ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೆಸರು ಬದಲಾಗುತ್ತಾ? ಸುಳಿವು ನೀಡಿದ ಹೊಸ ಮಾಲೀಕರು!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಸ ಮಾಲೀಕರ ತೆಕ್ಕೆಗೆ ಸೇರಿದ ಬಳಿಕ ಆರ್‌ಸಿಬಿ ಅಭಿಮಾನಿಗಳಿಗೆ ಒಂದು ಅನುಮಾನ ಶುರುವಾಗಿದೆ. ಆರ್‌ಸಿಬಿ ಹೆಸರು ಉಳಿಯುತ್ತಾ? ಅಥವಾ ಹೆಸರು ಬದಲಾಗುತ್ತಾ? ಎಂಬ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ಆದರೆ, ಈ ಬಗ್ಗೆ ಹೊಸ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಆರ್‌ಸಿಬಿ ಹೆಸರು ಬದಲಾವಣೆ ಬಗ್ಗೆ ಅನನ್ಯಾ ಬಿರ್ಲಾ ಸ್ಪಷ್ಟನೆ.

ನವದೆಹಲಿ: ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ದಾಖಲೆಯ ಮೊತ್ತಕ್ಕೆ ಮಾರಾಟವಾದ ಬಳಿಕ ಹಾಲಿ ಚಾಂಪಿಯನ್ಸ್‌ ಆರ್‌ಸಿಬಿಯ ಹೆಸರಿನ ಬಗ್ಗೆ ಅನುಮಾನಗಳು ಶುರುವಾಗಿವೆ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೊಸ ಮಾಲೀಕರು ಆರ್‌ಸಿಬಿ ಹೆಸರನ್ನು ಬದಲಾವಣೆ ಮಾಡುತ್ತಾರಾ? ಎಂಬ ಅನುಮಾನಗಳು ಅಭಿಮಾನಿಗಳಲ್ಲಿ ಮೂಡುತ್ತಿದೆ. ಆದರೆ, ಈ ಬಗ್ಗೆ ಹೊಸ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ ಖರೀದಿಸಿದೆ. ಈ ಒಕ್ಕೂಟದಲ್ಲಿ ಅಮೆರಿಕನ್ ಕ್ರೀಡಾ ಹೂಡಿಕೆದಾರ ಡೇವಿಡ್‌ ಬ್ಲಿಟ್ಜರ್‌, ಬ್ಲ್ಯಾಕ್‌ಸ್ಟೋನ್, ಬೋಲ್ಟ್ ವೆಂಚರ್ಸ್ ಮತ್ತು ದಿ ಟೈಮ್ಸ್‌ ಆಫ್‌ ಇಂಡಿಯಾ ಗ್ರೂಪ್ ಕೂಡ ಸೇರಿವೆ. ಸುಮಾರು 1.78 ಬಿಲಿಯನ್ (₹16,660 ಕೋಟಿ) ಮೌಲ್ಯದ ಈ ಒಪ್ಪಂದವು ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ತಂಡವನ್ನು ಒಂದು ಬಿಲಿಯನ್ ಗಿಂತ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

IPL 2026: 16,706 ಕೋಟಿ ರು. ಗಳಿಗೆ ಮಾರಾಟವಾದ ಆರ್‌ಸಿಬಿ, ಅತ್ಯಂತ ದುಬಾರಿ ಫ್ರಾಂಚೈಸಿ!

ಆರ್‌ಸಿಬಿ ಹೆಸರು ಬದಲಾವಣೆಯ ಪ್ರಶ್ನೆ ಏಕೆ?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೆಸರಿನ ಬಗ್ಗೆ ಈಗ ಚರ್ಚೆ ಏಳಲು ಪ್ರಮುಖ ಕಾರಣ ಅದರ ಮೂಲ ಬ್ರ್ಯಾಂಡ್ ಸಂಪರ್ಕವಾಗಿದೆ. “ರಾಯಲ್‌ ಚಾಲೆಂಜ್‌” ಎಂಬುದು ಯುನೈಟೆಡ್‌ ಸ್ಪಿರಿಟ್ಸ್‌ ನಡೆಸುವ ಪಾನೀಯ ಬ್ರ್ಯಾಂಡ್ ಆಗಿದ್ದು, ಇದೇ ಕಂಪನಿ ಈ ಫ್ರಾಂಚೈಸಿಯ ಹಿಂದಿನ ಮಾಲೀಕರಾಗಿದ್ದರು. ಹೊಸ ಮಾಲೀಕತ್ವದ ಹಿನ್ನೆಲೆಯಲ್ಲಿ ಬೇರೆ ಕಂಪನಿಯ ಬ್ರ್ಯಾಂಡ್ ಹೆಸರನ್ನು ಮುಂದುವರಿಸುವುದೇ ಅಥವಾ ಫ್ರಾಂಚೈಸಿಯನ್ನು ಸ್ವತಂತ್ರ ಕ್ರೀಡಾ ಗುರುತಿನೊಂದಿಗೆ ಮರುಬ್ರ್ಯಾಂಡ್ ಮಾಡುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಆದರೆ, RCB ಬ್ರ್ಯಾಂಡ್‌ಗೆ ಇರುವ ಅಪಾರ ಜನಪ್ರಿಯತೆ ಈ ತಂಡದ ಮೌಲ್ಯ ಹೆಚ್ಚಲು ಪ್ರಮುಖ ಕಾರಣವಾಗಿದ್ದು, ಹೆಸರನ್ನು ಬದಲಿಸುವುದೇ ಅಥವಾ ಹಾಗೆಯೇ ಉಳಿಸುವುದೇ ಎಂಬ ವಿಚಾರ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.

IPL 2026: ʻವಿರಾಟ್‌ ಕೊಹ್ಲಿಯನ್ನು ನೋಡಿ ಕಲಿಯಿರಿʼ-ಅಜಿಂಕ್ಯ ರಹಾನೆಗೆ ಮೊಹಮ್ಮದ್‌ ಕೈಫ್‌ ಪಾಠ!

ಅನನ್ಯಾ ಬಿರ್ಲಾ ಸ್ಪಷ್ಟನೆ

ಅನನ್ಯಾ ಬಿರ್ಲಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆರ್‌ಸಿಬಿ ಹೆಸರಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಆರ್‌ಸಿಬಿ ಹೆಸರನ್ನು ಬದಲಾವಣೆ ಮಾಡುವುದಿಲ್ಲ,ಇದೇ ಹೆಸರು ಮುಂದುವರಿಯಲಿದೆ ಎಂದು ಖಚಿತಪಡಿಸಿದ್ದಾರೆ.

ಅನನ್ಯಾ ಬಿರ್ಲಾ ಅವರು ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್‌ ಕಾರ್ಪೋರೇಷನ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದು, ಪ್ರಮುಖ ಕಂಪನಿಗಳಾದ ಹಿಂಡಾಲ್ಕೊ ಇಂಡಸ್ಟ್ರೀಸ್‌, ಆದಿತು ಬಿರ್ಲಾ ಹಾಗೂ ರಿಟೇಲ್‌ ಮತ್ತು ಗ್ರಾಸಿಮ್‌ ಇಂಡಸ್ಟ್ರೀಸ್‌ ಮಂಡಳಿಯಲ್ಲೂ ಇದ್ದಾರೆ. ಅದೇ ವೇಳೆ, ಅವರು ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಅವರ ಅಕ್ಕನಾಗಿದ್ದು, ಅವರು ಈಗ ಆರ್‌ಸಿಬಿ ತಂಡಕ್ಕೆ ನೂತನ ಮುಖ್ಯಸ್ಥರಾಗಿದ್ದಾರೆ.