ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI 2nd ODI:‌ ಕ್ಯಾಂಬೆಲ್‌, ಹೋಪ್‌, ಜಂಗೋ ಶತಕಗಳ ಬಲದಿಂದ ಭಾರತಕ್ಕೆ 406 ರನ್‌ ಗುರಿ ನೀಡಿದ ವಿಂಡೀಸ್‌!

IND vs WI 2nd ODI: ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌, 405 ರನ್‌ಗಳನ್ನು ಕಲೆ ಹಾಕಿದ್ದು, ಭಾರತಕ್ಕೆ 406 ರನ್‌ಗಳ ಗುರಿಯನ್ನು ನೀಡಿದೆ.

ಭಾರತ ತಂಡದ ವಿರುದ್ಧ ಭರ್ಜರಿ ಶತಕ ಬಾರಿಸಿದ ಕ್ಯಾಂಬೆಲ್‌, ಹೋಪ್‌.

ಗುವಾಹಟಿ: ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ (IND vs WI) ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಪ್ರವಾಸಿ ವಿಂಡೀಸ್‌ ತಂಡ, ಜಾನ್‌ ಕ್ಯಾಂಬೆಲ್‌ (John Campbell), ಶೇಯ್‌ ಹೋಪ್‌ (Shai Hope) ಹಾಗೂ ಆಮಿರ್‌ ಜಂಗೋ (Ali jangoo) ಅವರ ಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 405 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 406 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ವೆಸ್ಟ್‌ ಇಂಡೀಸ್‌ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಕೀಸಿ ಕಾರ್ಟಿ ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಮತ್ತೊಬ್ಬ ಆರಂಭಿಕ ಜಾನ್‌ ಕ್ಯಾಂಬೆಲ್‌, ಸ್ಪೋಟಕ ಶತಕವನ್ನು ಬಾರಿಸಿದರು. ಅವರು 65 ಎಸೆತಗಳಲ್ಲಿ ಶತಕವನ್ನು ಬಾರಿಸಿದರು. ಅಲ್ಲದೆ ಅವರು ಶೇಯ್‌ಹೋಪ್‌ ಅವರ ಜೊತೆಗೆ 110 ರನ್‌ಗಳ ಭರ್ಜರಿ ಜೊತೆಯಾಟವನ್ನು ಆಡಿದರು. ಒಟ್ಟು 68 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 101 ರನ್‌ ಗಳಿಸಿದ ಬಳಿಕ ಗುರ್ನೂರ್‌ ಬ್ರಾರ್‌ಗೆ ವಿಕೆಟ್‌ ಒಪ್ಪಿಸಿದರು.

IND vs WI: ಭಾರತದ ಎದುರು ಎರಡನೇ ಒಡಿಐನಲ್ಲಿ ಶತಕ ಬಾರಿಸಿದ ಜಾನ್‌ ಕ್ಯಾಂಬೆಲ್‌ ಯಾರು?

ಶೇಯ್‌ ಹೋಪ್‌-ಆಮಿರ್‌ ಜಂಗೋ ಜುಗಲ್‌ಬಂದಿ

ಜಾನ್‌ ಕ್ಯಾಂಬೆಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ನಲ್ಲಿ ಜೊತೆಯಾದ ಶೇಯ್‌ ಹೋಪ್‌ ಹಾಗೂ ಆಮಿರ್‌ ಜಂಗೋ ಜೋಡಿ ಭಾರತದ ಬೌಲರ್‌ಗಳನ್ನು ದೀರ್ಘಾವಧಿ ಎದುರಿಸಿತು. ಈ ಇಬ್ಬರೂ ಮಧ್ಯಮ ಓವರ್‌ಗಳಲ್ಲಿ ಆಡಿದ 131 ಎಸೆತಗಳಲ್ಲಿ 182 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 320ರ ಗಡಿ ದಾಟಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು.



ಶೇಯ್‌ ಹೋಪ್‌ ಭರ್ಜರಿ ಶತಕ

ಮಧ್ಯಮ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ವಿಂಡೀಸ್‌ ನಾಯಕ ಶೇಯ್‌ ಹೋಪ್‌, 94 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 104 ರನ್‌ ಗಳಿಸಿದರು. ಅವರು ಶತಕ ಸಿಡಿಸಿದ ಬೆನ್ನಲ್ಲೆ ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡಿದ ಆಮಿರ್‌ ಜಂಗೋ ಅವರು ಕೂಡ ಭಾರತೀಯ ಬೌಲರ್‌ಗಳನ್ನು ಬಲವಾಗಿ ಕಾಡಿದರು. ಅವರು ಆಡಿದ 77 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 114 ರನ್‌ಗಳನ್ನು ಬಾರಿಸಿದರು. ರಾಸ್ಟನ್‌ ಚೇಸ್‌ 29 ರನ್‌ಗಳ ಕೊಡುಗೆಯನ್ನು ನೀಡಿದರು.

ಭಾರತದ ಪರ ಗುರ್ನೂರ್‌ ಬ್ರಾರ್‌, ಕುಲ್ದೀಪ್‌ ಯಾದವ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್‌ಗಳನ್ನು ಪಡೆದುಕೊಂಡರು.