ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ಕೊಟ್ಟ ಸ್ಟೀಫನ್‌ ಫ್ಲೆಮಿಂಗ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ 13 ಲೀಗ್‌ ಪಂದ್ಯಗಳು ಮುಗಿದಿದ್ದು, ಇನ್ನು ಕೇವಲ ಒಂದು ಪಂದ್ಯ ಮಾತ್ರ ಬಾಕಿ ಇದೆ. ಆದರೆ, ಎಂಎಸ್‌ ಧೋನಿ ಸತತ ಗಾಯದ ಸಮಸ್ಯೆಯ ಕಾರಣ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಂದ ಹಾಗೆ ಎಂಎಸ್‌ ಧೋನಿಯ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸಿಎಸ್‌ಕೆ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಎಂಎಸ್‌ ಧೋನಿ ಐಪಿಎಲ್‌ ಭವಿಷ್ಯದ ಬಗ್ಗೆ ಸ್ಟೀಫನ್‌ ಫ್ಲೆಮಿಂಗ್‌.

ಚೆನ್ನೈ: ತನ್ನ ತವರು ಅಂಗಣ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ, ಎದುರಾಳಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ಗಳ ಸೋಲು ಅನುಭವಿಸಿತು. ಇನ್ನೂ ಒಂದು ಪಂದ್ಯ ಬಾಕಿ ಇದ್ದರೂ ಸಿಎಸ್‌ಕೆ ತಂಡದ ಪ್ಲೇಅಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ಕೊನೆಯ ಪಂದ್ಯವನ್ನು ಗೆದ್ದರೂ ಚೆನ್ನೈ ತಂಡದ ನಾಕ್‌ಔಟ್‌ ಭವಿಷ್ಯ ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿದೆ. ಅಂದ ಹಾಗೆ ಸಿಎಸ್‌ಕೆ ತಂಡದ 13 ಪಂದ್ಯಗಳು ಈಗಾಗಲೇ ಮುಗಿದಿದ್ದು, ಲೀಗ್‌ನಲ್ಲಿ ಇನ್ನು ಒಂದು ಪಂದ್ಯ ಮಾತ್ರ ಬಾಕಿ ಇದೆ. ಆದರೆ, ಎಂಎಸ್‌ ಧೋನಿ ಗಾಯ ಹಾಗೂ ಫಿಟ್ನೆಸ್‌ ಸಮಸ್ಯೆಯಿಂದ ಇನ್ನೂ ಒಂದೂ ಪಂದ್ಯವನ್ನು ಆಡಿಲ್ಲ. ಅಂದ ಹಾಗೆ ಎಂಎಸ್‌ ಧೋನಿಯ (MS Dhoni) ಐಪಿಎಲ್‌ ಭವಿಷ್ಯದ ಬಗ್ಗೆ ಸಿಎಸ್‌ಕೆ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಮಾಹಿತಿ ನೀಡಿದ್ದಾರೆ.

ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ತಂಡ, ಇಲ್ಲಿಯವರೆಗೂ ಆಡಿದ 13 ಪಂದ್ಯಗಳಲ್ಲಿ 12 ಅಂಕಗಳನ್ನು ಕಲೆ ಹಾಕಿದ್ದು, ಕೊನೆಯ ಪಂದ್ಯದಲ್ಲಿ ಗೆದ್ದರೂ ಒಟ್ಟು 14 ಅಂಕಗಳನ್ನು ಕಲೆ ಹಾಕಲಿದೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಸ್‌ಕೆ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೇಮಿಂಗ್‌, ಎಂಎಸ್‌ ಧೋನಿ ಮುಂದಿನ ಸೀಸನ್‌ ಆಡುವುದು ಅಥವಾ ಬಿಡುವುದು ಟೀಮ್‌ ಮ್ಯಾನೇಜ್‌ಮೆಂಟ್‌ನ ನಿರ್ಧಾರವಾಗಿದೆ. ಅವರು ಈ ಬಾರಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ, ಆದರೆ ತಂಡದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದ್ದಾರೆಂದು ಕೋಚ್‌ ತಿಳಿಸಿದ್ದಾರೆ.

ಈ ಬಾರಿ ಕೇವಲ ಮಿಸ್ಡ್ ಕಾಲ್, 2027ರ ಐಪಿಎಲ್‌ನಲ್ಲಿ ಧೋನಿ ಆಡಲಿದ್ದಾರೆ; ಸುರೇಶ್ ರೈನಾ

“ಇದು ಸಂಪೂರ್ಣವಾಗಿ ಟೀಮ್‌ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುವ ನಿರ್ಧಾರ. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂಬುದು ನನಗೆ ಗೊತ್ತು. ಎಂಎಸ್‌ ಧೋನಿ ಈ ವರ್ಷ ತಂಡದ ಜೊತೆ ಸಾಕಷ್ಟು ಸಮಯ ಕಳೆದಿದ್ದಾರೆ. ಅದು ತಂಡಕ್ಕೆ, ವಿಶೇಷವಾಗಿ ಯುವ ಆಟಗಾರರ ನಿರಂತರ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಅವರು ಪಂದ್ಯಗಳಲ್ಲಿ ಆಡದಿದ್ದರೂ ಕೂಡ ತಂಡದ ಮೇಲೆ ಅವರ ಪ್ರಭಾವ ಬಹಳ ದೊಡ್ಡದಾಗಿದೆ,” ಎಂದು ಸ್ಟೀಫನ್‌ ಫ್ಲೆಮಿಂಗ್‌ ಹೇಳಿದ್ದಾರೆ.

“ನಾವು ಈ ಸೀಸನ್‌ನಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಭವಿಷ್ಯ ರೂಪಿಸುವ ಹೊಸ ಆಟಗಾರರನ್ನು ಪರಿಚಯಿಸಿದ್ದೇವೆ. ಆದರೆ ಅಂತಿಮವಾಗಿ ಫಲಿತಾಂಶದ ಆಧಾರದ ಮೇಲೆಯೇ ನಮ್ಮನ್ನು ಮೌಲ್ಯಮಾಪನ ಮಾಡಲಾಗುತ್ತದೆ, ಅದು ನ್ಯಾಯಸಮ್ಮತವೂ ಹೌದು. ಎಂಎಸ್‌ ಧೋನಿಯನ್ನು ಮುಂದಿನ ಸೀಸನ್‌ನಲ್ಲಿ ಆಡಿಸುವುದು ಅಥವಾ ಬಿಡುವುದು ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುವ ನಿರ್ಧಾರ, ನನ್ನದು ಅಲ್ಲ,” ಎಂದು ಅವರು ಸೇರಿಸಿದ್ದಾರೆ.

ಎಂಎಸ್‌ ಧೋನಿ ಇನ್ನೂ ಐಪಿಎಲ್‌ ಪಂದ್ಯ ಆಡದೇ ಇರಲು ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಎಂಎಸ್‌ ಧೋನಿ ಏಕೆ ಆಡಿಲ್ಲ?

ಋತುರಾಜ್‌ ಗಾಯಕ್ವಾಡ್‌ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಟಾಸ್ ವೇಳೆ ಮಾತನಾಡುತ್ತಾ, ಎಂಎಸ್‌ ಧೋನಿ ಅವರ ಅನುಪಸ್ಥಿತಿಯ ಕುರಿತು ಪ್ರತಿಕ್ರಿಯೆ ನೀಡಿದರು. ಎಂಎಸ್‌ ಧೋನಿ ಈ ಪಂದ್ಯಕ್ಕೆ ಫಿಟ್ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

“ನಾವು ಮೊದಲು ಬ್ಯಾಟ್‌ ಮಾಡಲು ನೋಡುತ್ತಿದ್ದೇವೆ. ಪಿಚ್ ಸ್ವಲ್ಪ ಒಣಗಿದಂತಿದೆ, ಆದ್ದರಿಂದ ಉತ್ತಮ ಮೊತ್ತವನ್ನು ಕಲೆಹಾಕಲು ಬಯಸಿದ್ದೇವೆ,” ಎಂದು ಋತುರಾಜ್ ಹೇಳಿದ್ದರು.

“ಮುಂಬೈ ಇಂಡಿಯನ್ಸ್ ವಿರುದ್ಧದ ಕಳೆದ ಪಂದ್ಯದಲ್ಲೂ ಬ್ಯಾಟಿಂಗ್‌ಗೆ ಇದು ಅತ್ಯುತ್ತಮ ವಿಕೆಟ್ ಆಗಿರಲಿಲ್ಲ. ಯಾವುದೇ ಜಟಿಲತೆ ಇಲ್ಲ, ಸರಳವಾಗಿ ಆಡಲು ಬಯಸುತ್ತೇವೆ. ಎಂಎಸ್ ಧೋನಿ ಇನ್ನೂ ತಂಡದ ಜೊತೆ ಇದ್ದಾರೆ, ಆದರೆ ಈ ಪಂದ್ಯದಲ್ಲಿ ಆಡಲು ಬೇಕಾದಷ್ಟು ಫಿಟ್ ಇಲ್ಲ. ನಮ್ಮ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದೇವೆ,” ಎಂದು ಅವರು ಮಾಹಿತಿ ನೀಡಿದ್ದರು.