ಲಂಡನ್: ಫುಟ್ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo), 'ಬಿಲಿಯನೇರ್' ಎಂದು ಹೆಸರಿಸಲ್ಪಟ್ಟ ವಿಶ್ವದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೌದಿ ಪ್ರೊ ಲೀಗ್‌ನಲ್ಲಿ ಅಲ್-ನಾಸರ್ ಜತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರೊನಾಲ್ಡೊ ಈ ಮೈಲಿಗಲ್ಲು ತಲುಪಿದರು. ರೊನಾಲ್ಡೊ ನಿವ್ವಳ ಸಂಪತ್ತು 1.4 ಬಿಲಿಯ ಡಾಲರ್ (ಸುಮಾರು 12,400 ಕೋಟಿ ರೂಪಾಯಿ) ಎಂದು ಅದು ಅಂದಾಜು ಮಾಡಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಗೆ ರೊನಾಲ್ಡೊ ಸೇರ್ಪಡೆಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಅವರು ಫುಟ್ಬಾಲ್ ನ ಅತ್ಯಧಿಕ ಸಂಪಾದನೆಯ ಆಟಗಾರನೆಂಬ ತನ್ನ ಹೆಗ್ಗಳಿಕೆಯನ್ನು ಬಲಪಡಿಸಿಕೊಂಡಿದ್ದಾರೆ ಮತ್ತು ತನ್ನ ದೀರ್ಘಕಾಲೀನ ಎದುರಾಳಿ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ.
ದಾಖಲೆ ಮುರಿಯುವ ವೇತನಗಳು, ಜಾಹೀರಾತುಗಳಿಂದ ಬರುವ ಆದಾಯ ಮತ್ತು ಯಶಸ್ವಿ ಸ್ವ ಉದ್ಯಮಗಳಿಂದಾಗಿ ರೊನಾಲ್ಡೊರ ಸಂಪತ್ತಿನಲ್ಲಿ ಏರಿಕೆಯಾಗಿದೆ. ಯುರೋಪ್‌ನಲ್ಲಿ ಅವರು ಆಡುತ್ತಿದ್ದಾಗ ಪಡೆಯುತ್ತಿದ್ದ ವೇತನಗಳು ಕ್ರೀಡಾ ಬದುಕಿನ ಹೆಚ್ಚಿನ ಅವಧಿಯಲ್ಲಿ ಮೆಸ್ಸಿಯ ವೇತನಗಳನ್ನು ಸರಿಗಟ್ಟುತ್ತಿದ್ದವು. ಆದರೆ 2023ರಲ್ಲಿ ಸೌದಿ ಅರೇಬಿಯದ ಕ್ಲಬ್ ಅಲ್-ನಸ್ರ್ ಸೇರಿದ ಬಳಿಕ ಅವರ ವೇತನ ಅಗಾಧ ಪ್ರಮಾಣದಲ್ಲಿ ಏರಿಕೆಯಾಯಿತು.
ಇದನ್ನೂ ಓದಿ Cristiano Ronaldo: ಗೋವಾ ವಿರುದ್ಧ ಭಾರತದಲ್ಲಿ ಫುಟ್ಬಾಲ್ ಆಡಲಿದ್ದಾರೆ ರೊನಾಲ್ಡೊ
ರೊನಾಲ್ಡೊ, ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಎಫ್‌ಸಿ ಗೋವಾ ವಿರುದ್ಧದ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2 ಪಂದ್ಯವನ್ನು ಆಡುವ ನಿರೀಕ್ಷೆಯಿದೆ. ಅಲ್ ನಾಸರ್ ತಮ್ಮ ಎಸಿಎಲ್ 2 ಅಭಿಯಾನಕ್ಕಾಗಿ ರೊನಾಲ್ಡೊ ಅವರನ್ನು ನೋಂದಾಯಿಸಿದ್ದಾರೆ.