ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ಮಹಿಳಾ ವಿಶ್ವಕಪ್‌ ಟೂರ್ನಿಯಿಂದ ಹೊರ ಬಿದ್ದ ಯಾಸ್ತಿಕಾ ಭಾಟಿಯಾ!

ಗಾಯದ ಕಾರಣ ಮುಂಬರುವ 2025ರ ಮಹಿಳೆಯ ವಿಶ್ವಕಪ್‌ ಟೂರ್ನಿಯಿಂದ ಯಾಸ್ತಿಕಾ ಭಾಟಿಯಾ ಅವರು ಹೊರ ನಡೆದಿದ್ದಾರೆ. ಇವರ ಸ್ಥಾನವನ್ನು ತಂಡದಲ್ಲಿ ವಿಕೆಟ್‌ ಕೀಪರ್‌-ಬ್ಯಾಟರ್‌ ಉಮಾ ಛೆಟ್ರಿ ತುಂಬಿದ್ದಾರೆ. ಯಾಸ್ತಿಕಾ ಭಾಟಿಯಾ ಅವರು ಮೊಣ ಕಾಲು ಗಾಯಕ್ಕೆ ತುತ್ತಾಗಿದ್ದಾರೆ.

2025ರ ಮಹಿಳಾ ವಿಶ್ವಕಪ್‌ನಿಂದ ಹೊರಬಿದ್ದ ಯಾಸ್ತಿಕಾ ಭಾಟಿಯಾ!

ಮಹಿಳಾ ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದ ಯಾಸ್ತಿಕಾ ಭಾಟಿಯಾ. -

Profile Ramesh Kote Sep 5, 2025 3:46 PM

ನವದೆಹಲಿ: ಮೊಣಕಾಲು ಗಾಯದಿಂದ ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿ ಯಾಸ್ತಿಕಾ ಭಾಟಿಯಾ (Yastika Bhatia) ಅವರು 2025ರ ಐಸಿಸಿ ಮಹಿಳಾ ವಿಶ್ವಕಪ್‌ (ICC WOmen's World Cup 2025) ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಏಕದಿನ ಸರಣಿಯ ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಉಮಾ ಛೆಟ್ರಿಗೆ (Uma Chetry) ಅವಕಾಶವನ್ನು ನೀಡಲಾಗಿದೆ. ವಿಶಾಖಪಟ್ಟಣಂನಲ್ಲಿ ಭಾರತ ಮಹಿಳಾ ತಂಡ ಅಭ್ಯಾಸ ನಡೆಸುತ್ತಿದ್ದ ವೇಳೆ ಯಾಸ್ತಿಕಾ ಭಾಟಿಯಾ ಅವರು ಗಾಯಕ್ಕೆ ತುತ್ತಾಗಿದ್ದರು ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

"ಯಾಸ್ತಿಕಾ ಭಾಟಿಯಾ ಅವರ ಗಾಯದ ನಿರ್ವಹಣೆಯನ್ನು ಬಿಸಿಸಿಐ ವೈದ್ಯಕೀಯ ತಂಡ ನಿರ್ವಹಿಸುತ್ತಿದೆ ಹಾಗೂ ಯಾಸ್ತಿಕಾ ಭಾಟಿಯಾ ಅವರು ಆದಷ್ಟು ಗುಣಮುಖರಾಗಲಿ ಮಹಿಳಾ ತಂಡ ಹಾರೈಸಿದೆ," ಎಂದು ಬಿಸಿಸಿಐ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಮಹಿಳಾ ತಂಡಕ್ಕೆ ಸೇರ್ಪಡೆಯಾಗಿರುವ ಕಾರಣ ಉಮಾ ಛೆಟ್ರಿ ಅವರು ಭಾರತ ಎ ತಂಡದಿಂದ ಹೊರ ಬಂದಿದ್ದಾರೆ.

Asia Cup 2025: ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ ಕ್ರಮಾಂಕ ಸೂಚಿಸಿದ ಮೊಹಮ್ಮದ್‌ ಕೈಫ್‌!

"ಉಮಾ ಛೆಟ್ರಿ ಅವರು ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡ ಹಾಗೂ 2025ರ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‌ ಟೂರ್ನಿಯ ನಿಮಿತ್ತ ಅಭ್ಯಾಸದ ಪಂದ್ಯವನ್ನು ಆಡಲಿರುವ ಭಾರತ ಎ ತಂಡದಿಂದ ಅವರು ಹೊರ ನಡೆದಿದ್ದಾರೆ," ಎಂದು ಬಿಸಿಸಿಐ ತಿಳಿಸಿದೆ.

ಅಸ್ಸಾಂನ ಛೆಟ್ರಿ ಅವರು ಆಡಿರುವ 7 ಟಿ20ಐ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸಾಧನೆಯ ವಿಷಯದಲ್ಲಿ ಅವರ ದಾಖಲೆ ತುಂಬಾ ಸಾಧಾರಣವಾಗಿದೆ. ಅವರು 4 ಇನಿಂಗ್ಸ್‌ಗಳಲ್ಲಿ ಕೇವಲ 37 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ, ಗರಿಷ್ಠ ಸ್ಕೋರ್ 24 ಮತ್ತು 90 ಪ್ಲಸ್ ಸ್ಟ್ರೈಕ್ ರೇಟ್ ತುಂಬಾ ಕಳಪೆಯಾಗಿದೆ. ಅವರು ತಮ್ಮ ನಾಲ್ಕು ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಸಿಕ್ಸ್ ಕೂಡ ಬಾರಿಸಿಲ್ಲ.

Duleep Trophy 2025: 184 ರನ್‌ ಬಾರಿಸಿ ಬಿಸಿಸಿಐಗೆ ಋತುರಾಜ್‌ ಗಾಯಕ್ವಾಡ್‌ ಸಂದೇಶ!

ಸೆಪ್ಟಂಬರ್‌ 14ರಂದು ಮುಲ್ಲಾನ್‌ಪುರದಲ್ಲಿ ಆಸ್ಟ್ರೇಲಿಯಾ ವಿರುದ್ದ ಆರಂಭವಾಗುವ ಮೂಲಕ ಪಂದ್ಯಗಳ ಏಕದಿನ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ. ಸೆಪ್ಟಂಬರ್‌ 30 ರಂದು ಗುವಹಾಟಿಯಲ್ಲಿ ಐಸಿಸಿ ವಿಶ್ವಕಪ್‌ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುವುದಕ್ಕೂ ಮುನ್ನ ಭಾರತ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ವಿಶ್ವಕಪ್‌ ಟೂರ್ನಿಗೆ ಭಾರತ ಮಹಿಳಾ ತಂಡ: ಹರ್ಮಿನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧಾನಾ (ಉಪ ನಾಯಕಿ), ಪ್ರತೀಕಾ ರಾವಲ್‌, ಹರ್ಲೀನ್‌ ಡಿಯೋಲ್‌, ಜೆಮಿಮಾ ರೊಡ್ರಿಗಸ್‌, ರಿಚಾ ಘೋಷ್‌, ಉಮಾ ಛೆಟ್ರಿ (ವಿ.ಕೀ), ರೇಣುಕಾ ಸಿಂಗ್‌ ಠಾಕೂರ್‌, ದೀಪ್ತಿ ಶರ್ಮಾ, ಸ್ನೇಹಾ ರಾಣಾ, ಶ್ರೀ ಚರಣಿ, ರಾಧಾ ಯಾದವ್‌, ಅಮನ್‌ಜೋತ್‌ ಕೌರ್‌, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್‌

ಮೀಸಲು ಆಟಗಾರ್ತಿಯರು: ತೇಜಲ್‌ ಹಸಬ್ನಿಸ್‌, ಪ್ರೇಮಾ ರಾವತ್‌, ಪ್ರಿಯಾ ಮಿಶ್ರಾ, ಮಿನ್ನು ಮಣಿ, ಸಯಾಲಿ ಸಾತ್ಘರೆ