ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಂಡೀಸ್‌ ಎದುರು ಭಾರತ ತಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್‌ಗೆ ರೋಹಿತ್‌ ಶರ್ಮಾ ವಿಶೇಷ ಸಂದೇಶ!

Rohit sharma Praised in Sanju samson: ವೆಸ್ಟ್‌ ಇಂಡೀಸ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ 50 ಎಸೆತಗಳಲ್ಲಿ 97 ರನ್‌ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್‌ಗೆ ಮಾಜಿ ನಾಯಕ ರೋಹಿತ್‌ ಶರ್ಮಾ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ರೋಹಿತ್‌ ಶರ್ಮಾ ಮೆಚ್ಚುಗೆ.

ಕೋಲ್ಕತಾ: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಆರಂಭಕ್ಕೂ ಮುನ್ನ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ಗೆ (sanju Samson) ನೀಡಿದ್ದ ರೋಹಿತ್ ಶರ್ಮಾ (Rohit Sharma) ಅವರ ವಿಶೇಷ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ ಒಂದರಂದು ಕೋಲ್ಕತ್ತಾದ ಈಡನ್‌ ಗಾಡರ್ನ್ಸ್‌ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಮಹತ್ವದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಜಯ ತಂದುಕೊಟ್ಟ ಬಳಿಕ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾರ ಹಳೆಯ ಸಂದೇಶ ಮತ್ತೊಮ್ಮೆ ಚರ್ಚೆಗೆ ಮುನ್ನೆಲೆಗೆ ಬಂದಿದೆ.

ವೆಸ್ಟ್‌ ಇಂಡೀಸ್‌ ನೀಡಿದ್ದ 196 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿ, ತಂಡವನ್ನು ಐದು ವಿಕೆಟ್‌ಗಳ ಜಯದತ್ತ ಮುನ್ನಡೆಸಿದರು. ಅವರ ಈ ಅದ್ಭುತ ಇನಿಂಗ್ಸ್‌ ನೆರವಿನಿಂದ ಭಾರತ ತಂಡ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಟೂರ್ನಿಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ನೀಡಿದ್ದ ಸ್ಪೂರ್ತಿದಾಯಕ ಸಂದೇಶ ಇದೀಗ ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ನಂತರ ಮತ್ತಷ್ಟು ಗಮನ ಸೆಳೆಯುತ್ತಿದೆ. ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದಲ್ಲಿ ಈ ಸಂದೇಶದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

IND vs WI: ʻಫೋನ್‌ ಸ್ವಿಚ್‌ ಮಾಡಿ, ಸೋಶಿಯಲ್‌ ಮೀಡಿಯಾದಿಂದ ದೂರ ಇದ್ದೇನೆʼ,-ಸಂಜು ಸ್ಯಾಮ್ಸನ್‌!

ಆದರೆ ಟೂರ್ನಿಯ ಆರಂಭದಲ್ಲಿ ಸಂಜು ಸ್ಯಾಮ್ಸನ್‌ಗೆ ಉತ್ತಮ ಅವಕಾಶ ಸಿಕ್ಕಿರಲಿಲ್ಲ. ಮೊದಲ ಪಂದ್ಯದಿಂದಲೇ ಅವರು ಬೆಂಚ್‌ನಲ್ಲೇ ಕುಳಿತಿದ್ದರು. ಇದೇ ಸಂದರ್ಭದಲ್ಲಿ ಯುಎಸ್ಎ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ರೋಹಿತ್ ಶರ್ಮಾ ಅವರನ್ನು ಭೇಟಿ ಮಾಡಿದರು.

ಸಂಜು ಸ್ಯಾಮ್ಸನ್‌ಗೆ ರೋಹಿತ್‌ ಶರ್ಮಾ ನೀಡಿದ್ದ ಸಲಹೆ ಏನು?

ಐಸಿಸಿ ಟಿ20 ವಿಶ್ವಕಪ್‌ಗೆ ಐಸಿಸಿ ರಾಯಭಾರಿಯಾಗಿರುವ ರೋಹಿತ್ ಶರ್ಮಾ, ಟೂರ್ನಿಯ ಆರಂಭಿಕ ಹಂತದಲ್ಲಿ ಭಾರತ ತಂಡದೊಂದಿಗೆ ಸಮಯ ಕಳೆಯುತ್ತಿದ್ದರು. ಸ್ಯಾಮ್ಸನ್‌ ಅವರ ಕಳಪೆ ಫಾರ್ಮ್‌ ಅನ್ನು ಗಮನಿಸಿದ ಅವರು, ನಿರಾಶರಾಗಬೇಡ ಎಂದು ಪ್ರೋತ್ಸಾಹಿಸಿದ್ದರು.

IND vs WI: ʻಸಲಾಂ ಸಂಜು ಭಾಯ್‌..!-ಭಾರತವನ್ನು ಗೆಲ್ಲಿಸಿದ ಸ್ಯಾಮ್ಸನ್‌ಗೆ ಸೂರ್ಯಕುಮಾರ್‌ ಗೌರವ!

“ನಿರುತ್ಸಾಹವಾಗಬೇಡ. ಇದು ದೀರ್ಘಾವಧಿ ಟೂರ್ನಿ. ನಿನಗೆ ಖಂಡಿತವಾಗಿ ಅವಕಾಶ ಸಿಗುತ್ತದೆ. ಆ ಅವಕಾಶ ಯಾವಾಗ ಬೇಕಾದರೂ ಬರಬಹುದು,” ಎಂದು ರೋಹಿತ್ ಶರ್ಮಾ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ಗೆ ಹೇಳಿದ್ದರು.

ನಂತರ ಸಂಜು ಸ್ಯಾಮ್ಸನ್ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದು ಕಣಕ್ಕಿಳಿದಿದ್ದರು. ಆ ಬಳಿಕ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ತಂಡಕ್ಕೆ ಮರಳಿ, ಬ್ಯಾಟಿಂಗ್‌ನಿಂದ ಪ್ರಭಾವಶೀಲ ಪ್ರದರ್ಶನವನ್ನು ತೋರಿದ್ದರು. ಇದಾದ ನಂತರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಅವರು ಅಮೋಘ ಅಮೋಘ ಇನಿಂಗ್ಸ್‌ ಆಡಿದ್ದು, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.