ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು (RCB vs GT) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಎದುರಾಳಿ ಜಿಟಿ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಅಂದ ಹಾಗೆ ಟಾಸ್ ವೇಳೆ ಆರ್‌ಸಿಬಿ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ಪಾಟಿದಾರ್ ನೀಡಿದ್ದಾರೆ. ಅಪಾಯಕಾರಿ ಆರಂಭಿಕ ಫಿಲ್ ಸಾಲ್ಟ್ (Phil Salt) ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಹೇಳಿದ್ದಾರೆ ಹಾಗೂ ಇದಕ್ಕೆ ಕಾರಣವೇನೆಂದು ಕೂಡ ವಿವರಿಸಿದ್ದಾರೆ.
ಪಂದ್ಯದ ಟಾಸ್ ಬಳಿಕ ರಜತ್ ಪಾಟಿದಾರ್ ಅವರನ್ನು ಆರ್‌ಸಿಬಿ ಪ್ಲೇಯಿಂಗ್ xi ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಸಿಬಿ ಕ್ಯಾಪ್ಟನ್, ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಒಂದು ಬದಲಾವಣೆ ತಂದಿದ್ದು, ಜೇಕಬ್ ಬೆಥೆಲ್ ಕಣಕ್ಕೆ ಇಳಿಯಲಿದ್ದಾರೆಂದು ಮಾಹಿತಿ ನೀಡಿದರು. ಆದರೆ, ಅವರು ಇಂಗ್ಲೆಂಡ್ ಓಪನರ್ ಯಾವ ಬಗೆಯ ಗಾಯಕ್ಕೆ ತುತ್ತಾಗಿದ್ದಾರೆಂದು ರಜತ್ ಈ ವೇಳೆ ಮಾಹಿತಿ ನೀಡಲಿಲ್ಲ.
RCB vs GT: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ!
"ನಾವು ಮೊದಲು ಬೌಲ್ ಮಾಡಬೇಕೆಂದು ಭಾವಿಸುತ್ತೇನೆ. ಏಕೆಂದರೆ, ಸ್ಕೋರ್ ಹಾಗೂ ತಂಡದ ಮೊತ್ತದ ಬಗ್ಗೆ ಚೇಸಿಂಗ್‌ನಲ್ಲಿ ನಿಮಗೆ ಫಲಿತಾಂಶದ ಬಗ್ಗೆ ಸಾಕಷ್ಟು ಸ್ಪಷ್ಟತೆ ಸಿಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು. ಆರ್‌ಸಿಬಿ ಪ್ಲೇಯಿಂಗ್ xIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದ್ದು, ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾಗಿದ್ದು, ಜೇಕಬ್ ಬೆಥೆಲ್ ಒಳಗೆ ಬಂದಿದ್ದಾರೆ," ಎಂದು ರಜತ್ ಪಾಟಿದಾರ್ ಮಾಹಿತಿ ನೀಡಿದ್ದಾರೆ.
"ಈ ವರ್ಷದಲ್ಲಿ ನಾವು ಪಿಚ್ ಹಾಗೂ ಸನ್ನಿವೇಶವನ್ನು ಸರಿಯಾಗಿ ಅರಿತುಕೊಂಡು ಅದಕ್ಕೆ ತಕ್ಕಂತೆ ಆಡುತ್ತಿದ್ದೇವೆಂದು ಎಂಬುದು ನಮ್ಮ ಪಾಲಿಗೆ ಅದ್ಭುತ ಸಂಗತಿ. ಹೌದು, ಇದರ ಹಿಂದೆ ಸಾಕಷ್ಟು ಯೋಜನೆಗಳು ಇವೆ. ನೀವು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಯಾವಾಗ ಬಂದರೂ ಬ್ಯಾಟ್ ಮಾಡಲು ಇದು ತುಂಬಾ ಚೆನ್ನಾಗಿ ಇರುತ್ತದೆ. ಇಂದು (ಶುಕ್ರವಾರ) ಪಿಚ್ ಮೇಲೆ ಹುಲ್ಲು ಇಲ್ಲದ ಕಾರಣ, ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವುದು ಸ್ವಲ್ಪ ಕಷ್ಟವಾಗಿರುತ್ತದೆ," ಎಂದು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲು ಕಾರಣವನ್ನು ಅವರು ವಿವರಿಸಿದರು.
RCB vs GT: ಗುಜರಾತ್ ಟೈಟನ್ಸ್ ಎದುರು ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ! ಇದಕ್ಕೆ ಕಾರಣ ಇಲ್ಲಿದೆ
ಫಿಲ್ ಸಾಲ್ಟ್ ಗಾಯದ ಬಗ್ಗೆ ಆರ್‌ಸಿಬಿ ಎಕ್ಸ್ ಪೋಸ್ಟ್
ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾಗಿರುವ ಬಗ್ಗೆ ಆರ್‌ಸಿಬಿ ಕೂಡ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ. "ಇಂದು (ಶುಕ್ರವಾರ) ನಾವು ಫಿಲ್ ಸಾಲ್ಟ್ ಅವರನ್ನು ಕಳೆದುಕೊಂಡಿದ್ದೇವೆ. ಆದಷ್ಟು ಬೇಗ ಗುಣಮುಖರಾಗಿ ಬಂದು, ಮತ್ತೊಮ್ಮೆ ಆರ್‌ಸಿಬಿ ಪರ ಆಡುವುದನ್ನು ನೋಡಲು ಎದುರು ನೋಡುತ್ತಿದ್ದೇವೆ," ಎಂದು ಹಂಚಿಕೊಂಡಿರುವ ಫಿಲ್ ಸಾಲ್ಟ್ ಪೋಟೋಗೆ ಆರ್‌ಸಿಬಿ ಈ ರೀತಿಯ ಶೀರ್ಷಿಕೆಯನ್ನು ನೀಡಿದೆ.
ಅಣ್ಣಾವ್ರ ಜನುಮ ದಿನದ ನಿಮಿತ್ತ ಡಾ. ರಾಜ್‌ಕುಮಾರ್‌ಗೆ ವಿಶೇಷ ಗೌರವ ಸಲ್ಲಿಸಿದ ಆರ್‌ಸಿಬಿ!
2026ರ ಟೂರ್ನಿಯಲ್ಲಿ ಫಿಲ್ ಸಾಲ್ಟ್ ಫಾರ್ಮ್ ಹೇಗಿದೆ?
ಫಿಲ್ ಸಾಲ್ಟ್ ಪ್ರಸ್ತುತ ನಡೆಯುತ್ತಿರುವ 2026ರ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ ಆರು ಇನಿಂಗ್ಸ್‌ಗಳಿಂದ 168.33ರ ಸ್ಟ್ರೈಕ್ ರೇಟ್‌ನಲ್ಲಿ 202 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 11 ಸಿಕ್ಸರ್‌ಗಳೊಂದಿಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಗಾಯದ ಸ್ವರೂಪ ಯಾವ ರೀತಿ ಇದೆ ಹಾಗೂ ಅವರು ಸಂಪೂರ್ಣವಾಗಿ ಗುಣಮುಖರಾಗಲು ಎಷ್ಟು ಸಮಯದ ಅಗತ್ಯವಿದೆ ಎಂಬ ಮಾಹಿತಿಯನ್ನು ಕೂಡ ಆರ್‌ಸಿಬಿ ರಿವೀಲ್ ಮಾಡಿಲ್ಲ.