ನವದೆಹಲಿ: ಇಶಾನ್ ಕಿಶನ್ (Ishan Kishan) ನಾಯಕತ್ವದ ಪೂರ್ವ ವಲಯ ತಂಡ 2026-27ರ ದುಲೀಪ್ ಟ್ರೋಫಿ (Duleep Trophy 2026) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಫೈನಲ್‌ನಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 350ಕ್ಕೂ ಹೆಚ್ಚು ರನ್ ಗಳಿಸಿದ ಇಶಾನ್ ಕಿಶನ್ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಗೆ ಭಾಜನರಾದರು. ಆದರೆ ಇದೇ ವೇಳೆ ಮತ್ತೊಬ್ಬ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಕೂಡ ನಿರಂತರವಾಗಿ ಸುದ್ದಿಯಲ್ಲಿದ್ದರು. 15ರ ವಯಸ್ಸಿನ ವೈಭವ್ ಫೈನಲ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ, ಇಡೀ ದುಲೀಪ್ ಟ್ರೋಫಿ ಅಭಿಯಾನದಲ್ಲಿ ಅವರ ಬ್ಯಾಟಿಂಗ್ ಜೊತೆಗೆ ತಂಡದ ಮ್ಯಾನೇಜ್‌ಮೆಂಟ್ ನೀಡಿದ್ದ ಉಪನಾಯಕತ್ವದ ಜವಾಬ್ದಾರಿಯಿಂದ ಗಮನ ಸೆಳೆದರು.
ಪೂರ್ವ ವಲಯ ತಂಡದ ಅಧಿಕೃತ ಉಪನಾಯಕರಾಗಿದ್ದ ವೈಭವ್ ಸೂರ್ಯವಂಶಿ, ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಗಾಯಗೊಂಡು ಮೈದಾನದಿಂದ ಹೊರನಡೆದ ಸಂದರ್ಭದಲ್ಲಿ ಅವರ ಸ್ಥಾನವನ್ನು ತುಂಬಬೇಕಾಯಿತು. ಈ ಅವಧಿಯಲ್ಲೇ ವೈಭವ್ ಮೊದಲ ಬಾರಿ ಯಶಸ್ವಿಯಾಗಿ ಡಿಆರ್‌ಎಸ್ ರಿವ್ಯೂಗಳನ್ನು ತೆಗೆದುಕೊಂಡರು. ಬಳಿಕ ಫೈನಲ್‌ನಲ್ಲಿ ಇಶಾನ್ ಮತ್ತೆ ಮೈದಾನದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರೂ, ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳಬೇಕೇ ಬೇಡವೇ ಎಂಬ ನಿರ್ಧಾರದಲ್ಲಿ ವೈಭವ್ ಪ್ರಮುಖ ಪಾತ್ರ ವಹಿಸಿದ್ದರು.
Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!
ಡಿಆರ್‌ಎಸ್ ವಿಚಾರದಲ್ಲಿ ಇಶಾನ್–ವೈಭವ್ ತಮಾಷೆ
ಪೂರ್ವ ವಲಯ ಮತ್ತು ದಕ್ಷಿಣ ವಲಯ ನಡುವಿನ ಫೈನಲ್ ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸರಾಗಿದ್ದಾರೆ. ವೈರಲ್ ಆದ ವಿಡಿಯೊವೊಂದರಲ್ಲಿ ವೈಭವ್, ಇಶಾನ್ ಕಿಶನ್ ಅವರನ್ನು ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳುವಂತೆ ಮನವೊಲಿಸುತ್ತಿರುವುದು ಕಂಡುಬಂದಿತ್ತು. ಅಂತಿಮವಾಗಿ ಆ ರಿವ್ಯೂ ಸರಿಯಾದ ನಿರ್ಧಾರವಾಗಿತ್ತು.
ಇದರ ಬಳಿಕ ಬಿಸಿಸಿಐ ಹಂಚಿಕೊಂಡ ಮತ್ತೊಂದು ವಿಡಿಯೊದಲ್ಲಿ ಇಶಾನ್ ಕಿಶನ್ ಈ ವಿಚಾರವನ್ನು ತಮಾಷೆ ಮಾಡಿದ್ದಾರೆ. ತಾವು ಮೊದಲೇ ರಿವ್ಯೂ ತೆಗೆದುಕೊಳ್ಳಲು ನಿರ್ಧರಿಸಿದ್ದರೂ, ವೈಭವ್ ಅದರ ಕ್ರೆಡಿಟ್ ಅನ್ನು ತಾವು ಪಡೆದುಕೊಂಡಂತೆ ಹೇಳಿಕೊಂಡರು ಎಂದು ಇಶಾನ್ ಹಾಸ್ಯಮಯವಾಗಿ ಹೇಳಿದ್ದಾರೆ. ಇಶಾನ್ ಮತ್ತು ವೈಭವ್ ನಡುವಿನ ಈ ಮೋಜಿನ ಮಾತುಕತೆ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಕೌಂಟಿ ಪಂದ್ಯದಲ್ಲಿ 10 ವಿಕೆಟ್ ಕಿತ್ತು ಗೌತಮ್ ಗಂಭೀರ್‌ಗೆ ಬಲವಾದ ಸಂದೇಶ ರವಾನಿಸಿದ ಕುಲ್ದೀಪ್ ಯಾದವ್!
"ಎಲ್ಲಾ ಕಡೆಯಲ್ಲಿಯೂ ಯಶಸ್ವಿ ಡಿಆರ್‌ಎಸ್ ರಿವ್ಯೂನ ಶ್ರೇಯವನ್ನು ವೈಭವ್ ಸೂರ್ಯವಂಶಿ ಪಡೆದಿದ್ದಾರೆ. ಪಂದ್ಯದ ಸಂದರ್ಭದಲ್ಲಿ ನಾನೇ ರಿವ್ಯೂವ್ ತೆಗೆದುಕೊಳ್ಳಬೇಕೆಂದು ಮುದಾಗಿದ್ದರೂ, ಈ ವೇಳೆ ವೈಭವ್ ಆತ್ಮ ವಿಶ್ವಾಸದೊಂದಿಗೆ ನನ್ನ ಬಳಿ ಬಂದು ಡಿಆರ್‌ಎಸ್ ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಇದಕ್ಕೆ ತಕ್ಕಂತೆ ಇಂಟರ್‌ನೆಟ್ ಕೋಡ ವರ್ತಿಸುತ್ತಿತ್ತು," ಎಂದು ಬಿಸಿಸಿಐ ಹಂಚಿಕೊಂಡಿರುವ ವಿಡಿಯೊದಲ್ಲಿ ಇಶಾನ್ ಕಿಶನ್ ಹೇಳಿದ್ದಾರೆ.