ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WI vs PAK: 18ನೇ ಒಡಿಐ ಶತಕ ಸಿಡಿಸಿ ಬ್ರಿಯಾನ್‌ ಲಾರಾ ಸನಿಹ ಬಂದ ಶೇಯ್‌ ಹೋಪ್‌!

ವೆಸ್ಟ್‌ ಇಂಡೀಸ್‌ ತಂಡದ ಬ್ಯಾಟ್ಸ್‌ಮನ್‌ ಶೇಯ್‌ ಹೋಪ್‌ ಅವರು ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 18ನೇ ಶತಕವನ್ನು ಪೂರ್ಣಗೊಳಿಸುವ ಮೂಲಕ ವಿಂಡೀಸ್‌ ಗ್ರೇಟ್‌ ದೆಸ್ಮಂಡ್‌ ಹೇನ್ಸ್‌ ಅವರನ್ನು ಹಿಂದಿಕ್ಕಿದ್ದಾರೆ.

ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ ಶೇಯ್‌ ಹೋಪ್‌.

ಟ್ರಿನಿಡಾಡ್‌: ವೆಸ್ಟ್‌ ಇಂಡೀಸ್‌ ತಂಡದ ಬ್ಯಾಟ್ಸ್‌ಮನ್‌ ಶೇಯ್‌ ಹೋಪ್‌ (Shai Hope) ಅವರು ತಮ್ಮ ಒಡಿಐ ವೃತ್ತಿ ಜೀವನದ 18ನೇ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ವೆಸ್ಟ್‌ ಇಂಡೀಸ್‌ ದಿಗ್ಗಜ ದೆಸ್ಮಂಡ್‌ ಹೇನ್ಸ್‌ ಅವರನ್ನು ಹಿಂದಿಕ್ಕುವ ಮೂಲಕ ಬ್ಯಾಟಿಂಗ್‌ ದಂತಕತೆ ಬ್ರಿಯಾನ್‌ ಲಾರಾ (19) ಅವರ ಸನಿಹದಲಿದ್ದಾರೆ. ಪಾಕಿಸ್ತಾನ (Pakistan) ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ (WI vs PAK) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಶೇಯ್‌ ಹೋಪ್‌, ಐದು ಭರ್ಜರಿ ಸಿಕ್ಸರ್‌ ಹಾಗೂ 10 ಬೌಂಡರಿಗಳ ಮೂಲಕ ಅಜೇಯ 120 ರನ್‌ಗಳನ್ನು ಬಾರಿಸಿದರು. ಶೇಯ್‌ ಹೋಪ್‌ ಅವರ ಶತಕದ ಬಲದಿಂದ ವಿಡೀಸ್‌ ತಂಡ 6 ವಿಕೆಟ್‌ಗಳ ನಷ್ಟಕ್ಕೆ 294 ರನ್‌ಗಳನ್ನು ಕಲೆ ಹಾಕಿತ್ತು.

ಟ್ರಿನಿಡಾಡ್‌ನ ಬ್ರಿಯಾನ್‌ ಲಾರಾ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ವೆಸ್ಟ್‌ ಇಂಡೀಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 10 ರನ್‌ ಇರುವಾಗಲೇ ಒಂದು ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌, ನಂತರ 68 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಶೇಯ್‌ ಹೋಪ್‌, ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆ ಮೂಲಕ ತಮ್ಮ ವೃತ್ತಿ ಜೀವನದ 18ನೇ ಒಡಿಐ ಶತಕವನ್ನು ಸಿಡಿಸಿದ್ದರು.

AUS vs WI: ವೆಸ್ಟ್‌ ಇಂಡೀಸ್‌ ವಿರುದ್ಧ ಐದನೇ ಪಂದ್ಯವನ್ನು ಗೆದ್ದು ಇತಿಹಾಸ ಬರೆದ ಆಸ್ಟ್ರೇಲಿಯಾ!

2019ರಲ್ಲಿ ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೇಯ್‌ ಹೋಪ್‌, 142 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ 49.82ರ ಸರಾಸರಿಯಲ್ಲಿ 5879 ರನ್‌ಗಳನ್ನು ಕಲೆ ಹಾಕಿದ್ದಾರೆ. ವೆಸ್ಟ್‌ ಇಂಡೀಸ್‌ ಪರ ಅತಿ ಹೆಚ್ಚು ಒಡಿಐ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕ್ರಿಸ್‌ ಗೇಲ್‌ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನಕ್ಕೆ ಬ್ರಿಯಾನ್‌ ಲಾರಾ ಇದ್ದಾರೆ. ಇದೀಗ ಮೂರನೇ ಸ್ಥಾನಕ್ಕೆ ಶೇಯ್‌ ಹೋಪ್‌ ಲಗ್ಗೆ ಇಟ್ಟಿದ್ದಾರೆ.



ವೆಸ್ಟ್‌ ಇಂಡೀಸ್‌ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಕ್ರಿಸ್‌ ಗೇಲ್‌-ಪಂದ್ಯಗಳು: 298-ಶತಕಗಳು: 25

ಬ್ರಿಯಾನ್ ಲಾರಾ - ಪಂದ್ಯಗಳು: 295 - ಶತಕಗಳು: 19

ಶೇಯ್ ಹೋಪ್ - ಪಂದ್ಯಗಳು: 142 - ಶತಕಗಳು: 18

ದೆಸ್ಮಂಡ್ ಹೇನ್ಸ್ - ಪಂದ್ಯಗಳು: 238 - ಶತಕಗಳು: 17

ಶಿವನರೇನ್ ಚಂದ್ರಪಾಲ್ - ಪಂದ್ಯಗಳು: 268 - ಶತಕಗಳು: 11

ಗಾರ್ಡನ್ ಗ್ರೀನಿಡ್ಜ್ - ಪಂದ್ಯಗಳು: 128 - ಶತಕಗಳು: 11

ವಿವಿಯನ್ ರಿಚರ್ಡ್ಸ್ - ಪಂದ್ಯಗಳು: 187 - ಶತಕಗಳು: 11



ವೆಸ್ಟ್‌ ಇಂಡೀಸ್‌ಗೆ 202 ರನ್‌ ಜಯ

ವೆಸ್ಟ್‌ ಇಂಡೀಸ್‌ ನೀಡಿದ್ದ 220 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಜೇಡನ್‌ ಸೀಲ್ಸ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 29.2 ಓವರ್‌ಗಳಿಗೆ 92 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು. ಈ ಪಂದ್ಯದ ಗೆಲುವು ಮೂಲಕ ವೆಸ್ಟ್‌ ಇಂಡೀಸ್‌ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಜಯ ಸಾಧಿಸಿತು.