ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

WPL 2027 schedule: ಮಹಿಳಾ ಪ್ರೀಮಿಯರ್‌ ಲೀಗ್‌ ಸಂಪೂರ್ಣ ವೇಳಾಪಟ್ಟಿ, ಜ 14 ರಂದು ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಮುಖಾಮುಖಿ!

2027ರ ಮಹಿಳಾ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿರುವ ಟೂರ್ನಿಗೆ ವಡೋದರಾ ಮತ್ತು ಮುಂಬೈ ಆತಿಥ್ಯ ವಹಿಸಲಿವೆ. ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

2027ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳಾಪಟ್ಟಿ ಪ್ರಕಟ.

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ (WPL 2027) ಐದನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ಟೂರ್ನಿ ನಡೆಯಲಿದ್ದು, ಗುಜರಾತ್‌ನ ವಡೋದರಾ ಮತ್ತು ಮಹಾರಾಷ್ಟ್ರದ ಮುಂಬೈ ಆತಿಥ್ಯ ವಹಿಸಲಿವೆ. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಎರಡೂ ನಗರಗಳಲ್ಲಿ ತಲಾ 11 ಪಂದ್ಯಗಳನ್ನು ಆಯೋಜಿಸಲಾಗಿದೆ.

2026ರ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಜನವರಿ 14ರಂದು ವಡೋದರಾದಲ್ಲಿ ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. ಆ ಮೂಲಕ ಎರಡು ಬಲಿಷ್ಠ ತಂಡಗಳ ನಡುವಿನ ಹೋರಾಟದೊಂದಿಗೆ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ.

IND vs NZ: ಸಚಿನ್‌ ತೆಂಡೂಲ್ಕರ್‌ರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ಎರಡು ನಗರಗಳಲ್ಲಿ ಪಂದ್ಯಗಳ ಆಯೋಜನೆ

ಟೂರ್ನಿಯ ಮೊದಲ ಹಂತದ ಪಂದ್ಯಗಳು ಜನವರಿ 14ರಿಂದ 24ರವರೆಗೆ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಅವಧಿಯಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿವೆ. ಬಳಿಕ ಜನವರಿ 26ರಿಂದ ಟೂರ್ನಿ ಮುಂಬೈಗೆ ಸ್ಥಳಾಂತರಗೊಳ್ಳಲಿದೆ. ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಸ್ಟೇಡಿಯಂನಲ್ಲಿ ಉಳಿದ 11 ಪಂದ್ಯಗಳು ನಡೆಯಲಿವೆ. ಫೆಬ್ರವರಿ 3ರಂದು ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿವೆ. ಎಲ್ಲಾ 22 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿವೆ.

ಪ್ಲೇಆಫ್‌ ಮತ್ತು ಫೈನಲ್ ಯಾವಾಗ?

ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಫೆಬ್ರವರಿ 5ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್‌ನಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಫೆಬ್ರವರಿ 7ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.



WPL 2027 ಸಂಪೂರ್ಣ ವೇಳಾಪಟ್ಟಿ

ವಡೋದರಾ ಹಂತ

ಜನವರಿ 14: ಆರ್‌ಸಿಬಿ vs ಮುಂಬೈ ಇಂಡಿಯನ್ಸ್

ಜನವರಿ 15 : ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್

ಜನವರಿ 16: ಡೆಲ್ಲಿ ಕ್ಯಾಪಿಟಲ್ಸ್ vs ಆರ್‌ಸಿಬಿ

ಜನವರಿ 17: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್

ಜನವರಿ 18: ಗುಜರಾತ್ ಜಯಂಟ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್

ಜನವರಿ 19: ಆರ್‌ಸಿಬಿ vs ಯುಪಿ ವಾರಿಯರ್ಸ್

ಜನವರಿ 20: ಗುಜರಾತ್ ಜಯಂಟ್ಸ್‌ vs ಮುಂಬೈ ಇಂಡಿಯನ್ಸ್

ಜನವರಿ 21: ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್

ಜನವರಿ 22: ಗುಜರಾತ್ ಜಯಂಟ್ಸ್ vs ಆರ್‌ಸಿಬಿ

ಜನವರಿ 23: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್

ಜನವರಿ 24: ಯುಪಿ ವಾರಿಯರ್ಸ್ vs ಗುಜರಾತ್ ಜಯಂಟ್ಸ್‌

ನ್ಯೂಜಿಲೆಂಡ್‌ ಟಿ20ಐ ಸರಣಿಯಲ್ಲಿನ ವೈಫಲ್ಯದ ಹೊರತಾಗಿಯೂ ಭುವನೇಶ್ವರ್‌ ಕುಮಾರ್‌ಗೆ ಮೊಹಮ್ಮದ್‌ ಕೈಫ್‌ ಬೆಂಬಲ!

ಮುಂಬೈ ಹಂತ

ಜನವರಿ 26: ಮುಂಬೈ ಇಂಡಿಯನ್ಸ್ vs ಆರ್‌ಸಿಬಿ

ಜನವರಿ 27: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್

ಜನವರಿ 28: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್

ಜನವರಿ 29: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್

ಜನವರಿ 30: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್

ಜನವರಿ 31: ಯುಪಿ ವಾರಿಯರ್ಸ್ vs ಆರ್‌ಸಿಬಿ

ಫೆಬ್ರವರಿ 1: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್

ಫೆಬ್ರವರಿ 2: ಆರ್‌ಸಿಬಿ vs ಗುಜರಾತ್ ಜೈಂಟ್ಸ್

ಫೆಬ್ರವರಿ 3: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್

ಪ್ಲೇಆಫ್ ಪಂದ್ಯಗಳು

ಫೆಬ್ರವರಿ 5 :ಎಲಿಮಿನೇಟರ್ (2ನೇ vs 3ನೇ ಸ್ಥಾನ)

ಫೆಬ್ರವರಿ 7 : ಫೈನಲ್

ಎಲ್ಲಾ ಪಂದ್ಯಗಳ ಆರಂಭದ ಸಮಯ: ರಾತ್ರಿ 7.30. ವಡೋದರಾ ಪಂದ್ಯಗಳು ಬಿಸಿಎ ಸ್ಟೇಡಿಯಂನಲ್ಲಿ ಹಾಗೂ ಮುಂಬೈ ಪಂದ್ಯಗಳು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿವೆ.



ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಆರ್‌ಸಿಬಿ

ಕಳೆದ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿತ್ತು. ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಮತ್ತೊಂದೆಡೆ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೂಡ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಆರಂಭಿಕ ಪಂದ್ಯವೇ ಟೂರ್ನಿಯ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆಯಿದೆ.