ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಕೆಎಲ್‌ ರಾಹುಲ್‌ಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಡಿಸಿ ಕೋಚ್‌ ಹೇಮಾಂಗ್‌ ಬದಾನಿ!

KL Rahul Batting Order: ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕ ಸೇರಿದಂತೆ ವಿವಿಧ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದ್ದ ಕೆಎಲ್‌ ರಾಹುಲ್‌, ಈ ಬಾರಿ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಇನಿಂಗ್ಸ್‌ ಆರಂಭಿಸಲಿದ್ದಾರೆಂದು ಕೋಚ್‌ ಹೇಮಾಂಗ್‌ ಬದಾನಿ ಖಚಿತಪಡಿಸಿದ್ದಾರೆ.

ಕೆಎಲ್‌ ರಾಹುಲ್‌ಗೆ ಓಪನಿಂಗ್‌ ಸ್ಥಾನ ನೀಡಲು ಡಿಸಿ ಸಜ್ಜು.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 19ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕೆಎಲ್‌ ರಾಹುಲ್‌ (KL Rahul) ಇನಿಂಗ್ಸ್‌ ಆರಂಭಿಸಲಿದ್ದಾರೆಂದು ಹೆಡ್‌ ಕೋಚ್‌ ಹೇಮಾಂಗ್‌ ಬದಾನಿ (Hemang Badani) ಸ್ಪಷ್ಟಪಡಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಆರಂಭಿಕ ಕೋಡಿಯಿಂದ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರಂಭಿಕ ಜೋಡಿಯನ್ನು ಬದಲಾವಣೆ ಮಾಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಒಟ್ಟು ಏಳು ವಿಭಿನ್ನ ಓಪನಿಂಗ್ ಜೋಡಿಗಳನ್ನು ಪ್ರಯೋಗಿಸಿತ್ತು. ಪ್ರಾರಂಭದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಜೇಕ್ ಫ್ರೆಜರ್-ಮೆಗರ್ಕ್ ಜೊತೆಯಾಗಿ ಇನಿಂಗ್ಸ್‌ ಆರಂಭಿಸಿದರೂ, ಆಸ್ಟ್ರೇಲಿಯನ್ ಆಟಗಾರನ ಔಟ್‌ ಆಪ್‌ ಫಾರ್ಮ್‌ ಕಾರಣ ಉತ್ತಮ ಪ್ರದರ್ಶನ ಮೂಡಿ ಬಂದಿರಲಿಲ್ಲ. ನಿರಂತರ ಬದಲಾವಣೆಗಳಿಂದ ತಂಡದಲ್ಲಿ ಸ್ಥಿರತೆ ಕೊರತೆಯಾಗಿದ್ದು, ಒಟ್ಟಾರೆ 13 ಬಾರಿ ಓಪನಿಂಗ್ ಕ್ರಮದಲ್ಲಿ ಬದಲಾವಣೆ ಮಾಡಲಾಗಿತ್ತು. ಈ ಅಸ್ಥಿರತೆ ತಂಡದ ಆರಂಭಿಕ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚುವರಿ ಒತ್ತಡ ಬಿದ್ದಿತ್ತು.

IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ

ಲಖನೌ ಸೂಪರ್ ಜಯಂಟ್ಸ್‌ ವಿರುದ್ಧದ ತಮ್ಮ ಮೊದಲ ಪಂದ್ಯಕ್ಕೂ ಮುನ್ನ ಮಾತನಾಡಿದ ಹೇಮಾಂಗ್‌ ಬದಾನಿ, ಕಳೆದ ಎರಡು ವರ್ಷಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಓಪನಿಂಗ್ ಜೋಡಿಗಳ ಪಾತ್ರ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಸೀಸನ್‌ನಲ್ಲಿ ಕೆಎಲ್ ರಾಹುಲ್ ಅವರನ್ನು ಓಪನರ್ ಆಗಿ ಮುಂದುವರಿಸಲು ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ ಎಂದು ಅವರು ದೃಢಪಡಿಸಿದ್ದಾರೆ.

2025ರ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಪರ ಇನಿಂಗ್ಸ್‌ ಆರಂಭಿಸಿದ ಜೋಡಿಗಳು

ಫಾಫ್‌ ಡು ಪ್ಲೆಸಿಸ್‌ – ಜೇಕ್‌ ಮೆಗರ್ಕ್‌

ಫಾಫ್‌ ಡು ಪ್ಲೆಸಿಸ್‌– ಕೆಎಲ್‌ ರಾಹುಲ್

ಅಭಿಷೇಕ್‌ ಪೊರೆಲ್‌–ಕರುಣ್‌ ನಾಯರ್‌

ಅಭಿಷೇಕ್‌ ಪೊರೆಲ್‌– ಜೇಕ್‌ ಮೆಗರ್ಕ್‌

ಫಾಫ್‌ ಡು ಪ್ಲೆಸಿಸ್‌– ಅಭಿಷೇಕ್‌ ಪೊರೆಲ್‌

ಕೆಎಲ್‌ ರಾಹುಲ್‌–ಜೇಕ್‌ ಮೆಗರ್ಕ್‌

ಫಾಫ್‌ ಡು ಪ್ಲೆಸಿಸ್‌–ಕರುಣ್‌ ನಾಯರ್‌

IPL 2026: ಆರ್‌ಸಿಬಿ ಸಂಭಾವ್ಯ ಆಡುವ ಬಳಗ; ವೆಂಕಟೇಶ್ ಅಯ್ಯರ್, ಜಾಕೋಬ್ ಬೆಥೆಲ್ ಇಂಪ್ಯಾಕ್ಟ್‌ ಪ್ಲೇಯರ್‌

ಕೆಎಲ್‌ ರಾಹುಲ್‌ ವೈಟ್‌ ಬಾಲ್‌ ಫಾರ್ಮ್‌

2024ರ ಐಪಿಎಲ್ ಟೂರ್ನಿಯ ಮುಕ್ತಾಯವಾದ ಬಳಿಕ ಲಖನೌ ಸೂಪರ್ ಜಯಂಟ್ಸ್‌ ತಂಡ, ಕೆಎಲ್ ರಾಹುಲ್ ಅವರನ್ನು ಬಿಡುಗಡೆ ಮಾಡಿತ್ತು. ಫ್ರಾಂಚೈಸಿ ದಾಖಲೆಯ ಮೊತ್ತಕ್ಕೆ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಡೆಲ್ಲಿ ತಂಡವು ತಮ್ಮ ಬ್ಯಾಟಿಂಗ್ ಬಲವರ್ಧನೆಗಾಗಿ ರಾಹುಲ್ ಅವರನ್ನು ಪಡೆದುಕೊಂಡಿತು.ಕಳೆದ ಸೀಸನ್‌ನಲ್ಲಿ ರಾಹುಲ್ ಮಧ್ಯಮ ಕ್ರಮಾಂದಲ್ಲಿ ಬ್ಯಾಟಿಂಗ್ ಆರಂಭಿಸಿದರೂ, ಕ್ರಮೇಣ ಅವರನ್ನು ಮೂರನೇ ಕ್ರಮಾಂಕಕ್ಕೆ ಆಡಿಸಲಾಗಿತ್ತು.

ಕಳೆದ ಒಂದೂವರೆ ವರ್ಷದಲ್ಲಿ ರಾಹುಲ್ ತಮ್ಮ ಪವರ್-ಹಿಟ್ಟಿಂಗ್ ಕೌಶಲವನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದಾರೆ. 2025ರ ಐಪಿಎಲ್‌ ಟೂರ್ನಿಯಲ್ಲಿ ಅವರು 150 ಸ್ಟ್ರೈಕ್ ರೇಟ್‌ನೊಂದಿಗೆ 539 ರನ್ ಗಳಿಸಿದ್ದು, ಇದು 2022ರ ನಂತರ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಆ ಸೀಸನ್‌ನಲ್ಲಿ ಅವರು 600ಕ್ಕೂ ಹೆಚ್ಚು ರನ್ ಗಳಿಸಿದ್ದರೂ, ಸ್ಟ್ರೈಕ್ ರೇಟ್ ಕಡಿಮೆಯಾಗಿತ್ತು.