ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup: ಲಾರಾ ಭರ್ಜರಿ ಶತಕ, ಇಂಗ್ಲೆಂಡ್‌ ವಿರುದ್ಧ ಗೆದ್ದು ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ!

ಲಾರಾ ವೊಲ್ವಾರ್ಡ್ಟ್‌ ಅವರ ಭರ್ಜರಿ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್‌ ವಿರುದ್ಧ 125 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಮೊದಲು ಬ್ಯಾಟ್‌ ಮಾಡಿದ್ದ ಆಫ್ರಿಕಾ 319 ರನ್‌ ಗಳಿಸಿದ್ದು, ಬಳಿಕ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ 194 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಇಂಗ್ಲೆಂಡ್‌ ವಿರುದ್ಧ ಗೆದ್ದು ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ ವನಿತೆಯರು!

ಇಂಗ್ಲೆಂಡ್‌ ವಿರುದ್ದ ಗೆದ್ದು ಮಹಿಳಾ ವಿಶ್ವಕಪ್‌ ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ. -

Profile Ramesh Kote Oct 29, 2025 10:03 PM

ಗವಾಹಟಿ: ಲಾರಾ ವೊಲ್ವಾರ್ಡ್ಟ್‌ (169 ರನ್‌) ಅವರ ಶತಕ ಹಾಗೂ ಮಾರಿಜನ್ನೆ ಕಾಪ್‌ (20ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ (Women's World Cup) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ(SAW vs ENGW) ಬಲಿಷ್ಠ ಇಂಗ್ಲೆಂಡ್‌ ತಂಡದ ವಿರುದ್ಧ 125 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪ್ರಶಸ್ತಿಗೆ ಸುತ್ತಿಗೆ ಪ್ರವೇಶ ಮಾಡಿದೆ. ಆದರೆ, ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಇಂಗ್ಲೆಂಡ್‌ ತಂಡದ ಫೈನಲ್‌ ಕನಸು ಭಗ್ನವಾಯಿತು. ಅಂದ ಹಾಗೆ ಅದ್ಭುತವಾಗಿ ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್‌ (Laura Wolvaardt) ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಸೆಮಿಫೈನಲ್‌ ಪಂದ್ಯ ಗೆದ್ದ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.

ಇಲ್ಲಿನ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 320 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡಕ್ಕೆ ಆರಂಭದಲ್ಲಿಯೇ ಮಾರಿಜನ್ನೆ ಕಾಪ್‌ ಆಘಾತ ನೀಡಿದ್ದರು. ಇವರು ಎಮಿ ಜೋನ್ಸ್‌ ಹಾಗೂ ಹೀದರ್‌ ನೈಟ್‌ ಅವರನ್ನು ಔಟ್‌ ಮಾಡಿದರು. ಆ ಮೂಲಕ ಕೇವಲ ಒಂದು ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿತು. ನಾಲ್ಕನೇ ವಿಕೆಟ್‌ಗೆ ನ್ಯಾಟ್‌ ಸೀವರ್‌ ಬ್ರಂಟ್‌ ಹಾಗೂ ಅಲೈಸ್‌ ಕಾಪ್ಸಿ ಅವರು 107 ರನ್‌ಗಳನ್ನು ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

AUS vs IND 1st T20I: ಮಳೆಯದ್ದೇ ಆಟ; ಭಾರತ-ಆಸೀಸ್‌ ಮೊದಲ ಟಿ20 ಪಂದ್ಯ ರದ್ದು

ಇಂಗ್ಲೆಂಡ್‌ ಬ್ಯಾಟಿಂಗ್‌ ವೈಫಲ್ಯ

ನ್ಯಾಟ್‌ ಸೀವರ್‌ ಬ್ರಂಟ್‌ ಹಾಗೂ ಅಲೈಸ್‌ ಕಾಪ್ಸಿ ಅವರು ಕೆಲಕಾಲ ಬ್ಯಾಟ್‌ ಮಾಡಿ ಕ್ರಮವಾಗಿ 64 ರನ್‌ ಹಾಗೂ 50 ರನ್‌ ಗಳಿಸಿ ತಂಡವನ್ನು ಗೆಲ್ಲಿಸಲು ಪ್ರಯತ್ನ ಮಾಡಿ ವಿಕೆಟ್‌ ಒಪ್ಪಿಸಿದರು. ಡೇನಿಯಲ್‌ ವ್ಯಾಟ್‌ 34 ರನ್‌ ಹಾಗೂ ಲಿನ್ಸಿ ಸ್ಮಿತ್‌ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅಂತಿಮವಾಗಿ ಇಂಗ್ಲೆಂಡ್‌ 42.3 ಓವರ್‌ಗಳಿಗೆ 194 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು. ದಕ್ಷಿಣ ಆಫ್ರಿಕಾ ಪರ ಮಾರಿಜನ್ನೆ ಕಾಪ್‌ 5 ವಿಕೆಟ್‌ ಸಾಧನೆ ಮಾಡಿದರು.



319 ರನ್‌ಗಳನ್ನು ಕಲೆ ಹಾಕಿದ್ದ ದಕ್ಷಿಣ ಆಫ್ರಿಕಾ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ, ಲಾರಾ ವೊಲ್ವಾರ್ಡ್ಟ್‌ ಅವರ ಭರ್ಜರಿ ಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 319 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ ಕಠಿಣ ಗುರಿಯನ್ನು ನೀಡಿತ್ತು. ಶತಕ ಸಿಡಿಸಿದ ಲಾರಾ ಅವರ ಜೊತೆಗೆ ತಝ್ಮಿನ್‌ ಬ್ರಿಟ್ಸ್‌ 45 ರನ್‌ ಗಳಿಸಿದರೆ, ಮಾರಿಜನ್ನೆ ಕಾಪ್‌ 42 ರನ್‌ಗಳನ್ನು ಗಳಿಸಿದರು. ನಂತರ ಕೊನೆಯಲ್ಲಿ ಕ್ಲೋಯ್ ಟ್ರಯಾನ್ ಅವರು ಅಜೇಯ 33 ರನ್‌ಗಳನ್ನು ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವು ನೀಡಿದ್ದರು.

ದಕ್ಷಿಣ ಆಫ್ರಿಕಾ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಲಾರಾ ವೊಲ್ವಾರ್ಡ್ಟ್‌ ಹಾಗೂ ತಝ್ಮಿನ್‌ ಬ್ರಿಟ್ಸ್‌ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 116 ರನ್‌ಗಳನ್ನು ಕಲೆ ಹಾಕಿ, ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ಕೊಟ್ಟಿತ್ತು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ತಝ್ಮಿನ್‌ ಬ್ರಿಟ್ಸ್‌ 65 ಎಸೆತಗಳಲ್ಲಿ 45 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಮಾರಿಜನ್ನೆ ಕಾಪ್‌ ಅವರು ಕೂಡ ಕೆಲಕಾಲ ಉತ್ತಮ ಪ್ರದರ್ಶನವನ್ನು ತೋರಿ 33 ಎಸೆತಗಳಲ್ಲಿ 42 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.



ದಾಖಲೆಯ ಶತಕ ಬಾರಿಸಿದ ಲಾರಾ ವೊಲ್ವಾರ್ಡ್ಟ್‌

ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಹರಿಣ ಪಡೆಯ ನಾಯಕಿ ಲಾರಾ ವೊಲ್ವಾರ್ಡ್ಟ್‌. ಅವರು ಓಪನಿಂಗ್‌ ಬಂದು ಕೊನೆಯವರೆಗೂ ಒಂದು ಕಡೆ ಗಟ್ಟಿಯಾಗಿ ನಿಂತರು. ಅವರು ಇಂಗ್ಲೆಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಆಡಿದರು. ಅವರು ಆಡಿದ 143 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 20 ಬೌಂಡರಿಗಳೊಂದಿಗೆ 169 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ದಕ್ಷಿಣ ಆಫ್ರಿಕಾ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು. ಅಲ್ಲದೆ ಈ ಟೂರ್ನಿಯ ನಾಕ್‌ಔಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ್ತಿಯಾದರು. ಅಂತಿಮವಾಗಿ ಇವರು 48ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದರು. ಇದಾದ ಬಳಿಕ ಕೊನೆಯಲ್ಲಿ ಕ್ಲೋಯ್ ಟ್ರಯಾನ್ ಅವರು ಸ್ಪೋಟಕ ಬ್ಯಾಟ್‌ ಮಾಡಿ ಅಜೇಯ 33 ರನ್‌ ಸಿಡಿಸಿದ್ದರು.