ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ʻಸಂಜು ನಮಗೆ ಬೇಕುʼ-ಟ್ರೆಂಟ್‌ ಬ್ರಿಡ್ಜ್‌ ಹೊರಗಡೆ ಘೋಷಣೆ ಕೂಡಿದ ಫ್ಯಾನ್ಸ್‌! ವಿಡಿಯೊ

ಇಂಗ್ಲೆಂಡ್‌ ವಿರುದ್ಧ ಮೂರನೇ ಟಿ20ಐ ಪಂದ್ಯದ ಸೋಲಿ ಬೆನ್ನಲ್ಲೆ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ಗೆ ಬೆಂಬಲ ಜಾಸ್ತಿಯಾಗಿದೆ. ಟ್ರೆಂಟ್‌ ಬ್ರಿಡ್ಜ್‌ ಸ್ಟೇಡಿಯಂನ ಹೊರಗಡೆ ಭಾರತೀಯ ಅಭಿಮಾನಿಗಳು, ನಮಗೆ ಸಂಜು ಬೇಕು ಎಂದು ಮೈದಾನದಿಂದ ನಿರ್ಗಮಿಸುತ್ತಿದ್ದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಎದುರು ಘೋಷಣೆ ಕೂಗಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ಸಂಜು ಸ್ಯಾಮ್ಸನ್‌ ಪರ ಘೋಷಣೆ ಕೂಡಿದ ಭಾರತೀಯ ಫ್ಯಾನ್ಸ್‌.

ನಾಟಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ದ ಟಿ20ಐ ಸರಣಿಯಲ್ಲಿ (IND vs ENG) ಭಾರತ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಜುಲೈ 7 ರಂದು ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿಯೂ ಶ್ರೇಯಸ್‌ ಅಯ್ಯರ್‌ (Shreyas Iyer) ನಾಯಕತ್ವದ ಟೀಮ್‌ ಇಂಡಿಯಾ 125 ರನ್‌ಗಳ ಅಂತರದಲ್ಲಿ ದೊಡ್ಡ ಅಂತರದಲ್ಲಿ ಸೋಲು ಅನುಣಭವಿಸಿತು. ಇದು ಟಿ20 ಕ್ರಿಕೆಟ್‌ ಇತಿಹಾಸದಲ್ಲಿಯೇ ಟೀಮ್‌ ಇಂಡಿಯಾದ ಅತಿ ದೊಡ್ಡ ಅಂತರದಲ್ಲಿ ಸೋಲು ಇದಾಗಿದೆ. ಈ ಸೋಲಿನ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ ಆಡಿದ ಐದು ಪಂದ್ಯಗಳ ಪೈಕಿ ಒಂದೇ ಒಂದು ಗೆಲುವನ್ನು ಪಡೆಯಲು ಸಾಧ್ಯವಿಲ್ಲ.

ಭಾರತ ತಂಡದ ಸೋಲಿನ ಬಳಿಕ ಅಭಿಮಾನಿಗಳು ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮೊದಲನೇ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್‌ ಅವರನ್ನು ಭಾರತ ತಂಡದ ಪ್ಲೇಯಿಂಗ್‌ Xiನಿಂದ ತೆಗೆಯಲಾಯಿತು ಹಾಗೂ ಅವರೆ ಸ್ಥಾನಕ್ಕೆ ವೈಭವ್‌ ಸೂರ್ಯವಂಶಿಯನ್ನು ಆಡಿಸಲಾಯಿತು. ಅಷ್ಟೇ ಅಲ್ಲದೆ, ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಿಂದಲೂ ಸಂಜು ಅವರನ್ನು ಕೈ ಬಿಡಲಾಗಿದೆ.

IND vs ENG: ಆರ್ಚರ್‌, ಟಂಗ್‌ ಮಾರಕ ದಾಳಿಗೆ ಭಾರತ ಉಡೀಸ್‌, ಇಂಗ್ಲೆಂಡ್‌ಗೆ ಸತತ ಎರಡನೇ ಜಯ!

ಮೂರನೇ ಟಿ20ಐ ಪಂದ್ಯದ ಬಳಿಕ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಆಟಗಾರರು ಕ್ರೀಡಾಂಗಣದಿಂದ ಹೊರಗಡೆ ಬರುತ್ತಿದ್ದ ಸಂದರ್ಭದಲ್ಲಿ ಟ್ರೆಂಟ್‌ ಬ್ರಡ್ಜ್‌ ಕ್ರೀಡಾಂಗಣದ ಹೊರಗಡೆ ನಿಂತಿದ್ದ ಭಾರತೀಯ ಅಭಿಮಾನಿಗಳು, ಸಂಜು ನಮಗೆ ಬೇಕು, ಸಂಜು ನಮಗೆ ಬೇಕು ಎಂಬ ಘೋಷಣೆಗಳನ್ನು ಕೂಗಿದರು. ಈ ಘೋಷಣೆಗಳನ್ನು ಕೇಳುತ್ತಾ ಗೌತಮ್‌ ಗಂಭೀರ್‌ ಹಾಗೂ ಟೀಮ್‌ ಇಂಡಿಯಾ ಆಟಗಾರರು ಸುಮ್ಮನೆ ತೆರಳಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.



ಸಂಜು ಸ್ಯಾಮ್ಸನ್‌ ಕೈಬಿಟ್ಟ ಬಗ್ಗೆ ಸ್ಪಷ್ಟನೆ ನೀಡಿದ ಗಂಭೀರ್‌

ಮೂರನೇ ಟಿ20ಐ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಸಂಜು ಸ್ಯಾಮ್ಸನ್‌ ಅವರನ್ನು ಕೈಬಿಟ್ಟಿರುವ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಗಂಭೀರ್‌ ಪ್ರತಿಕ್ರಿಯೆ ನೀಡಿದರು. ಸಂಜು ಸ್ಯಾಮ್ಸನ್‌ ಅವರು ಭಾರತ ತಂಡಕ್ಕೆ ನೀಡಿರುವ ಕೊಡುಗೆಯು ಬಗ್ಗೆ ನನಗೆ ಅರಿವಿದೆ ಹಾಗೂ ಅವರು ಈ ಟಿ20ಐ ಸರಣಿಯಲ್ಲಿ ಯಾವಾಗ ಬೇಕಾದರೂ ಕಮ್‌ಬ್ಯಾಕ್‌ ಮಾಡಬಹುದು ಎಂದು ಹೇಳಿದ್ದಾರೆ.

"ಸಂಜು ಸ್ಯಾಮ್ಸನ್‌ ಬಗ್ಗೆ ಹೇಳುವುದಾದರೆ, ಅವರು ಭಾರತ ತಂಡಕ್ಕೆ ನೀಡಿರುವ ಅದ್ಭುತ ಕೊಡುಗೆ ಸ್ಪಷ್ಟವಾಗಿದೆ ಹಾಗೂ ಅದು ನಮ್ಮ ಗಮನದಲ್ಲಿದೆ. ಆದರೆ, ಕೆಲವೊಮ್ಮೆ ಕೆಲವು ಆಟಗಾರರ ಫಾರ್ಮ್‌ ಅನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವರು ಈ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡದಂಥಾ ಹಿಂದೆ ಇದ್ದ ಯಾವುದೇ ಕಠಿಣ ನಿಯಮ ನಮ್ಮಲ್ಲಿ ಇಲ್ಲ," ಎಂದು ಹೇಳುವ ಮೂಲಕ ಅವರು ಸಂಜು ಪ್ಲೇಯಿಂಗ್‌ XIಗೆ ಮರಳಬಹುದು ಎಂಬ ಸುಳಿವನ್ನು ನೀಡಿದ್ದಾರೆ.

ʻಈ ಹೀನಾಯ ಸೋಲು ಸ್ವೀಕಾರಾರ್ಹವಲ್ಲʼ-ದಾಖಲೆಯ ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್‌ ಆಕ್ರೋಶ!

ಭಾರತ ತಂಡಕ್ಕೆ ಎರಡನೇ ಸೋಲು

ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 201 ರನ್‌ಗಳನ್ನು ಕಲೆ ಹಾಕಿತ್ತು. ಫಿಲ್‌ ಸಾಲ್ಟ್‌ (70 ರನ್‌) ಇಂಗ್ಲೆಂಡ್‌ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಬಳಿಕ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಜೋಫ್ರಾ ಆರ್ಚರ್‌ ಹಾಗೂ ಜಾಶ ಟಂಗ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 76 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇನ್ನು ಭಾರತ ತಂಡಕ್ಕೆ ಸರಣಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿಕೊಂಡಿದೆ. ಕೊನೆಯ ಎರಡೂ ಪಂದ್ಯಗಳನ್ನು ಗೆದ್ದರೆ, ಸರಣಿಯನ್ನು ಸಮಬಲ ಮಾಡಿಕೊಳ್ಳುವ ಅವಕಾಶವಿದೆ. ನಾಲ್ಕನೇ ಟಿ20ಐ ಪಂದ್ಯ ಜುಲೈ 9 ರಂದು ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆಯಲಿದೆ.