ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ ಕ್ರಮಾಂಕ ಸೂಚಿಸಿದ ಮೊಹಮ್ಮದ್‌ ಕೈಫ್‌!

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಆಡಬೇಕೆಂದು ಬಿಸಿಸಿಐ ಆಯ್ಕೆ ಸಮಿತಿಗೆ ಮೊಹಮ್ಮದ್‌ ಕೈಫ್‌ ಆಗ್ರಹಿಸಿದ್ದಾರೆ. ತಿಲಕ್‌ ವರ್ಮಾಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಹುದು. ಹಾಗಾಗಿ ತಿಲಕ್‌ ಬದಲಿಗೆ ಸ್ಯಾಮ್ಸನ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡುವುದು ಸೂಕ್ತ ಎಂದಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಮೊಹಮ್ಮದ್‌ ಕೈಫ್‌!

ಸಂಜು ಸ್ಯಾಮ್ಸನ್‌ಗೆ ಮೂರನೇ ಕ್ರಮಾಂಕದಲ್ಲಿ ಅವಕಾಶ ನೀಡಿ ಎಂದ ಮೊಹಮ್ಮದ್‌ ಕೈಫ್‌. -

Profile Ramesh Kote Sep 5, 2025 1:52 PM

ದುಬೈ: ಬಹುನಿರೀಕ್ಷಿತ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಈಗಾಗಲೇ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಬಲಿಷ್ಠ ಭಾರತ ತಂಡವನ್ನು (India) ಪ್ರಕಟಿಸಿದೆ. ಹದಿನೈದು ಮಂದಿ ಆಟಗಾರರ ಈ ತಂಡದಲ್ಲಿ ಸ್ಟಾರ್‌ ಆಟಗಾರರ ದಂಡೇ ಇದೆ. ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದ ಈ ತಂಡದಲ್ಲಿ ಮೂರು ಮಂದಿ ಆರಂಭಿಕ ಆಟಗಾರರಿದ್ದಾರೆ. ಈ ಮೂವರಲ್ಲಿ ಈಗಾಗಲೇ ಶುಭ‌ಮನ್‌ ಗಿಲ್‌ ಉಪನಾಯಕನಾಗಿರುವುದರಿಂದ ಅಭಿಷೇಕ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಸ್ಪಷ್ಟವಾಗಿದೆ. ಹಾಗಾಗಿ ಸಂಜು ಸ್ಯಾಮ್ಸನ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸುವುದು ಅನುಮಾನವೆನ್ನಲಾಗುತ್ತಿದೆ. ಸಂಜು ಸ್ಯಾಮ್ಸನ್‌ ಅವರಿಗೆ ಒಂದು ವೇಳೆ ತಂಡದಲ್ಲಿ ಸ್ಥಾನ ಸಿಗದೇ ಹೋದರೆ ಅದು ಆಘಾತಕಾರಿ ಬೆಳವಣಿಗೆ ಎಂದು ಹಲವರು ಕಳವಳ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಹನ್ನೊಂದರ ಬಳಗದಲ್ಲಿ ಸ್ಯಾಮ್ಸನ್‌ ಅವರಿಗೆ ಸ್ಥಾನ ಸಿಕ್ಕರೆ ಧ್ರುವ್‌ ಜುರೆಲ್‌ ಅವರು ಹೊರಗುಳಿಯಬೇಕಾಗುತ್ತದೆ. ಇದರ ನಡುವೆ ಸಂಜು ಸ್ಯಾಮ್ಸನ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬೇಕೆಂಬ ಕೂಗ ಇದೀಗ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಇದೀಗ ಇದಕ್ಕೆ ಪೂರಕವೆಂಬಂತೆ ಆಯ್ಕೆ ಸಮಿತಿಗೆ ಉಪಯುಕ್ತ ಸಲಹೆ ನೀಡರುವ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ತಿಲಕ್‌ ವರ್ಮಾ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಕೈಫ್, ತಿಲಕ್‌ ವರ್ಮಾ ಅವರನ್ನು ಮುಂದಿನ ವರ್ಷದ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಪರಿಗಣಿಸಿ ಪ್ರಸಕ್ತ ಟೂರ್ನಿಯಲ್ಲಿ ಸ್ಯಾಮ್ಸನ್‌ಗೆ ಅವಕಾಶ ನೀಡಿ ಎಂದಿದ್ದಾರೆ.

Asia Cup 2025: ಮಲೇಷ್ಯಾ ವಿರುದ್ಧ ಗೆದ್ದು ಫೈನಲ್‌ ರೇಸ್‌ಗೆ ಬಂದ ಭಾರತ ಹಾಕಿ ತಂಡ!

ಸಂಜು ಸ್ಯಾಮ್ಸನ್‌ ಪರ ಬ್ಯಾಟ್‌ ಬೀಸಿದ ಮೊಹಮ್ಮದ್‌ ಕೈಫ್

ಈ ಕುರಿತು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಸಂಜು ಸ್ಯಾಮ್ಸನ್‌, "ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಆಡಲಿದ್ದಾರೆ. ತಿಲಕ್ ವರ್ಮಾ ಇನ್ನೂ ಯುವಕ ಮತ್ತು ಅವರ ಸರದಿಗಾಗಿ ಕಾಯಬಹುದು ಎಂದು ನಾನು ಭಾವಿಸುತ್ತೇನೆ. ಸಂಜು ಒಬ್ಬ ಅನುಭವಿ ಬ್ಯಾಟ್ಸ್‌ಮನ್ ಮತ್ತು 3ನೇ ಸ್ಥಾನದಲ್ಲಿ ಅವರಿಗೆ ಸ್ಥಿರ ಅವಕಾಶಗಳನ್ನು ನೀಡುವ ಮೂಲಕ ಅವರನ್ನು ಉತ್ತಮಗೊಳಿಸಬಹುದು. ಆರು ತಿಂಗಳ ನಂತರ ವಿಶ್ವಕಪ್ ಇದೆ ಮತ್ತು ಅವರು ಅವಕಾಶಕ್ಕೆ ಅರ್ಹರು,"ಎಂದು ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಬೌಲರ್ ತಲೆಯ ಮೇಲೆ ನೇರವಾಗಿ ಗರಿಷ್ಠ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಈ ಕೌಶಲವನ್ನು ಅನೇಕರು ಪರಿಪೂರ್ಣತೆಯಿಂದ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ವಿದೇಶಿ ಸರಣಿಯಲ್ಲಿ ಮತ್ತು ಐಪಿಎಲ್‌ನಲ್ಲಿಯೂ ಸ್ಯಾಮ್ಸನ್ ಅವರ ಪ್ರದರ್ಶನಗಳ ಬಗ್ಗೆ ಅವರು ಬೆಳಕು ಚೆಲ್ಲಿದರು, ಅಲ್ಲಿ ಕೇರಳದಲ್ಲಿ ಜನಿಸಿದ ಅವರು ರಾಜಸ್ಥಾನ್ ರಾಯಲ್ಸ್ ಅನ್ನು ಮುನ್ನಡೆಸುತ್ತಾರೆ.

Asia Cup 2025: ಏಷ್ಯಾಕಪ್‌ಗೆ ಯುಎಇ ತಂಡ ಪ್ರಕಟ; ವಸೀಮ್ ನಾಯಕ

"ಅವರು ಐಪಿಎಲ್‌ನಲ್ಲಿ ಟಾಪ್ 10 ಸಿಕ್ಸ್-ಹಿಟರ್‌ಗಳಲ್ಲಿ ಒಬ್ಬರು. ಅದಕ್ಕಾಗಿಯೇ ರಶೀದ್ ಖಾನ್ ಮಧ್ಯಮ ಓವರ್‌ಗಳಲ್ಲಿ ಬೌಲ್‌ ಮಾಡಲು ಬಂದಾಗ, ಸಂಜುಗಿಂತ ಉತ್ತಮ ಆಟಗಾರ ಸಿಗುವುದಿಲ್ಲ ಎಂದು ನಾನು ನಂಬುತ್ತೇನೆ, ಏಕೆಂದರೆ ಅವರು ನೆಲದಲ್ಲಿ ಸಿಕ್ಸ್ ಹೊಡೆಯಬಹುದು. ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ಗೆ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಒಂದಾಗಿದೆ ಮತ್ತು ಅವರು ಅಲ್ಲಿ ಆರಂಭಿಕ ಆಟಗಾರನಾಗಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಅವರು ಪೇಸ್ ಮತ್ತು ಸ್ಪಿನ್ ಎರಡಕಕೂ ಚೆನ್ನಾಗಿ ಆಡುತ್ತಾರೆ ಮತ್ತು ಐಪಿಎಲ್‌ನಲ್ಲಿ ಅವರು ಪ್ರತಿ ವರ್ಷ 400-500 ರನ್ ಗಳಿಸುತ್ತಾರೆ," ಎಂದು ಕೈಫ್ ತಿಳಿಸಿದ್ದಾರೆ.

ಮೊಹಮ್ಮದ್‌ ಕೈಫ್‌ ಅವರ ಈ ಹೇಳಿಕೆ ಸಂಜು ಸ್ಯಾಮ್ಸನ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕೆಂಬ ಕೂಗಿಗೆ ಮತ್ತಷ್ಟು ಪುಷ್ಠಿ ನೀಡಿದ್ದು, ತಂಡದಲ್ಲಿ ಸ್ಯಾಮ್ಸನ್‌ ಅವರಿಗೆ ಸ್ಥಾನ ನೀಡವಂತೆ ಒತ್ತಡ ಹೇರಲಾಗುತ್ತಿದೆ.

2025ರ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡ

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್