ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

WPL 2026: ಯಶಸ್ಸಿನ ಓಟ ಮುಂದುವರಿಸಲು ಸಜ್ಜಾದ ಮುಂಬೈ ಇಂಡಿಯನ್ಸ್ ವನಿತೆಯರು!

2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಕಾದಾಟ ನಡೆಸಲಿದೆ. ಈ ಟೂರ್ನಿಯಲ್ಲಿಯೂ ತನ್ನ ಪ್ರಾಬಲ್ಯವನ್ನು ಸಾಧಿಸಲು ಮುಂಬೈ ಎದುರು ನೋಡುತ್ತಿದೆ.

ಯಶಸ್ಸಿನ ಓಟ ಮುಂದುವರಿಸಲು ಮುಂಬೈ ಇಂಡಿಯನ್ಸ್‌ ಸಜ್ಜು!

ಮುಂಬೈ ಇಂಡಿಯನ್ಸ್‌ ತಂಡದ ವೇಳಾಪಟ್ಟಿ. -

Profile
Ramesh Kote Jan 8, 2026 4:00 PM

ಮುಂಬೈ: ಕಳೆದ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ (WPL 2026) ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ನಂತರ ಮುಂಬೈ ಇಂಡಿಯನ್ಸ್ ಈ ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ತಂಡವೆನಿಸಿತ್ತು. ಇದೀಗ ಮುಂಬರುವ ಆವೃತ್ತಿಯಲ್ಲೂ ಯಶಸ್ಸಿನ ಓಟವನ್ನು ಮುಂದುವರಿಸುವ ತವಕದಲ್ಲಿದೆ. ಮುಂಬೈ ಇಂಡಿಯನ್ಸ್ Mumbai Indians) ತಂಡ ಜನವರಿ 9ರಂದು ನಡೆಯಲಿರುವ ನಾಲ್ಕನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ ಸೆಣಸಲಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿರುವ ಎಂಐ ನಾಯಕಿ ಹರ್ಮನ್‌ಪ್ರೀತ್ ಕೌರ್, ಇದೀಗ ಅದರಿಂದ ಸ್ಫೂರ್ತಿ ಪಡೆದು ಡಬ್ಲ್ಯುಪಿಎಲ್‌ ಟೂರ್ನಿಯಲ್ಲಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹಂಬಲದಲ್ಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಮೈದಾನಕ್ಕೆ ಹೋದಾಗಲೆಲ್ಲಾ ಟ್ರೋಫಿಯನ್ನು ಗೆಲ್ಲಲು ಬಯಸುತ್ತೇನೆ ಎಂದು ನನ್ನ ತಂಡಕ್ಕೆ ಹೇಳುತ್ತೇನೆ. ಈ ಹೊಸ ವರ್ಷ ಡಬ್ಲ್ಯುಪಿಎಲ್‌ನೊಂದಿಗೆ ಪ್ರಾರಂಭವಾಗುತ್ತಿದೆ ಮತ್ತು ಟೂರ್ನಿಗೆ ಪ್ರವೇಶಿಸುವಾಗ ನನಗೆ ಅದೇ ಶಕ್ತಿ ಮತ್ತು ಉತ್ಸಾಹವಿದೆ. ನಾವೆಲ್ಲರೂ ಒಂದೇ ರೀತಿಯ ಮನಸ್ಥಿತಿ ಹೊಂದಿದ್ದೇವೆ. ಕಳೆದ ಮೂರು ಆವೃತ್ತಿಗಳಲ್ಲಿ ನಾವು ಎರಡು ಟ್ರೋಫಿಗಳನ್ನು ಗೆದ್ದಿದ್ದೇವೆ. ನಾವು ಈ ಆವೃತ್ತಿಯಲ್ಲೂ ಉತ್ತಮವಾಗಿ ಆಡಬೇಕು, ಮತ್ತೆ ಟ್ರೋಫಿಯನ್ನು ಗೆಲ್ಲಬೇಕು," ಎಂದು ಬುಧವಾರ ಮುಂಬೈನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ತಂಡದ ಟೂರ್ನಿ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

WPL 2026: ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ರಂಜಿಸಲಿರುವ ಯೋ ಯೋ ಹನಿ ಸಿಂಗ್‌, ಜಾಕ್ವೆಲಿನ್‌ ಫರ್ನಾಂಡಿಸ್‌!

"ಮುಂಬೈನಲ್ಲಿ ಇದು ನನ್ನ ಮೊದಲ ಕೆಲಸ ಮತ್ತು ಇದು ನನಗೆ ತುಂಬಾ ವಿಶೇಷವಾದ ನಗರ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನನಗೆ ಇಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲಾ, ನಾನು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ಕಂಡಿದ್ದೇನೆ. ಈ ಆವೃತ್ತಿಯೂ ತುಂಬಾ ವಿಶೇಷವಾಗಿರುತ್ತದೆ ಎಂಬ ಭರವಸೆ ನನಗಿದೆ. ಕಳೆದ ಆವೃತ್ತಿ ಮತ್ತು ಕಳೆದ ವರ್ಷ ಮಹಿಳಾ ಕ್ರಿಕೆಟ್‌ಗೆ ಒಟ್ಟಾರೆಯಾಗಿ ಉತ್ತಮವೆನಿಸಿರುವುದಕ್ಕೆ ನಾನು ನಿಜವಾಗಿಯೂ ಸಂತೋಷಪಡುತ್ತೇನೆ. ಈ ವರ್ಷವೂ ಅದೇ ರೀತಿಯಲ್ಲಿ ಆರಂಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಮುಂಬೈ ಇಂಡಿಯನ್ಸ್‌ ನಾಯಕಿ ತಿಳಿಸಿದ್ದಾರೆ.

ಈ ಬಾರಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡವು ಎರಡು ಬಾರಿಯ ವಿಶ್ವಕಪ್ ವಿಜೇತೆ ಆಸ್ಟ್ರೇಲಿಯಾದ ಲೀಸಾ ಕೈಟ್ಲಿ ಅವರಿಂದ ಸ್ಫೂರ್ತಿ ಪಡೆಯಲು ಎದುರು ನೋಡುತ್ತಿದೆ. ಅವರು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ತಮ್ಮ ಮೊದಲ ಡಬ್ಲ್ಯುಪಿಎಲ್ ಆವೃತ್ತಿಯ ಸವಾಲಿಗೆ ಸಜ್ಜಾಗಿದ್ದಾರೆ. ಸಂಪೂರ್ಣ ಮಹಿಳಾ ಕೋಚಿಂಗ್ ಸಿಬ್ಬಂದಿಯನ್ನು ಹೊಂದಿರುವ ಬಗ್ಗೆ ಮತ್ತು ಅದು ಎಂಐನ ನೀತಿಯನ್ನು ಮತ್ತು ಕ್ರೀಡೆಯ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ನೀತಾ ಎಂ. ಅಂಬಾನಿ ಅವರ ದೃಷ್ಟಿಕೋನವನ್ನು ಹೇಗೆ ಪ್ರತಿಬಿಂಬಿಸುತ್ತಿದೆ ಎಂಬುದನ್ನು ಹೆಡ್ ಕೋಚ್‌ ಲಿಸಾ ಕೈಟ್ಲಿ ಶ್ಲಾಘಿಸಿದರು.

ʻದೇಶ ನನಗೆ ಮೊದಲುʼ-ಬಿಪಿಎಲ್‌ನಿಂದ ಹೊರ ನಡೆದ ಬಗ್ಗೆ ನಿರೂಪಕಿ ರಿಧಿಮಾ ಪಠಾಕ್‌ ಸ್ಪಷ್ಟನೆ!

"ಸಂಪೂರ್ಣವಾಗಿ ಮಹಿಳಾ ತರಬೇತಿ ಬಳಗವನ್ನು ಹೊಂದಿರುವುದು ನಿಜಕ್ಕೂ ರೋಮಾಂಚಕಾರಿ ಮತ್ತು ನನಗೆ ವಿಭಿನ್ನವಾದ ವಿಷಯವಾಗಿದೆ. ಪ್ರಪಂಚದಾದ್ಯಂತ ಅಭಿಮಾನಿಗಳು ಮತ್ತು ಮಹಿಳೆಯರಿಗೆ ಕೋಚಿಂಗ್ ಜಾಗದಲ್ಲಿ ಮಹಿಳೆಯರನ್ನು ನೋಡಲು ನಾವು ಅವಕಾಶವನ್ನು ನೀಡುತ್ತಿದ್ದೇವೆ. ಈ ದೃಷ್ಟಿಕೋನದಿಂದ ನಾನು ಇದನ್ನು ಹೆಚ್ಚಾಗಿ ನೋಡಲು ಇಷ್ಟಪಡುತ್ತೇನೆ ಮತ್ತು ಮುಂದಿನ 10 ವರ್ಷಗಳಲ್ಲಿ ನೀವು ಅದನ್ನು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ," ಎಂದು ಲೀಸಾ ಕೈಟ್ಲಿ ಹೇಳಿದರು.

"ನಮ್ಮ ಕೋಚಿಂಗ್ ಬಳಗದಲ್ಲಿ ನಾವು ಸಂಪೂರ್ಣವಾಗಿ ಮಹಿಳೆಯರನ್ನೇ ಏಕೆ ಹೊಂದಿದ್ದೇವೆ ಎಂಬುದರಲ್ಲಿ, ನೀತಾ ಅಂಬಾನಿ ಅವರಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಬಲ ಸ್ಥಾನದಲ್ಲಿ ಮಹಿಳಾ ನಾಯಕಿ ಇರುವುದು ಪಾತ್ರವಹಿಸುತ್ತದೆ. ಇಂಥ ಪ್ರಕ್ರಿಯೆ ಮೇಲ್ಭಾಗದಿಂದ ಪ್ರಾರಂಭವಾಗುತ್ತದೆ ಮತ್ತು ಅದನ್ನು ಫಿಲ್ಟರ್ ಮಾಡಲಾಗುತ್ತದೆ. ಆದ್ದರಿಂದ ಆ ಅವಕಾಶಗಳನ್ನು ಹೊಂದಿರುವುದು ನಿಜವಾಗಿಯೂ ಅದ್ಭುತವಾಗಿದೆ," ಎಂದು ಲೀಸಾ ಕೈಟ್ಲಿ ತಿಳಿಸಿದ್ದಾರೆ.

IND vs NZ: ಭಾರತ ಏಕದಿನ ತಂಡಕ್ಕೆ ಬಂತು ಆನೆ ಬಲ, ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಶ್ರೇಯಸ್‌ ಅಯ್ಯರ್‌!

ಹೊಸ ಮುಖ್ಯ ಕೋಚ್ ಲೀಸಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಎಂಐ ಮೆಂಟರ್ ಮತ್ತು ಬೌಲಿಂಗ್ ಕೋಚ್ ಜೂಲನ್ ಗೋಸ್ವಾಮಿ, "20 ವರ್ಷಗಳ ಕೋಚಿಂಗ್ ಅನುಭವವನ್ನು ಹೊಂದಿರುವುದರಿಂದ ಅವರೊಂದಿಗೆ ಕೆಲಸ ಮಾಡುವುದು ಒಂದು ಸೌಭಾಗ್ಯ. ಅವರ ಸಾರಥ್ಯದಲ್ಲಿ ನಾವು ಬಹಳಷ್ಟು ಕಲಿಯಬಹುದು. ಮಹಿಳೆಯರು ಯಾವಾಗಲೂ ಮುಂದೆ ಬರಬೇಕು ಎಂದು ನಾವು ಎಂಐನಲ್ಲಿ ನಂಬುತ್ತೇವೆ ಮತ್ತು ಸಂಪೂರ್ಣ ಮಹಿಳಾ ಕೋಚಿಂಗ್ ತಂಡವನ್ನು ಹೊಂದಿರುವುದು ನಮಗೆ ಅತ್ಯುತ್ತಮ ವಿಷಯ ಎಂದು ನಾನು ಭಾವಿಸುತ್ತೇನೆ" ಎಂದರು.

ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳ ವೇಳಾಪಟ್ಟಿ

ಜನವರಿ 9: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು-ನವಿ ಮುಂಬೈ , ರಾತ್ರಿ 7.30

ಜನವರಿ 10: ಡೆಲ್ಲಿ ಕ್ಯಾಪಿಟಲ್ಸ್- ನವಿ ಮುಂಬೈ, ರಾತ್ರಿ 7.30

ಜನವರಿ 13: ಗುಜರಾತ್ ಜಯಂಟ್ಸ್‌- ನವಿ ಮುಂಬೈ, ರಾತ್ರಿ 7.30

ಜನವರಿ 15: ಯುಪಿ ವಾರಿಯರ್ಸ್- ನವಿ ಮುಂಬೈ, ರಾತ್ರಿ 7.30

ಜನವರಿ 17: ಯುಪಿ ವಾರಿಯರ್ಸ್-ನವಿ ಮುಂಬೈ, ಮಧ್ಯಾಹ್ನ 3.00

ಜನವರಿ 20: ಡೆಲ್ಲಿ ಕ್ಯಾಪಿಟಲ್ಸ್-ವಡೋದರ , ರಾತ್ರಿ 7.30

ಜನವರಿ 26: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- ವಡೋದರ, ರಾತ್ರಿ 7.30

ಜನವರಿ 30: ಗುಜರಾತ್ ಜಯಂಟ್ಸ್‌-ವಡೋದರ, ರಾತ್ರಿ 7.30