ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೆನ್ನೈಗೆ ಮತ್ತೆ ತಲೆನೋವು, ಐಪಿಎಲ್‌ನ ಮೊದಲಾರ್ಧದ ಪಂದ್ಯಕ್ಕೆ ಸ್ಪೆನ್ಸರ್ ಜಾನ್ಸನ್ ಅಲಭ್ಯ

Spencer Johnson: ಜಾನ್ಸನ್ ಅನುಪಸ್ಥಿತಿಯಲ್ಲಿ, ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಮತ್ತು ಝಾಕ್ ಫೌಲ್ಕ್ಸ್ ಐಪಿಎಲ್ 2026 ರಲ್ಲಿ ಸಿಎಸ್‌ಕೆ ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಜೇಮೀ ಓವರ್ಟನ್ ಜೊತೆಗೆ ಖಲೀಲ್ ಅಹ್ಮದ್, ಮುಖೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಮತ್ತು ಗುರ್ಜಪ್ನೀತ್ ಸಿಂಗ್ ಸೇರಿದಂತೆ ಇತರರನ್ನು ಬೆಂಬಲಿಸಲಿದ್ದಾರೆ.

Spencer Johnson

ಚೆನ್ನೈ, ಮಾ.25: ಗಾಯಗೊಂಡು ಐಪಿಎಲ್‌ 2026(IPL 2026)ರಿಂದ ಹೊರಬಿದ್ದ ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಅವರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡಿರುವ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್(Spencer Johnson), ಐಪಿಎಲ್‌ನ ಮೊದಲಾರ್ಧವನ್ನು ಕಳೆದುಕೊಳ್ಳಲಿದ್ದಾರೆ. ಈ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿದೆ. ವೇಗಿ ಏಪ್ರಿಲ್ ಮೂರನೇ ವಾರದಲ್ಲಿ ತಂಡವನ್ನು ಸೇರಲಿದ್ದಾರೆ ಎಂದು ದೃಢಪಡಿಸಿದೆ.

ಬುಧವಾರ ಟ್ವೀಟ್‌ ಮಾಡಿರುವ ಚೆನ್ನೈ ಫ್ರಾಂಚೈಸಿ 'ನಾಥನ್ ಎಲಿಸ್ ಬದಲಿಗೆ ಸ್ಪೆನ್ಸರ್ ಜಾನ್ಸನ್. ಅವರು ಏಪ್ರಿಲ್ 21 ಮತ್ತು 23 ರ ನಡುವೆ ತಂಡವನ್ನು ಸೇರಲಿದ್ದಾರೆ" ಎಂದು ಟ್ವೀಟ್ ಮಾಡಿದೆ. ಅವರು ಡೆತ್-ಬೌಲಿಂಗ್ ಸಮಸ್ಯೆಗಳನ್ನು ಪರಿಹರಿಸುತ್ತಾರೆಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಕಾಯಬೇಕಾಗಿದೆ. ಈ ಮಧ್ಯೆ, ದಕ್ಷಿಣ ಆಸ್ಟ್ರೇಲಿಯಾದ ಮುಖ್ಯ ಕೋಚ್ ರಯಾನ್ ಹ್ಯಾರಿಸ್ ಅವರು ಜಾನ್ಸನ್ ಫಿಟ್‌ನೆಸ್‌ ಬಗ್ಗೆ ಮಹತ್ವದ ಅಪ್ಡೇಟ್‌ ನೀಡಿದ್ದು, ಜಾನ್ಸೆನ್‌ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಆದರೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲು ಇನ್ನೂ ಕೆಲ ದಿನ ಬೇಕಾಗಿದೆ ಎಂದು ಹೇಳಿದ್ದಾರೆ.



"ಜಾನ್ಸನ್‌ಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬಹುದು ಎಂದು ನಾನು ಭಾವಿಸುತ್ತೇನೆ. ಅಲ್ಲಿ ಏನಾಗುತ್ತದೆ ಎಂದು ನೋಡಲು ನಾವು ಇನ್ನೂ ಕಾಯುತ್ತಿದ್ದೇವೆ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಮೊದಲು ಅವರು ಸ್ವಲ್ಪ ಬೌಲಿಂಗ್ ಮಾಡಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ಅವರಿಗೆ ಕೆಲವು ದುರದೃಷ್ಟಗಳು ಎದುರಾಗಿವೆ" ಎಂದು ಹ್ಯಾರಿಸ್ ಹೇಳಿದರು.

ಜಾನ್ಸನ್ ಅನುಪಸ್ಥಿತಿಯಲ್ಲಿ, ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಮತ್ತು ಝಾಕ್ ಫೌಲ್ಕ್ಸ್ ಐಪಿಎಲ್ 2026 ರಲ್ಲಿ ಸಿಎಸ್‌ಕೆ ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಜೇಮೀ ಓವರ್ಟನ್ ಜೊತೆಗೆ ಖಲೀಲ್ ಅಹ್ಮದ್, ಮುಖೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಮತ್ತು ಗುರ್ಜಪ್ನೀತ್ ಸಿಂಗ್ ಸೇರಿದಂತೆ ಇತರರನ್ನು ಬೆಂಬಲಿಸಲಿದ್ದಾರೆ.

IPL 2026: ಪಿಎಸ್‌ಎಲ್‌ ತೊರೆದು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರ್ಪಡೆಯಾದ ಸ್ಪೆನ್ಸರ್‌ ಜಾನ್ಸನ್‌!

ಸಿಎಸ್‌ಕೆ ತಂಡವು ತನ್ನ ಋತುವನ್ನು ಗುವಾಹಟಿಯಲ್ಲಿ ಮಾರ್ಚ್ 30 ರಂದು ಬರ್ಸಪರ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಆ ಪಂದ್ಯದ ನಂತರ, ಅವರು ಏಪ್ರಿಲ್ 3 ರಂದು ಆತಿಥೇಯ ಪಂಜಾಬ್ ಕಿಂಗ್ಸ್‌, ನಂತರ ಏಪ್ರಿಲ್ 5 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ. ಏಪ್ರಿಲ್ 11 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.