ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ನೀಡಲು ತಡ ಮಾಡುತ್ತಿರುವುದಕ್ಕೆ ಕಾರಣ ತಿಳಿಸಿದ ಬೌಲಿಂಗ್‌ ಕೋಚ್‌!

ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಲು ತಡ ಮಾಡುತ್ತಿರುವುದೇಕೆಂದು ಟೀಮ್‌ ಇಂಡಿಯಾ ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ ತಿಳಿಸಿದ್ದಾರೆ. ಐರ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಬೆಂಚ್‌ ಕಾದಿದ್ದ ವೈಭವ್‌, ಇದೀಗ ಇಂಗ್ಲೆಂಡ್‌ ಎದುರು ಆರಂಭಿಕ ಪಂದ್ಯದಲ್ಲಿಯೂ ಅವರಿಗೆ ಅವಕಾಶ ನೀಡಲಾಗಿರಲಿಲ್ಲ.

ವೈಭವ್‌ಗೆ ಚಾನ್ಸ್‌ ನೀಡಲು ತಡಮಾಡಲು ಕಾರಣ ತಿಳಿಸಿದ ಮಾರ್ಕೆಲ್‌.

ಮ್ಯಾಂಚೆಸ್ಟರ್‌: ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ (Vaibhav Sooryavanshi) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಸಲು ತಡ ಮಾಡುತ್ತಿರುವ ಟೀಮ್‌ ಮ್ಯಾನೇಜ್‌ಮೆಂಟ್‌ನ ಕ್ರಮವನ್ನು ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ (Morne Morkel) ಸಮರ್ಥಿಸಿಕೊಂಡಿದ್ದಾರೆ. ಈಗಾಗಲೇ ತಂಡಕ್ಕೆ ಅಪಾರ ಕೊಡುಗೆಯನ್ನು ನೀಡುವ ಮೂಲಕ ತಮ್ಮ ಸ್ಥಾನಗಳನ್ನು ಗಟ್ಟಿ ಮಾಡಿಕೊಂಡಿರುವ ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಟ್ಟು ಯುವ ಬ್ಯಾಟ್ಸ್‌ಮನ್‌ಗೆ ತಕ್ಷಣ ಅವಕಾಶ ನೀಡುವುದು ನ್ಯಾಯ ಸಮ್ಮತವಲ್ಲ ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಪ್ರಚಾರ ಅಥವಾ ಸಾರ್ವಜನಿಕ ಒತ್ತಡದ ಆಧಾರದ ಮೇಲೆ ತಂಡದಲ್ಲಿ ಬದಲಾವಣೆ ಮಾಡುವ ಬದಲು, ನಿರಂತರವಾಗಿ ಅತ್ಯುನ್ನತ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ನೀಡುವುದು ತಂಡದ ನೀತಿ ಎಂದು ಹೇಳಿದ್ದಾರೆ.

ಭಾರತದ ಹಾಲಿ ಆರಂಭಿಕ ಬ್ಯಾಟರ್‌ಗಳು ತಮ್ಮ ನಿರಂತರ ಪ್ರದರ್ಶನದ ಮೂಲಕ ತಂಡದ ನಿರ್ವಹಣೆಯ ವಿಶ್ವಾಸವನ್ನು ಗಳಿಸಿದ್ದಾರೆ ಎಂದು ಮಾರ್ಕೆಲ್ ಸ್ಪಷ್ಟಪಡಿಸಿದರು.

IND vs ENG: ವೈಭವ್‌ ಸೂರ್ಯವಂಶಿಗೆ ಆಡಿಸದ ಬಗ್ಗೆ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯೆ!

"ಟಿ20 ಕ್ರಿಕೆಟ್‌ನಲ್ಲಿ ನಮ್ಮ ಬಳಿ ನಂ.1 ಬ್ಯಾಟರ್ ಆಗಿದ್ದ ಅಭಿಷೇಕ್ ಶರ್ಮಾ ಇದ್ದಾರೆ ಎಂಬುದನ್ನು ನಾವು ಗೌರವಿಸಬೇಕು. ಸಂಜು ಸ್ಯಾಮ್ಸನ್ ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರರಾಗಿದ್ದರು. ಅವರ ಸಾಮರ್ಥ್ಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ," ಎಂದು ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಮಾರ್ನೆ ಮಾರ್ಕೆಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಒಟ್ಟಾರೆ ಪ್ರದರ್ಶನ, ವಿಶೇಷವಾಗಿ ಐಪಿಎಲ್‌ ಟೂರ್ನಿಯಲ್ಲಿ ತೋರಿದ ಉತ್ತಮ ಪ್ರದರ್ಶನದ ಫಲವಾಗಿ ಅವರು ಭಾರತ ತಂಡದ ವಿಶ್ವಾಸವನ್ನು ಗಳಿಸಿದ್ದಾರೆ ಎಂದು ಬೌಲಿಂಗ್‌ ಕೋಚ್‌ ಹೇಳಿದ್ದಾರೆ.

"ಸಂಜು ಸ್ಯಾಮ್ಸನ್‌ ಅದ್ಭುತ ಐಪಿಎಲ್ ಋತುವನ್ನು ಹೊಂದಿದ್ದರು. ಆದ್ದರಿಂದ ಕೋಚಿಂಗ್ ಸಿಬ್ಬಂದಿಯಾಗಿ ನಮ್ಮ ಆಟಗಾರರ ಮೇಲೆ ವಿಶ್ವಾಸ ತೋರಿಸಿ ಅವರಿಗೆ ಬೆಂಬಲ ನೀಡುವುದು ನ್ಯಾಯಸಮ್ಮತವಾಗಿದೆ. ಹೌದು, ಬಾಗಿಲು ತಟ್ಟುತ್ತಿರುವ ಒಬ್ಬ ಪ್ರತಿಭಾವಂತ ಯುವ ಆಟಗಾರ ಇದ್ದಾರೆ ಮತ್ತು ಅದು ಖಂಡಿತವಾಗಿಯೂ ಉತ್ಸಾಹ ಮೂಡಿಸುವ ಸಂಗತಿಯಾಗಿದೆ," ಎಂದು ಅವರು ತಿಳಿಸಿದ್ದಾರೆ.

IND vs ENG: ವೈಭವ್‌ ಸೂರ್ಯವಂಶಿ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಶ್ರೇಯಸ್‌ ಅಯ್ಯರ್‌!

ದಕ್ಷಿಣ ಆಫ್ರಿಕಾದ ಮಾಜಿ ವೇಗಿ, ಅನುಭವಿ ಆಟಗಾರರ ಬೆನ್ನಿಗೆ ನಿಲ್ಲುವುದು ಕೇವಲ ಆರಂಭಿಕ ಬ್ಯಾಟರ್‌ಗಳಿಗೆ ಮಾತ್ರವಲ್ಲ, ಇಡೀ ತಂಡಕ್ಕೂ ವಿಶ್ವಾಸ ತುಂಬುವ ಸಂದೇಶವಾಗುತ್ತದೆ ಎಂದು ಹೇಳಿದ್ದಾರೆ. "ಇದು ಕೇವಲ ಅಗ್ರ ಕ್ರಮಾಂಕದ ಇಬ್ಬರು ಆಟಗಾರರಿಗಷ್ಟೇ ಅಲ್ಲ, ಇಡೀ ತಂಡಕ್ಕೆ ನಾವು ನಿಮ್ಮ ಬೆನ್ನಿಗೆ ನಿಂತಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ," ಎಂದು ಮಾರ್ನೆ ಮಾರ್ಕೆಲ್‌ ಹೇಳಿದ್ದಾರೆ.

ಹಿರಿಯ ಆರಂಭಿಕರ ಮೇಲೆ ಟೀಮ್‌ ಮ್ಯಾನೇಜ್‌ಮೆಂಟ್‌ ಹೆಚ್ಚಿನ ವಿಶ್ವಾಸವನ್ನು ಇಟ್ಟಿದ್ದು, ವೈಭವ್ ಸೂರ್ಯವಂಶಿಯ ಬಹುನಿರೀಕ್ಷಿತ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕೆ ಇನ್ನಷ್ಟು ಕಾಯಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ದೇಶದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರಾಗಿದ್ದರೂ, ದೊಡ್ಡ ವೇದಿಕೆಯಲ್ಲಿ ತಮ್ಮ ಅವಕಾಶಕ್ಕಾಗಿ ಅವರು ಕಾಯಬೇಕಾಗುತ್ತದೆ.