ನವದೆಹಲಿ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Mini Auction) ಟೂರ್ನಿಯ ಮಿನಿ ಹರಾಜು ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 359 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆ ಒಳಗಾಗಲಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ (cameron Green) ಮಿನಿ ಆಕ್ಷನ್‌ನಲ್ಲಿ ಬಹುಬೇಡಿಕೆಯ ಆಟಗಾರರಾಗಿದ್ದಾರೆ. ಏಕೆಂದರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಆಸರೆಯಾಗಿರುವ ಕಾರಣ ಅವರನ್ನು ಖರೀದಿಸಲು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಆದರೆ, ಅವರು ಮಿನಿ ಹರಾಜಿಗೆ ತಮ್ಮನ್ನು ವಿಶೇಷ ಬ್ಯಾಟ್ಸ್‌ಮನ್ ಎಂದು ನೋಂದಾಯಿಸಿದ್ದಾರೆ ಹಾಗೂ ಆಕ್ಷನ್‌ನಲ್ಲಿ ಮೊದಲ ಸೆಟ್‌ನಲ್ಲಿ ಕಾಣಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಒಂದು ವೇಳೆ ಕ್ಯಾಮೆರಾನ್ ಗ್ರೀನ್ ಅವರು ಮಿನಿ ಆಕ್ಷನ್‌ನಲ್ಲಿ 30 ಕೋಟಿ ರು. ಗಳಿಗೆ ಸೋಲ್ಡ್ ಆದರೂ, ಆಸೀಸ್ ಆಲ್‌ರೌಂಡರ್‌ಗೆ ಸಿಗುವುದು 18 ಕೋಟಿ ರು.ಗಳು ಮಾತ್ರ. ಐಪಿಎಲ್ ನಿಯಮಗಳ ಪ್ರಕಾರ ವಿದೇಶಿ ಆಟಗಾರ ಮಿನಿ ಹರಾಜಿನಲ್ಲಿ 18 ಕೋಟಿ ರು. ಗಳಿಗೂ ಹೆಚ್ಚಿನ ಮೊತ್ತವನ್ನು ಪಡೆಯಲು ಸಾಧ್ಯವಿಲ್ಲ. 2025ರ ಐಪಿಎಲ್ ಮೆಗಾ ಆಕ್ಷನ್‌ಗೂ ಮುನ್ನ ರಿಟೆನ್ಷನ್ ಮೊತ್ತ ಇದಾಗಿದೆ.
"ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರ ಹರಾಜು ಶುಲ್ಕವು 18 ಕೋಟಿ ಅಥವಾ ಮೆಗಾ ಹರಾಜಿನಲ್ಲಿ ಗರಿಷ್ಠ ಹರಾಜು ಬೆಲೆಗಿಂತ ಕಡಿಮೆ ಇರುತ್ತದೆ," ಎಂದು ಐಪಿಎಲ್ ನಿಯಮ ಹೇಳುತ್ತದೆ.
IPL 2026 Retained Players: ತಂಡಗಳು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
ಫ್ರಾಂಚೈಸಿಗಳು ಮಿನಿ ಹರಾಜಿನಲ್ಲಿ 18 ಕೋಟಿ ರು. ಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಬೇಕಾದರೂ ಬಿಡ್ ಮಾಡಿ ಖರೀದಿಸಬಹುದು, ಆದರೆ, 18 ಕೋಟಿ ರು ಗಳಿಗಿಂತ ಹೆಚ್ಚಿನ ಮೊತ್ತವನ್ನು ಬಿಸಿಸಿಐಗೆ ನೀಡಬೇಕಾಗುತ್ತದೆ. ಮಂಡಳಿಯು ಈ ಹಣವನ್ನು ಆಟಗಾರರ ಕಲ್ಯಾಣಕ್ಕಾಗಿ ಬಳಸುತ್ತದೆ. ಆದಾಗ್ಯೂ, ಗ್ರೀನ್ ಅನ್ನು ಮಾರಾಟ ಮಾಡುವ ಮೊತ್ತವನ್ನು ಫ್ರಾಂಚೈಸಿಯ ನಿಧಿಯಿಂದ ಕಡಿತಗೊಳಿಸಲಾಗುತ್ತದೆ.
ರಿಷಭ್ ಪಂತ್ ಅತ್ಯಂತ ದುಬಾರಿ ಆಟಗಾರ
ಐಪಿಎಲ್ ಇತಿಹಾಸದಲ್ಲಿಯೇ ರಿಷಭ್ ಪಂತ್ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಕಳೆದ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ 27 ಕೋಟಿ ರು. ಗಳಿಗೆ ರಿಷಭ್ ಪಂತ್ ಅವರನ್ನು ಖರೀದಿಸಿತ್ತು ಹಾಗೂ ನಾಯಕತ್ವವನ್ನು ನೀಡಿತ್ತು. ನಾಳೆ (ಮಂಗಳವಾರ) ನಡೆಯುವ ಮಿನಿ ಹರಾಜಿನಲ್ಲಿ ಈ ದಾಖಲೆಯನ್ನು ಕ್ಯಾಮೆರಾನ್ ಗ್ರೀನ್ ಮುರಿಯುವ ಸಾಧ್ಯತೆ ಇದೆ. ಆದರೆ, ಅವರು ವೈಯಕ್ತಿಕವಾಗಿ 18 ಕೋಟಿ ರು. ಗಳಿಂದ ಜಾಸ್ತಿ ಹಣ ಪಡೆಯಲು ಸಾಧ್ಯವಿಲ್ಲ.
IPL 2025 Auction Highest Paid Players: ಕಳೆದ ಐಪಿಎಲ್ ಸೀಸನ್‌ನ ಟಾಪ್ 5 ದುಬಾರಿ ಆಟಗಾರರು!
ರಿಷಭ್ ಪಂತ್ 27 ಕೋಟಿ ರು. ಗಳ ಮೂಲಕ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ಮುರಿದಿದ್ದರು. ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ (PBKS) ತಂಡವನ್ನು 26.75 ಕೋಟಿ ರೂ. ಪಡೆಯುವ ಮೂಲಕ ಸೇರಿಕೊಂಡಿದ್ದರು. ಅಯ್ಯರ್ 2025ರ ಐಪಿಎಲ್ ಫೈನಲ್‌ಗೆ ಪಂಜಾಬ್ ತಂಡವನ್ನು ತಮ್ಮ ನಾಯಕತ್ವದಲ್ಲಿ ತಲುಪಿಸಿದ್ದರು. ಆದರೆ ಎಲ್‌ಎಸ್‌ಜಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.