ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಜು ಸ್ಯಾಮ್ಸನ್‌ ಬೆಂಚ್‌ ಕಾಯುತ್ತಿರುವುದನ್ನು ನೋಡಲು ನೋವಾಗುತ್ತದೆ: ಎಸ್‌ ಬದ್ರಿನಾಥ್‌!

S Badrinath on Sanju Samson: ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಸರಣಿಯಲ್ಲಿ ಬೆಂಚ್‌ ಕಾಯುತ್ತಿರುವ ಸಂಜು ಸ್ಯಾಮ್ಸನ್‌ ಬಗ್ಗೆ ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶುಭಮನ್‌ ಗಿಲ್‌ಗೆ ಉಪನಾಯಕತ್ವ ನೀಡಿರುವ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಎಸ್‌ ಬದ್ರಿನಾಥ್‌ ಬೆಂಬಲ.

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಲ್ಲಿ(IND vs SA) ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಸತತವಾಗಿ ಬೆಂಚ್‌ ಕಾಯಿಸುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ (S Badrinath) ಬೇಸರ ವ್ಯಕ್ತಪಡಿಸಿದ್ದಾರೆ. ಚುಟುಕು ತಂಡದಲ್ಲಿ ಸಂಜು ಸ್ಯಾಮ್ಸನ್‌ ಅವರ ಬದಲು ಭಾರತ ಟಿ20 ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಶುಭಮನ್‌ ಗಿಲ್‌ಗೆ (Shubman Gill) ಅವಕಾಶ ನೀಡಿರುವ ಬಗ್ಗೆಯೂ ಅವರು ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಸೇರಿದಂತೆ ಟೀಮ್‌ ಮ್ಯಾನೇಜ್‌ಮೆಂಟ್‌ ಅನ್ನು ಪ್ರಶ್ನೆ ಮಾಡಿದ್ದಾರೆ. ಸಂಜು ಕೇವಲ ಟಿ20ಐ ತಂಡದಲ್ಲಿ ಮಾತ್ರ ಇದ್ದಾರೆ, ಆದರೆ ಗಿಲ್‌ ಟೆಸ್ಟ್‌ ಹಾಗೂ ಒಡಿಐ ತಂಡಗಳಲ್ಲಿದ್ದಾರೆ.

ಮುಲ್ಲಾನ್‌ಪುರದಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಶುಭಮನ ಗಿಲ್‌ ಗೋಲ್ಡನ್‌ ಡಕ್‌ಔಟ್‌ ಆದ ಬಳಿಕ ಎಸ್‌ ಬದ್ರಿನಾಥ್‌ ಈ ಮಾತನ್ನು ಹೇಳಿದರು. ಕಳೆದ ಆರು ಟಿ20ಐ ಇನಿಂಗ್ಸ್‌ಗಳಲ್ಲಿ ಗಿಲ್‌ ಅವರ ಮೂರನೇ ಒಂದಂಕಿ ಮೊತ್ತ ಇದಾಗಿದೆ. ಕಟಕ್‌ನಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಅವರು ಆಡಿದ್ದ ಎರಡು ಎಸೆತಗಳಲ್ಲಿ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

IND vs SA: ರೋಹಿತ್‌ ಶರ್ಮಾರ ವಿಶೇಷ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್!

ಶುಭಮನ್‌ ಗಿಲ್‌ ಅವರು ಏಷ್ಯಾ ಕಪ್‌ ಟೂರ್ನಿಯ ಮೂಲಕ ಭಾರತ ಟಿ20ಐ ತಂಡಕ್ಕೆ ಮರಳಿದ್ದರು. ಆದರೆ, ಅವರು ಅಂದಿನಿಂದಲೂ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುತ್ತಿರುವ ಕಾರಣ, ಈ ಹಿಂದಿನ ಪಂದ್ಯಗಳಲ್ಲಿ ಓಪನರ್‌ ಆಗಿ ಮೂರು ಶತಕಗಳನ್ನು ಬಾರಿಸಿದ್ದ ಸಂಜು ಸ್ಯಾಮ್ಸನ್‌ ಅವರನ್ನು ಮಧ್ಯಮ ಕ್ರಮಾಂಕಕ್ಕೆ ತಳ್ಳಲಾಗಿತ್ತು. ನಂತರ ಜಿತೇಶ್‌ ಶರ್ಮಾಗೆ ವಿಕೆಟ್‌ ಕೀಪರ್‌ ಸ್ಥಾನವನ್ನು ನೀಡಿ, ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಡಲಾಗಿದೆ.

ಸಂಜು ಸ್ಯಾಮ್ಸನ್‌ ಬೆಂಚ್‌ ಕಾಯುತ್ತಿರುವುದು ನೋವು ತಂದಿದೆ

ಸ್ಟಾರ್‌ ಸ್ಪೋರ್ಟ್ಸ್‌ ತಮಿಳಿನಲ್ಲಿ ಮಾತನಾಡಿದ ಎಸ್‌ ಬದ್ರಿನಾಥ್‌, "ಸಂಜು ಸ್ಯಾಮ್ಸನ್‌ ಅವರು ಎರಡು ಶತಕಗಳನ್ನು ಬಾರಿಸಿದ್ದಾರೆ. ನಾವು ಟಿ20 ಕ್ರಿಕೆಟ್‌ ಬಗ್ಗೆ ಮಾತನಾಡುತ್ತಿದ್ದೇವೆ ಹಾಗೂ ಸಂಜು ಮೂರು ಶತಕಗಳನ್ನು ಬಾರಿಸಿದ್ದಾರೆ. ಒಬ್ಬ ಆಟಗಾರನಾಗಿ ಇದಕ್ಕಿಂತ ಜಾಸ್ತಿ ಏನು ಮಾಡಬೇಕು? ಅತ್ಯುತ್ತಮ ಪ್ರದರ್ಶನವನ್ನು ತೋರಿದ ಆಟಗಾರ ಈ ರೀತಿ ಬೆಂಚ್‌ ಕಾಯುತ್ತಿರುವುದನ್ನು ನೋಡಲು ಸ್ವಲ್ಪ ನೋವಾಗುತ್ತದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

IND vs SA: ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!

"ಅವರು ಭಾರತ ತಂಡಕ್ಕೆ ಉಪ ನಾಯಕ. ನಾಯಕ ಅಥವಾ ಉಪ ನಾಯಕನಾದರೆ ಮಾತ್ರ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇನೆ. ಈ ಸಂಖ್ಯೆಗಳಲ್ಲಿ ಅವರು ಉಪ ನಾಯಕನಾಗಿದ್ದಾರೆ. ಬ್ಯಾಕ್‌ ಅಪ್‌ ಆಟಗಾರರು ಇಲ್ಲ ಎಂದಾದರೆ, ಇದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ," ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

ಸಮಬಲ ಸಾಧಿಸಿರುವ ಭಾರತ vs ದಕ್ಷಿಣ ಆಫ್ರಿಕಾ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸದ್ಯ ಎರಡು ಪಂದ್ಯಗಳ ಅಂತ್ಯಕ್ಕೆ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಮೊದಲನೇ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಎರಡನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಗೆದ್ದಿದೆ.