ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻನಾನಿನ್ನೂ ಆಡಬೇಕಾಗಿತ್ತುʼ-ಐಪಿಎಲ್‌ ನಿವೃತ್ತಿಗೆ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಭಾನುವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲು ಅನುಭವಿಸಿದ ಬಳಿಕ ದಿಗ್ಗಜ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌,ಸಿಎಸ್‌ಕೆ ತಂಡದ ಪರ ಆಡುವಾಗ ಅನುಭವಿಸಿದ ಕಹಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಹಾಗೂ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಐಪಿಎಲ್‌ಗೆ ನಿವೃತ್ತಿ ಹೇಳಲು ಕಾರಣ ತಿಳಿಸಿದ ಆರ್‌ ಅಶ್ವಿನ್‌.

ಬೆಂಗಳೂರು: ಏಪ್ರಿಲ್‌ 5 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಸೋಲಿನ ಬಳಿಕ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ಪರ ಆಡುತ್ತಿದ್ದ ಹಳೆಯ ಕಹಿ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಅಲ್ಲದೆ, ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಪರ ಆಡಿದ ಬಳಿಕ ಐಪಿಎಲ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಲು ಕಾರಣವೇನೆಂದು ರಿವೀಲ್‌ ಮಾಡಿದ್ದಾರೆ. ಅಂದ ಹಾಗೆ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ 2026ರ ಐಪಿಎಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಎಸ್‌ಕೆ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅಶ್ವಿನ್, ತಾನೂ ಕೂಡ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಿದ್ದ ವೇಳೆ ಒಂದು ನಿರಾಶಾದಾಯಕ ಆವೃತ್ತಿಯನ್ನು ಅನುಭವಿಸಿರುವುದಾಗಿ ನೆನಪಿಸಿಕೊಂಡರು. ಆ ಅನುಭವದ ಬಳಿಕ ತನ್ನನ್ನು ಭಾರತೀಯ ಕ್ರಿಕೆಟ್‌ನಿಂದ ದೂರ ಸರಿಯುವಂತೆ ಮಾಡಿತು ಎಂದು ಹೇಳಿದ್ದಾರೆ. ಅವರು ಎಲ್ಲಾ ಮಾದರಿಗಳ ಕ್ರಿಕೆಟ್‌ಗೆ ವಿದಾಯ ಹೇಳಿ ವಿದೇಶಿ ಟಿ20 ಲೀಗ್‌ಗಳಲ್ಲಿ ಅವಕಾಶಗಳನ್ನು ಹುಡುಕಲು ಮುಂದಾಗಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಹಾಗೂ ಭಾರತೀಯ ಕ್ರಿಕೆಟ್‌ಗೆ ಇನ್ನೂ ಕೊಡುಗೆ ನೀಡಲು ತಾನು ಸಾಕಷ್ಟು ಸಾಮರ್ಥ್ಯ ಹೊಂದಿದ್ದೇನೆ ಎಂಬ ಭಾವನೆ ನನಗಿದೆ ಎಂದು ಅಶ್ವಿನ್ ಒಪ್ಪಿಕೊಂಡರು. ಆದರೆ 2025ರ ಐಪಿಎಲ್‌ ಟೂರ್ನಿಯ ಬಳಿಕ ತಾವು ಮಾನಸಿಕವಾಗಿ ಬಹಳ ದಣಿದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

IPL 2026: ʻತುಂಬಾ ನೋವಾಗುತ್ತಿದೆʼ: ಸಿಎಸ್‌ಕೆ ಹ್ಯಾಟ್ರಿಕ್‌ ಸೋಲಿನ ಬಗ್ಗೆ ಅಶ್ವಿನ್‌ ಪ್ರತಿಕ್ರಿಯೆ!

"ಹಿಂದಿನ ವರ್ಷ ನಾನು ಸಿಎಸ್‌ಕೆ ಜತೆಗೆ ಒಂದು ನಿರಾಶಾದಾಯಕ ಸೀಸನ್ ಅನ್ನು ಕಳೆದಿದ್ದೇನೆ, ಅದು ವೈಯಕ್ತಿಕವಾಗಿ ನನಗೆ ಸಹ ನಿರಾಶಾದಾಯಕವಾಗಿತ್ತು. ನಿಜ ಹೇಳಬೇಕೆಂದರೆ, ನನ್ನ ಮನಸ್ಸಿನಲ್ಲಿ ನಾನು ಇನ್ನೂ ಹೆಚ್ಚು ಆಡಬಹುದಾಗಿತ್ತು, ಆದರೆ ಭಾವನಾತ್ಮಕವಾಗಿ ಆಡಲು ನನಗೆ ಸಾಮರ್ಥ್ಯ ಇರಲಿಲ್ಲ," ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಸಿಎಸ್‌ಕೆ ಪರ ಆಡಲು ಇನ್ನೂ ಮನಸಿತ್ತು: ಅಶ್ವಿನ್‌

"ಐಪಿಎಲ್‌ ಆಡಲು ನಾನು ಮತ್ತೆ ಸಿಎಸ್‌ಕೆಗೆ ಹೋಗಲು ಇಚ್ಛಿಸುವುದಿಲ್ಲ, ಅದು ಮಾನಸಿಕವಾಗಿ ಕಷ್ಟದಾಯಕವಾಗಿದೆ. ನನಗೆ ಅದು ತುಂಬಾ ನೋವು ನೀಡಿದೆ. ನಾನು ಅಲ್ಲಿ ಹೋಗಲು ಬಯಸುತ್ತಿಲ್ಲ. ಸ್ವಲ್ಪ ಚರ್ಚೆ ಮಾಡಿದ್ದೆ, ನಾನು ಚೆನ್ನೈನಲ್ಲಿ ಆರಂಭಿಸಿದ್ದೇನೆ, ನನ್ನ ತವರು ನೆಲದಲ್ಲಿಯೇ ಮುಗಿಸಿದ್ದೇನೆ, ಇದು ಸಾಕು ನನಗೆ. ನಾನು ಸ್ವತಃ ನಿವೃತ್ತಿ ಪಡೆಯಲು ನಿರ್ಧರಿಸಿದೆ, ಏಕೆಂದರೆ ಇದರಿಂದ ಅವರಿಗೆ (ಮ್ಯಾನೇಜ್‌ಮೆಂಟ್) ನನ್ನನ್ನು ಉಳಿಸಬೇಕೇ ಅಥವಾ ಬಿಡುಗಡೆ ಮಾಡಬೇಕೇ ಎಂಬ ತಲೆನೋವು ಆಗುತ್ತಿರಲಿಲ್ಲ. ನಾನು ಹೊರಗೆ ಹೋದರೆ ಅವರು 10 ಕೋಟಿ ರು ಉಳಿಸಿಕೊಳ್ಳುತ್ತಾರೆ. ನನಗೆ ಇನ್ನೂ ನಿರಾಶೆ ಇದೆ. ನನಗೆ ನಿರೀಕ್ಷೆಗಳಿದ್ದವು, ನನಗೆ ಆಶೆಗಳಿದ್ದವು," ಎಂದು ಆರ್‌ ಅಶ್ವಿನ್‌ ಬೇಸರ ವ್ಯಕ್ತಪಡಿಸಿದ್ದಾರೆ.

IPL 2026: ಟಿಮ್‌ ಡೇವಿಡ್‌ ಅಬ್ಬರಕ್ಕೆ ಕೊಚ್ಚಿಹೋದ ಸಿಎಸ್‌ಕೆ, ಆರ್‌ಸಿಬಿಗೆ ಭರ್ಜರಿ ಜಯ!

"ನಾನು ಇಂದು ಕೆಲ ನಿರೀಕ್ಷೆಗಳನ್ನು ಹೊಂದಿದ್ದೆ. ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲಲಿದೆ ಎಂದು ನಾನು ಭರವಸೆಯನ್ನು ಇಟ್ಟುಕೊಂಡಿದ್ದೆ, ಏಕೆಂದರೆ ಬೆಂಗಳೂರು ತಂಡ ಬಲಿಷ್ಠವಾಗಿದೆ. ಆದರೆ, ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ತೋರಿದ ಸುಧಾರಣೆಯ ಮೇಲೆ ನಾನು ನಿರ್ಧರಿಸಿದ್ದೆ. ಆರ್‌ಸಿಬಿ ವಿರಾಮದ ನಂತರ ಈ ಪಂದ್ಯಕ್ಕೆ ಆಗಮಿಸಿದ್ದರ ಕುರಿತು ನನಗೆ ಸ್ವಲ್ಪ ನಂಬಿಕೆ ಇದ್ದಿತು. ಬೆಂಗಳೂರು ತಂಡ ಆಟವಾಡಿದ ರೀತಿಯಿಂದ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ," ಎಂದು ಸ್ಪಿನ್‌ ದಂತಕತೆ ತಮ್ಮ ಮಾತನ್ನು ಮುಗಿಸಿದ್ದಾರೆ.