ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಟೂರ್ನಿಯ ಮಿನಿ ಹರಾಜು ಅಕ್ಟೋಬರ್ 28 ರಂದು ನಡೆಯಿತು. ಮುಂಬರುವ ಟೂರ್ನಿಗೂ ಮುನ್ನ ಐದು ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಹಲವು ಪ್ರತಿಭಾವಂತ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ. ಈ ಹರಾಜಿನಲ್ಲಿ ಯುಪಿ ವಾರಿಯರ್ಸ್ ಅತ್ಯಂತ ಸಕ್ರಿಯ ತಂಡವಾಗಿ ಗುರುತಿಸಿಕೊಂಡಿದ್ದು, ಹಲವು ಸ್ಟಾರ್ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿಯಾಗಿದ್ದಾರೆ. ಯುಪಿ ವಾರಿಯರ್ಸ್ ಅವರನ್ನು 1.1 ಕೋಟಿ ರು. ಗಳಿಗೆ ಖರೀದಿಸಿದೆ. ಇದರ ಜೊತೆಗೆ, ಸ್ಟಾರ್ ಆಲ್ರೌಂಡರ್ ಗ್ರೇಸ್ ಹ್ಯಾರಿಸ್ ಕೂಡ ಯುಪಿ ವಾರಿಯರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಬಲಿಷ್ಠ ತಂಡವನ್ನು ರೂಪಿಸಿರುವ ಯುಪಿ ವಾರಿಯರ್ಸ್, 2027ರ ಡಬ್ಲ್ಯುಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ.
ಈ ಮಿನಿ ಹರಾಜಿನಲ್ಲಿ ಒಟ್ಟು 146 ಆಟಗಾರ್ತಿಯರನ್ನು 27 ಸ್ಥಾನಗಳಿಗಾಗಿ ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಈ ಪೈಕಿ ಏಳು ಸ್ಥಾನಗಳನ್ನು ವಿದೇಶಿ ಆಟಗಾರ್ತಿಯರಿಗಾಗಿ ಮೀಸಲಿಡಲಾಗಿತ್ತು. ಭಾರತದ ಜಿ ಕಮಿಲಿನಿ ಗುಜರಾತ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾದರೆ, ಸ್ನೇಹ್ ರಾಣಾ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ಈ ಆಟಗಾರ್ತಿಯರು ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ನಿರೀಕ್ಷೆಯಿದೆ.
ʻನ್ಯೂಜಿಲೆಂಡ್ನಲ್ಲಿ ಕೊನೆಯ ಬಾರಿ ರೋಹಿತ್, ಕೊಹ್ಲಿಯನ್ನು ಎದುರಿಸುತ್ತೇನೆʼ:ಕೈಲ್ ಜೇಮಿಸನ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಜೆಸ್ ಜೊನಾಸನ್ ಮತ್ತು ಕ್ಲೋಯ್ ಟ್ರೈಯಾನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡ ಶ್ವೇತಾ ಸೆಹ್ರಾವತ್ ಮತ್ತು ಅಕ್ಷಿತಾ ಭಗತ್ ಅವರನ್ನು ಖರೀದಿಸಿದೆ. ಈ ಹೊಸ ಸೇರ್ಪಡೆಗಳೊಂದಿಗೆ ಐದು ತಂಡಗಳು ಮುಂಬರುವ ಆವೃತ್ತಿಗೆ ಸಜ್ಜಾಗುತ್ತಿವೆ.
2027ರ ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜಿನ ಬಳಿಕ ಐದು ತಂಡಗಳು
ಮುಂಬೈ ಇಂಡಿಯನ್ಸ್: ಅಮನ್ಜೋತ್ ಕೌರ್, ಅಮೆಲಿಯಾ ಕೆರ್, ಹರ್ಮನ್ಪ್ರೀತ್ ಕೌರ್, ಹೈಯ್ಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್-ಬ್ರಂಟ್, ನಿಕೋಲಾ ಕೇರಿ, ರಹಿಲಾ ಫಿರ್ದೌಸ್, ಸಂಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್*, ವೈಷ್ಣವಿ ಶರ್ಮಾ, ಸನಿಕಾ ಚಾಲ್ಕೆ, ಶ್ವೇತಾ ಸೆಹ್ರಾವತ್, ಅಕ್ಷಿತಾ ಭಗತ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ): ಅರುಂಧತಿ ರೆಡ್ಡಿ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಪ್ರಥ್ಯುಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಜೆಸ್ ಜೊನಾಸನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್, ಕ್ಲೋಯ್ ಟ್ರೈಯಾನ್*.
ಯುಪಿ ವಾರಿಯರ್ಸ್: ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಮೆಗ್ ಲ್ಯಾನಿಂಗ್, ಫೋಬೆ ಲಿಚ್ಫೀಲ್ಡ್, ಪ್ರತೀಕಾ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರನ್ ಶೇಖ್, ಸೋಫಿ ಎಕ್ಲೆಸ್ಟೋನ್, ತಾರಾ ನಾರ್ರಿಸ್, ಸೋಫಿ ಮೊಲಿನ್ಯೂಕ್ಸ್, ಸ್ನೇಹ್ ರಾಣಾ, ಗ್ರೇಸ್ ಹ್ಯಾರಿಸ್, ಸುಷ್ಮಾ ವರ್ಮಾ, ಕ್ಯಾಥರಿನ್ ಬ್ರೈಸ್*, ಮನಾಲಿ ದಕ್ಷಿಣಿ, ಸಹನಾ ಪವಾರ್, ಆಶಾ ಶೋಭನಾ.
ಡೆಲ್ಲಿ ಕ್ಯಾಪಿಟಲ್ಸ್: ಅನಾಬೆಲ್ ಸದರ್ಲ್ಯಾಂಡ್, ಚಿನೆಲ್ಲೆ ಹೆನ್ರಿ, ದಿಯಾ ಯಾದವ್, ಜೆಮಿಮಾ ರೋಡ್ರಿಗಸ್, ಲಾರಾ ವೋಲ್ವಾರ್ಟ್, ಲೂಸಿ ಹ್ಯಾಮಿಲ್ಟನ್, ಮಮತಾ ಮಡಿವಾಳ, ಮರಿಜಾನ್ ಕಾಪ್, ಮಿನ್ನು ಮಣಿ, ಎನ್. ಶ್ರೀ ಚರಣಿ, ನಂದಿನಿ ಶರ್ಮಾ, ನಿಕಿ ಪ್ರಸಾದ್, ಶಫಾಲಿ ವರ್ಮಾ, ಕಿರಣ್ ನವ್ಗಿರೆ, ಕಿರ್ಸ್ಟಿ ಗಾರ್ಡನ್, ಉಮಾ ಕಾಶ್ವಿ, ಕಿರ್ಸ್ಟಿ ಗಾರ್ಡನ್, ನಜ್ಮಾ ಖಾನ್.
ಗುಜರಾತ್ ಜಯಂಟ್ಸ್: ಅನುಷ್ಕಾ ಶರ್ಮಾ, ಆಶ್ಲೇ ಗಾರ್ಡ್ನರ್, ಬೆಥ್ ಮೂನಿ, ಭಾರತಿ ಫುಲ್ಮಾಲಿ, ಜಾರ್ಜಿಯಾ ವೇರ್ಹ್ಯಾಮ್, ಹ್ಯಾಪಿ ಕುಮಾರಿ, ಜಿಂತಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವಿ ಗೌತಮ್, ಕಿಮ್ ಗಾರ್ತ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಸೋಫಿ ಡಿವೈನ್, ತನುಜಾ ಕನ್ವರ್, ಯಸ್ತಿಕಾ ಭಾಟಿಯಾ, ಜಿ. ಕಮಿಲಿನಿ, ಓರ್ಲಾ ಪ್ರೆಂಡರ್ಗಾಸ್ಟ್, ಸಮೈರಾ ರಾಘವ್.