ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup: ಬೆಲಿಂಡಾ ಕ್ಲಾರ್ಕ್‌ರ ವಿಶ್ವ ದಾಖಲೆ ಮುರಿದ ಸ್ಮೃತಿ ಮಂಧಾನಾ!

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಅವರು, ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್‌ ಅವರ 28 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ.

ಮಹಿಳಾ ಒಡಿಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನಾ.

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ (Smriti Mandhana) ಅವರು ಈಗಾಗಲೇ ಹಲವು ದಾಖಲೆಯನ್ನು ಬರೆದಿದ್ದಾರೆ. ಇದೀಗ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎನಿಸಿಕೊಳ್ಳುವ ಮೂಲಕ ಅವರು ಆಸ್ಟ್ರೇಲಿಯಾ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್‌ (Belinda Clark) ಅವರ 28 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ವಿಶಾಖಪಟ್ಟಣಂನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಮಹಿಳಾ ಏಕದಿನ ವಿಶ್ವಕಪ್‌ (Woemens ODI World Cup 2025) ಟೂರ್ನಿಯ 10ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಮಹಿಳಾ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂಧಾನಾ ಮಂಧಗತಿಯ ಆರಂಭವನ್ನು ಪಡೆದಿದ್ದರು. ನಂತರ ಅಯಾಬಾಂಗಾ ಖಾಕ ಅವರ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ಬಳಿಕ ವಿಶ್ವ ದಾಖಲೆಯನ್ನು ಬರೆದರು. ಸಿಕ್ಸರ್‌ ಮೂಲಕ ಅವರು ಆಸ್ಟ್ರೇಲಿಯಾ ಮಾಜಿ ನಾಯಕ ಬೆಲಿಂಡಾ ಕ್ಲಾರ್ಕ್‌ ಅವರ 1997ರ ವರ್ಷದಲ್ಲಿ ಗಳಿಸಿದ್ದ 970 ರನ್‌ಗಳ ವಿಶ್ವ ದಾಖಲೆಯನ್ನು ಹಿಂದಿಕ್ಕಿದರು. ಇದೀಗ ಸ್ಮೃತಿ ಮಂಧಾನಾ ಅವರು 2025ರ ವರ್ಷದಲ್ಲಿ ಆಡಿದ್ದ 17 ಇನಿಂಗ್ಸ್‌ಗಳಿಂದ 57.76ರ ಸರಾಸರಿಯಲ್ಲಿ 982 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇದರಲ್ಲಿ ಅವರು ನಾಲ್ಕು ಶತಕಗಳು ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

INDW vs SLW: ದೀಪ್ತಿ ಆಲ್‌ರೌಂಡರ್‌ ಪ್ರದರ್ಶನ; ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗೆಲುವಿನ ಶುಭಾರಂಭ

ವಿಶ್ವ ದಾಖಲೆಯನ್ನು ಮುರಿದ ಬಳಿಕ ಸ್ಮೃತಿ ಮಂಧಾನಾ ಅವರು ನಾಡಿನ್‌ ಡಿ ಕ್ಲಾರ್ಕ್‌ ಅವರಿಗೆ ಬೌಂಡರಿಯನ್ನು ಬಾರಿಸಿದರು. 32 ಎಸೆತಗಳಲ್ಲಿ 23 ರನ್‌ ಗಳಿಸಿ ಆಡುತ್ತಿದ್ದ ಮಂಧಾನಾ, ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಇದಕ್ಕೂ ಮುನ್ನ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 8 ಮತ್ತು 23 ರನ್‌ಗಳನ್ನು ಗಳಿಸಿ ಮಂಧಾನಾ ವಿಕೆಟ್‌ ಒಪ್ಪಿಸಿದ್ದರು.

ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ನಾಡಿನ್ ಡಿ ಕ್ಲಾರ್ಕ್, ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಮಂಧಾನಾ ಅದ್ಭುತ ದಾಖಲೆಯನ್ನು ಹೊಂದಿರುವುದರಿಂದ, ಪಂದ್ಯದ ಸಮಯದಲ್ಲಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸುವುದಾಗಿ ಹೇಳಿದ್ದರು. ಭಾರತದ ಆರಂಭಿಕ ಆಟಗಾರ್ತಿಯನ್ನು ಕಡಿಮೆ ರನ್‌ಗಳಿಗೆ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡರು.‌



ಇದರ ನಡುವೆ ಮ್ಲಾಬಾ, ಭಾರತೀಯ ಬ್ಯಾಟ್ಸ್‌ವುಮನ್‌ಗಳಿಗೆ ಕಾಟ ಕೊಡುತ್ತಲೇ ಇದ್ದರು. ಅವರು ಹರ್ಲೀನ್ ಡಿಯೋಲ್ ಅವರನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ಭಾರತ ಮಹಿಳಾ ತಂಡ 17 ಓವರ್‌ಗಳ ಹೊತ್ತಿಗೆ 2 ವಿಕೆಟ್‌ ನಷ್ಟಕ್ಕೆ 83 ರನ್‌ಗಳನ್ನು ಗಳಿಸಿತ್ತು. ರಿಚಾ ಘೋಷ್‌ (37*) ಅವರ ನಿರ್ಣಾಯಕ ರನ್‌ಗಳ ನೆರವಿನಿಂದ ಭಾರತ ತಂಡ 41 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್‌ಗೆ 154 ರನ್‌ ಗಳಿಸಿದೆ.