ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೇಮಂಗ್ ಬದಾನಿಯನ್ನು ಹಿಂದಿಕ್ಕಿ ಜಹೀರ್ ಖಾನ್‌ಗೆ ಸಿಎಸ್‌ಕೆ ಹೆಡ್‌ ಕೋಚ್ ಹುದ್ದೆ ನೀಡಲು ಕಾರಣವೇನು?

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಟೀಮ್‌ ಇಂಡಿಯಾ ಮಾಜಿ ವೇಗಿ ಜಹೀರ್‌ ಖಾನ್‌ ಅವರನ್ನು ಹೆಡ್‌ ಕೋಚ್‌ ಆಗಿ ನೇಮಿಸಲಾಗಿದೆ. ಆ ಮೂಲಕ ಹೇಮಂಗ್‌ ಬದಾನಿ ಅವರನ್ನು ಕೈ ಬಿಟ್ಟು ಜಹೀರ್‌ ಖಾನ್‌ ಅವರನ್ನು ನೇಮಿಸಲಾಗಿದೆ. ಇದರ ಬಲವಾದ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.

ಹೇಮಂಗ್‌ ಬದಾನಿಗೆ ಸಿಎಸ್‌ಕೆ ಹೆಡ್‌ ಕೋಚ್‌ ಸ್ಥಾನ ಕೈ ತಪ್ಪಲು ಕಾರಣವೇನು?

ನವದೆಹಲಿ: ಸ್ಟೀಫನ್‌ ಫ್ಲೆಮಿಂಗ್‌ ( Stephen Fleming) ಅವರು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡವನ್ನು ತೊರೆದು ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಕೋಚ್‌ ಆಗಿ ಸೇರಿದ ಬಳಿಕ ಐದು ಬಾರಿ ಚಾಂಪಿಯನ್ಸ್‌ ತಂಡದ ಕೋಚಿಂಗ್‌ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಮೊದಲನೇಯದಾಗಿ ಸಿಎಸ್‌ಕೆ ತಂಡಕ್ಕೆ ಟೀಮ್‌ ಇಂಡಿಯಾ ಮಾಜಿ ವೇಗಿ ಜಹೀರ್‌ ಖಾನ್‌ (Zaheer Khan) ಅವರನ್ನು ಹೆಡ್‌ ಕೋಚ್‌ ಆಗಿ ನೇಮಿಸಲಾಗಿದೆ. ಇದಕ್ಕೂ ಮುನ್ನ ಹೇಮಂಗ್‌ ಬದಾನಿ ಅವರನ್ನು ಸಿಎಸ್‌ಕೆ ತಂಡದ ಹೆಡ್‌ ಕೋಚ್‌ ಹುದ್ದೆಗೆ ನೇಮಿಸಬಹುದು ಎಂಬ ಬಗ್ಗೆಯೂ ವರದಿಗಳಾಗಿದ್ದವು. ಆದರೆ, ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಜಹೀರ್‌ ಖಾನ್‌ ಹೆಡ್‌ ಕೋಚ್‌ ಆಗಿ ನೇಮಕಗೊಂಡರು. ಹೇಮಂಗ್‌ ಬದಾನಿ ಅವರನ್ನು ಕೈಬಿಟ್ಟು, ಜಹೀರ್‌ಗೆ ಈ ದೊಡ್ಡ ಹುದ್ದೆಯನ್ನು ನೀಡಲು ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಹೆಸರುಗಳು ಕೇಳಿಬಂದಿದ್ದರೂ, ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳುವ ಸಾಧ್ಯತೆ ಬಹುತೇಕ ಇರಲಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಿಎಸ್‌ಕೆ ತಂಡದ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ಹಲವು ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರೂ, ಇಯಾನ್ ಮಾರ್ಗನ್ ಅವರ ಹೆಸರು ವಾಸ್ತವಿಕ ಆಯ್ಕೆಗಳ ಪಟ್ಟಿಯಲ್ಲಿ ಇರಲಿಲ್ಲ ಎಂದು ವರದಿ ತಿಳಿಸಿದೆ.

ತಮಿಳುನಾಡಿನವರೇ ಆದ ಹೇಮಂಗ್ ಬದಾನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಹುದ್ದೆಯ ರೇಸ್‌ನಲ್ಲಿ ಹಿಂದೆ ಬೀಳಲು ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗಿನ ಅವರ ಎರಡು ವರ್ಷಗಳ ಕೋಚಿಂಗ್ ಅವಧಿಯ ಪ್ರದರ್ಶನವೂ ಒಂದು ಕಾರಣ ಎಂದು ವರದಿಯೊಂದು ತಿಳಿಸಿದೆ.

IND vs JAP ನಡುವಣ ಏಕೈಕ ಪಂದ್ಯದಲ್ಲಿ ಟಾಸ್‌ ಗೆದ್ದು ವಿಶಿಷ್ಠ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

“ಜಿಎಂಆರ್‌ ಸಹ-ಮಾಲೀಕತ್ವದ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದ ಎರಡು ವರ್ಷಗಳಲ್ಲೂ ಬದಾನಿ ಅವರ ನೇತೃತ್ವದಲ್ಲಿ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಬದಾನಿ ಅವರು ILT20 ಮತ್ತು ದಿ ಹಂಡ್ರೆಡ್ ಟೂರ್ನಿಗಳಲ್ಲಿ ಕೋಚ್ ಆಗಿ ಉತ್ತಮ ಕೆಲಸ ಮಾಡಿದ್ದರೂ, ಆ ಟೂರ್ನಿಗಳನ್ನು ಐಪಿಎಲ್‌ಗೆ ಹೋಲಿಸಲಾಗುವುದಿಲ್ಲ. ಹೀಗಾಗಿ ಅವರ ಆ ಅನುಭವಕ್ಕೆ ಹೆಚ್ಚಿನ ಮಹತ್ವ ನೀಡಲು ಸಾಧ್ಯವಾಗಲಿಲ್ಲ,” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಜಹೀರ್ ಖಾನ್ ಅವರಿಗೆ ಐಪಿಎಲ್‌ ಟೂರ್ನಿಯಲ್ಲಿ ತಂಡದೊಂದಿಗೆ ಕೆಲಸ ಮಾಡಿದ ಅನುಭವವೂ ಇದೆ. ಅವರು 2024ರ ಐಪಿಎಲ್‌ ಋತುವಿನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ ಅದೇ ಫ್ರಾಂಚೈಸಿಯಲ್ಲಿ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್ ಡೆವಲಪ್‌ಮೆಂಟ್ ಹುದ್ದೆಯನ್ನೂ ನಿರ್ವಹಿಸಿದ್ದರು.



ಈ ಐಪಿಎಲ್‌ ಅನುಭವ ಹಾಗೂ ವಿವಿಧ ಫ್ರಾಂಚೈಸಿಗಳಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದ ಹಿನ್ನೆಲೆ, ಸಿಎಸ್‌ಕೆ ಕೋಚ್ ಹುದ್ದೆಗೆ ಜಹೀರ್ ಖಾನ್ ಅವರ ಆಯ್ಕೆಯಲ್ಲಿ ಪ್ರಮುಖ ಅಂಶವಾಗಿರಬಹುದು ಎಂದು ವರದಿ ತಿಳಿಸಿದೆ.

ಸಿಎಸ್‌ಕೆ ಪೋಸ್ಟ್‌ನಲ್ಲಿ ಏನಿದೆ?

"ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಡ್‌ ಕೋಚ್‌ ಆಗಿ ಜಹೀರ್‌ ಖಾನ್‌ಗೆ ಸ್ವಾಗತ," ಎಂದು ಸಿಎಸ್‌ಕೆ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

ಸಿಎಸ್‌ಕೆ ಪೋಸ್ಟ್‌ನಲ್ಲಿ ಏನಿದೆ?

"ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಡ್‌ ಕೋಚ್‌ ಆಗಿ ಜಹೀರ್‌ ಖಾನ್‌ಗೆ ಸ್ವಾಗತ," ಎಂದು ಸಿಎಸ್‌ಕೆ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.



ಜಹೀರ್‌ ಖಾನ್‌ ಪ್ರತಿಕ್ರಿಯೆ

“ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ಕೆ ತಂಡದ ಭಾಗವಾಗುತ್ತಿರುವುದು ನನಗೆ ಹೆಮ್ಮೆಯ ಸಂಗತಿ. ಕ್ರಿಕೆಟಿಗನಾಗಿ ನಾನು ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಆಡಿದ್ದೇನೆ ಮತ್ತು ಆ ಪಂದ್ಯಗಳನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಚೆಪಾಕ್‌ನಲ್ಲಿ ಸೂಪರ್‌ಫ್ಯಾನ್ಸ್ ಸೃಷ್ಟಿಸುವ ವಾತಾವರಣ ಪಂದ್ಯಗಳನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಇಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಈ ಫ್ರಾಂಚೈಸಿಯ ಪರಂಪರೆಯೊಂದಿಗೆ ಸೇರಿಕೊಳ್ಳಲು ನಾನು ಕಾತರನಾಗಿದ್ದೇನೆ,” ಎಂದು ಜಹೀರ್ ಖಾನ್ ಫ್ರಾಂಚೈಸಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Breaking News: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಹೀರ್‌ ಖಾನ್‌ ಮುಂದಿನ ಹೆಡ್‌ ಕೋಚ್‌!

48ನೇ ವರ್ಷಕ್ಕೆ ಕಾಲಿಡಲಿರುವ ಜಹೀರ್ ಖಾನ್ ಭಾರತ ಪರ 92 ಟೆಸ್ಟ್, 200 ಏಕದಿನ ಹಾಗೂ 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಭಾರತ ತಂಡದ ನಾಯಕನಾಗಿ ಎಂಎಸ್ ಧೋನಿ ಮುನ್ನಡೆಸಿದ ಅವಧಿಯಲ್ಲಿ ಜಹೀರ್ ಖಾನ್ ಪ್ರಮುಖ ಹಾಗೂ ನಂಬಿಕಸ್ಥ ಬೌಲರ್ ಆಗಿದ್ದರು. ವಿಶೇಷವಾಗಿ 2011ರ ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಜಹೀರ್ ಖಾನ್ ಪ್ರಮುಖ ಪಾತ್ರ ವಹಿಸಿದ್ದರು.

2011ರ ವಿಶ್ವಕಪ್ ಟೂರ್ನಿಯಲ್ಲಿ ಜಹೀರ್ ಒಟ್ಟು 21 ವಿಕೆಟ್‌ಗಳನ್ನು ಕಬಳಿಸಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ತಮ್ಮ ವೇಗ, ಸ್ವಿಂಗ್ ಹಾಗೂ ಅನುಭವದ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೊಡ್ಡಿದ್ದ ಜಹೀರ್, ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ಇದೀಗ ಆಟಗಾರನಾಗಿ ಹಲವು ವರ್ಷಗಳ ಅನುಭವ ಹೊಂದಿರುವ ಜಹೀರ್ ಖಾನ್, ಸಿಎಸ್‌ಕೆ ತಂಡದ ಕೋಚ್ ಆಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.