ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನಿಜವಾಗಿಯೂ ನನಗೆ ಗೊತ್ತಿರಲಿಲ್ಲʼ: ಟಿ20 ವಿಶ್ವಕಪ್‌ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಜಿತೇಶ್‌ ಶರ್ಮಾ ಹೇಳಿದ್ದಿದು!

Jitesh Sharma on T20 World Cup Snub: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಿಂದ ಜಿತೇಶ್‌ ಶರ್ಮಾ ಅವರನ್ನು ಕೈ ಬಿಟ್ಟು, ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆರ್‌ಸಿಬಿ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಟಿ20 ವಿಶ್ವಕಪ್‌ನಿಂದ ಹೊರಗಿಟ್ಟಿರುವ ಬಗ್ಗೆ ಜಿತೇಶ್‌ ಶರ್ಮಾ ಹೇಳಿಕೆ.

ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಭಾರತ ತಂಡದಲ್ಲಿ (India) ಅವಕಾಶ ನೀಡದ ಬಗ್ಗೆ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ (Jitesh Sharma) ಪ್ರತಿಕ್ರಿಯೆ ನೀಡಿದ್ದಾರೆ. ತಂಡ ಪ್ರಕಟವಾಗುವವರೆಗೂ ನನ್ನನ್ನು ಕೈ ಬಿಟ್ಟಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಆದರೆ, ತದನಂತರ ಆಯ್ಕೆದಾರರು ನೀಡಿದ ಸ್ಪಷ್ಟನೆ ನನಗೆ ಅರ್ಥವಾಯಿತು ಎಂದು ಆರ್‌ಸಿಬಿ ಆಟಗಾರ ತಿಳಿಸಿದ್ದಾರೆ. ಫೆಬ್ರವರಿ ಹಾಗೂ ಮಾರ್ಚ್‌ ಅವಧಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಸತತ ಎರಡನೇ ಬಾರಿ ಚುಟುಕು ವಿಶ್ವಕಪ್‌ ಗೆಲ್ಲಲು ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ಎದುರು ನೋಡುತ್ತಿದೆ.

ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಬಿಸಿಸಿಐ ಆಯ್ಕೆ ಸಮಿತಿಯು ಕೆಲವೊಂದು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಉಪ ನಾಯಕ ಶುಭಮನ್‌ ಗಿಲ್‌ ಹಗೂ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಅವರನ್ನು ಕೈ ಬಿಟ್ಟಿತ್ತು. ಗಿಲ್‌ ಔಟ್‌ ಆಫ್‌ ಫಾರ್ಮ್‌ ಆಗಿದ್ದರು. ಇದು ಎಲ್ಲರಿಗೂ ಗೊತ್ತಿತ್ತು. ಆದರೆ, ಜಿತೇಶ್‌ ಶರ್ಮಾ ಅವರನ್ನು ಕಡೆಗಣಿಸುವ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಸಂಜು ಸ್ಯಾಮ್ಸನ್‌ ಜೊತೆಗೆ ಜಿತೇಶ್‌ ಶರ್ಮಾ ಅವರನ್ನು ಎರಡನೇ ವಿಕೆಟ್‌ ಕೀಪರ್‌ ಆಗಿ ಉಳಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಜಿತೇಶ್‌ ಬದಲು ಇಶಾನ್‌ ಕಿಶನ್‌ ಅವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು.

IND vs NZ: ʻಅವರು ಇಂದಿಗೂ ಬದಲಾಗಿಲ್ಲʼ-ವಿರಾಟ್‌ ಕೊಹ್ಲಿ ಬಗ್ಗೆ ಆರ್‌ ಅಶ್ವಿನ್‌ ಅಚ್ಚರಿ ಹೇಳಿಕೆ!

ಜಿತೇಶ್‌ ಶರ್ಮಾ ಪ್ರತಿಕ್ರಿಯೆ

ಮಾಧ್ಯಮವೊಂದರ ಜೊತೆಗೆ ಪ್ರತಿಕ್ರಿಯಿಸಿದ ಜಿತೇಶ್‌ ಶರ್ಮಾ, "ತಂಡವನ್ನು ಘೋಷಿಸುವವರೆಗೂ ನನ್ನ ಕೈಬಿಡುವಿಕೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ಅದಾದ ನಂತರ, ಪತ್ರಿಕಾಗೋಷ್ಠಿಯಲ್ಲಿ ಆಯ್ಕೆದಾರರು ನೀಡಿದ ವಿವರಣೆಯನ್ನು ನಾನು ಒಪ್ಪಿಕೊಂಡೆ; ಅದು ಸರಿಯಾದ ಕಾರಣವಾಗಿತ್ತು. ನಂತರ, ನಾನು ತರಬೇತುದಾರರು ಮತ್ತು ಆಯ್ಕೆದಾರರೊಂದಿಗೆ ಚರ್ಚಿಸಿದೆ ಮತ್ತು ಅವರ ತಾರ್ಕಿಕತೆಯು ನ್ಯಾಯಯುತವಾಗಿದೆ ಎಂದು ನಾನು ಭಾವಿಸಿದೆ. ಅವರು ನನಗೆ ಏನು ವಿವರಿಸಲು ಬಯಸುತ್ತಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಅದನ್ನು ಒಪ್ಪಿಕೊಂಡೆ," ಎಂದಿದ್ದಾರೆ.

ಟಿ20ಐನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಆಯ್ಕೆದಾರರು ಶುಭಮನ್‌ ಗಿಲ್ ಅವರನ್ನು ಕೈಬಿಟ್ಟರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಅವರು ಕೇವಲ 32 ರನ್ ಗಳಿಸುವಲ್ಲಿ ಶಕ್ತರಾಗಿದ್ದರು. ಐದನೇ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಆಡುವ ಮೂಲಕ ಅವರು ಆಡುವ ಹನ್ನೊಂದರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಗಾಯದ ಕಾರಣದಿಂದಾಗಿ ಗಿಲ್ ಅವರನ್ನು ಹೊರಗಿಡಲಾಗಿತ್ತು.

India squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ!

ಕಿಶನ್ ಜೊತೆಗೆ, ಆಯ್ಕೆದಾರರು ರಿಂಕು ಸಿಂಗ್ ಅವರನ್ನು ಸಹ ತಂಡಕ್ಕೆ ಕರೆಸಿಕೊಂಡರು. ದಕ್ಷಿಣ ಆಫ್ರಿಕಾ ಟಿ20ಐ ಸರಣಿಗೆ ಎಡಗೈ ಬ್ಯಾಟ್ಸ್‌ಮನ್ ಅವರನ್ನು ಕೈಬಿಡಲಾಗಿತ್ತು. ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಅವರು ಏಷ್ಯಾಕಪ್‌ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡುವ ಅವಕಾಶ ಪಡೆದಿದ್ದರು.

ಭಾರತ ಟಿ20 ವಿಶ್ವಕಪ್ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಜಸ್‌ಪ್ರೀತ್‌ ಬುಮ್ರಾ, ಅಭಿಷೇಕ್ ಶರ್ಮಾ, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ಕುಲ್‌ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್‌, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ರಿಂಕು ಸಿಂಗ್