಲ್ಲದೆ, ಕೋಲ್ಕತ್ತಾದಲ್ಲಿ ಪಾಕಿಸ್ತಾನ ವಿರುದ್ಧವೂ ದ್ವಿಶತಕ ಬಾರಿಸಿದ್ದಾರೆ.

IND vs NZ: ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ, ಮೊಹಮ್ಮದ್‌ ಶಮಿಗೆ ಸ್ಥಾನವಿಲ್ಲ!

ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (CAC) ವಾಸೀಮ್ ಜಾಫರ್ ಅವರನ್ನು ಆಯ್ಕೆ ಮಾಡಿದರೆ, ಮಖ್ಯಸ್ಥ ಸ್ಥಾನದ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆ ಅವರಿಗೆ ಸಿಗಲಿದೆ. ಜಾಫರ್ 31 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಪ್ರಜ್ಞಾನ್ ಓಜಾ ಭಾರತ ಪರ 24 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಸ್ತುತ ಆಯ್ಕೆ ಪ್ರಕ್ರಿಯೆಯ ಪ್ರಕಾರ, ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ವಲಯದ ಪ್ರತಿನಿಧಿಗೆ ಆಯ್ಕೆ ಸಮಿತಿಯ ಅಧ್ಯಕ್ಷರಾಗುವ ಅರ್ಹತೆ ಇರುತ್ತದೆ.

ಪ್ರಜ್ಞಾನ್ ಓಜಾಗೆ ಬಿಸಿಸಿಐ ಬೆಂಬಲ

ಆದರೆ, ಪ್ರಜ್ಞಾನ್ ಓಜಾ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಸಲು ಬಿಸಿಸಿಐ ಒಳವಲಯದಲ್ಲಿ ಬಲವಾದ ಬೆಂಬಲವಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ನೂತನ ಆಯ್ಕೆ ಸಮಿತಿಯ ರಚನೆಯ ಮೇಲೆ ಪ್ರಭಾವ ಬೀರಬಹುದು.

India's ODI Squad: ನ್ಯೂಜಿಲೆಂಡ್‌ ಏಕದಿನ ಸರಣಿಗೆ ಭಾರತ ತಂಡ ಪ್ರಕಟ,‌ ಇಬ್ಬರಿಗೆ ನಾಯಕತ್ವದ ಹೊಣೆ!

ಇಂತಹ ಪರಿಸ್ಥಿತಿಯಲ್ಲಿ, ಭಾರತ ತಂಡದ ಮಾಜಿ ಸ್ಪಿನ್ನರ್ ರಮೇಶ್ ಪೊವಾರ್ ಕೂಡ ಆಯ್ಕೆ ಸಮಿತಿಯ ಸದಸ್ಯ ಸ್ಥಾನಕ್ಕೆ ಸ್ಪರ್ಧೆಯಲ್ಲಿರಬಹುದು. ಅವರು ಭಾರತ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪಶ್ಚಿಮ ವಲಯದ ಪ್ರತಿನಿಧಿಯಾಗಿ ಸಮಿತಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಅಜಿತ್ ಅಗರ್ಕರ್ ಅವರಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡಲು ಬಿಸಿಸಿಐ ಮುಂದಾಗಿದ್ದು, ಅರ್ಜಿದಾರರ ಅರ್ಹತೆ ಮತ್ತು ತಮ್ಮ ಆದ್ಯತೆಗಳನ್ನು ಪರಿಗಣಿಸಿ ಕ್ರಿಕೆಟ್ ಸಲಹಾ ಸಮಿತಿ ಅಂತಿಮ ಆಯ್ಕೆ ಸಮಿತಿಯ ರಚನೆಯನ್ನು ನಿರ್ಧರಿಸಲಿದೆ.