ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ʻವಿಕೆಟ್‌ ಪಡೆಯುವುದು ಸುಲಭವಲ್ಲʼ-ಬೌಲಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ಸಿರಾಜ್‌!

ವೆಸ್ಟ್‌ ಇಂಡೀಸ್‌ ವಿರುದ್ದದ ಮೊದಲನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನಡೆಸಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ವಿಂಡೀಸ್‌ 162 ರನ್‌ಗಳಿಗೆ ಆಲ್‌ಔಟ್‌ ಮಾಡಲು ಭಾರತಕ್ಕೆ ನೆರವು ನೀಡಿದ್ದರು. ತಮ್ಮ ಬೌಲಿಂಗ್‌ ಯಶಸ್ಸಿಗೆ ಕಾರಣವೇನೆಂದು ಸಿರಾಜ್‌ ಬಹಿರಂಗಪಡಿಸಿದ್ದಾರೆ.

ತಮ್ಮ ಬೌಲಿಂಗ್‌ ಯಶಸ್ಸಿಗೆ ಕಾರಣ ತಿಳಿಸಿದ ಮೊಹಮ್ಮದ್‌ ಸಿರಾಜ್‌.

ಅಹಮದಾಬಾದ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ (IND vs WI) ಆರಂಭಿಕ ದಿನ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ (Mohammed Siraj) ಮಾರಕ ಬೌಲಿಂಗ್‌ ದಾಳಿ ನಡೆಸಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಪ್ರವಾಸಿ ವಿಂಡೀಸ್‌ ತಂಡ 162 ರನ್‌ಗಳಿಗೆ ಆಲ್‌ಔಟ್‌ ಆಗಲು ಆತಿಥೇಯರಿಗೆ ನೆರವು ನೀಡಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿಯೂ (IND vs ENG) ಸಿರಾಜ್‌ ಗಮನಾರ್ಹ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಈ ಸರಣಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿದ್ದ ಬೌಲರ್‌ ಎನಿಸಿಕೊಂಡಿದ್ದರು. ಇದೀಗ ಅವರು ತಮ್ಮ ಬೌಲಿಂಗ್‌ ಯಶಸ್ಸಿಗೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊಹಮ್ಮದ್‌ ಸಿರಾಜ್‌ ಅದ್ಭುತವಾಗಿ ಬೌಲಿಂಗ್‌ ಪ್ರದರ್ಶನವನ್ನು ತೋರಿದರು. ಅವರು ತಾನು ಬೌಲ್‌ ಮಾಡಿದ 40 ಓವರ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಪ್ರಸಕ್ತ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 30 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಬೌಲರ್‌ ಎನಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ಹಿರಿಯ ವೇಗಿ ಮಿಚೆಲ್‌ ಸ್ಟಾರ್ಕ್‌ (29 ವಿಕೆಟ್‌) ಅವರನ್ನು ಹಿಂದಿಕ್ಕಿದರು.

IND vs WI 1st Test: ವಿಂಡೀಸ್‌ ಎದುರು ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಭಾರತ ತಂಡ!

"ಇಂಗ್ಲೆಂಡ್‌ನಲ್ಲಿ ಅತ್ಯಂತ ಸ್ಪರ್ಧಾತ್ಮಕ ಟೆಸ್ಟ್‌ ಸರಣಿ ಇದಾಗಿತ್ತು ಹಾಗೂ ಹೌದು ಈ ಸರಣಿಯಿಂದ ನಾನು ಸಾಕಷ್ಟು ವಿಶ್ವಾಸವನ್ನು ಪಡೆದುಕೊಂಡಿದ್ದೆ. ಬಲಿಷ್ಠ ತಂಡದ ಎದುರು ಬೌಲ್‌ ಮಾಡಿದಾಗ, ಅದರಿಂದ ವಿಭಿನ್ನ ರೀತಿಯ ವಿಶ್ವಾಸ ಸಿಗುತ್ತದೆ. ಅದರಂತೆ ಗುರುವಾರ ಕೂಡ ನನಗೆ ಇದೇ ರೀತಿ ಅನಿಸಿತು," ಎಂದು ಮೊಹಮ್ಮದ್‌ ಸಿರಾಜ್‌ ತಿಳಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮುಗಿದ ಮೂರು ವಾರಗಳ ಬಳಿಕ ಆಸ್ಟ್ರೇಲಿಯಾ ಎ ಹಾಗೂ ಭಾರತ ಎ ನಡುವಣ ಪಂದ್ಯದಲ್ಲಿ ನಾನು ಬೌಲ್‌ ಮಾಡಿದ್ದೆ. ಈ ಪಂದ್ಯಗಳಲ್ಲಿ ನಾನು ನನ್ನ ಬೌಲಿಂಗ್‌ ಲಯವನ್ನು ಕಂಡುಕೊಳ್ಳಲು ಸಾಧ್ಯವಾಯಿತು.

IND vs WI: 27 ವಿಕೆಟ್‌ ಪಡೆಯುವ ಮೂಲಕ ಮಿಚೆಲ್‌ ಸ್ಟಾರ್ಕ್‌ ದಾಖಲೆ ಮುರಿದ ಮೊಹಮ್ಮದ್‌ ಸಿರಾಜ್‌!

"ಇಂಗ್ಲೆಂಡ್‌ ಟೆಸ್ಟ್‌ ಸರಣಿ ಮುಗಿದ ಮೂರು ವಾರಗಳ ವಿರಾಮದ ಬಳಿಕ ನಾನು ಬೌಲಿಂಗ್‌ ತರಬೇತಿಯನ್ನು ಆರಂಭಿಸಿದ್ದೆ ಹಾಗೂ ಭಾರತ ಎ ತಂಡದ ಪರ ಆಡಿದ್ದೆ. ನೀವು ದೀರ್ಘಾವಧಿ ಬಳಿಕ ಕ್ರಿಕೆಟ್‌ ಆಡಿದರೆ, ನೀವು ಲಯಕ್ಕೆ ಮರಳುವುದನ್ನು ಕಲಿಯಬೇಕಾಗುತ್ತದೆ. ಲಖನೌದಲ್ಲಿ ತುಂಬಾ ಬಿಸಿ ಇತ್ತು ಹಾಗೂ ಈ ಸರಣಿಗೆ ತಯಾರಿ ನಡೆಸಲು ನನಗೆ ಉತ್ತಮ ಅವಕಾಶ ಲಭಿಸಿತ್ತು. ಇಂಗ್ಲೆಂಡ್‌ ಪ್ರವಾಸದಿಂದ ನಾನು ನನ್ನ ಲಯವನ್ನು ಹಿಂಬಾಲಿಸುತ್ತಿದ್ದೇನೆ. ಸುಮಾರು ವರ್ಷಗಳ ಬಳಿಕ ನಾನು ವಿರಾಮವನ್ನು ಆನಂದಿಸಿದ್ದೇನೆ," ಎಂದು ಮೊಹಮ್ಮದ್‌ ಸಿರಾಜ್‌ ತಿಳಿಸಿದ್ದಾರೆ.

"ಇಲ್ಲಿಯೂ ಈ ನಾಲ್ಕು ವಿಕೆಟ್‌ಗಳಿಗಾಗಿ ನಾನು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಇಂಗ್ಲೆಂಡ್‌ನಲ್ಲಿಯೂ ಸಹ ವಿಕೆಟ್‌ಗಳನ್ನು ಪಡೆಯಲು ನಾನು ಕಷ್ಟಪಟ್ಟು ಕೆಲಸ ಮಾಡಿದ್ದೆ. ನೀವು ಹಾಗೆ ವಿಕೆಟ್‌ಗಳನ್ನು ಪಡೆಯಬಹುದು ಎಂಬುದು ನಿಜವಲ್ಲ. ಯಾರೂ ನನಗೆ ಐದನೇ ವಿಕೆಟ್ ನೀಡಲಿಲ್ಲ (ಗುರುವಾರ), ನಾನು ನಾಲ್ವರನ್ನೂ ಕಠಿಣ ಪರಿಶ್ರಮದಿಂದ ಔಟ್‌ ಮಾಡಬೇಕಾಯಿತು," ಎಂದು ಟೀಮ್‌ ಇಂಡಿಯಾ ವೇಗಿ ಹೇಳಿದ್ದಾರೆ.