ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟ್ರಿಪಲ್ ಜಂಪ್‌ನಲ್ಲಿ ಅವಳಿ ಪದಕ ಗೆದ್ದ ಭಾರತ; ಬಾಕ್ಸಿಂಗ್‌ನಲ್ಲಿ ಜೈಸ್ಮಿನ್‌ಗೆ ಚಿನ್ನ

ಮಹಿಳೆಯರ 57 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ 5-0 ಸರ್ವಾನುಮತದ ನಿರ್ಣಯದಿಂದ ಐರ್ಲೆಂಡ್‌ನ ಮೈಕೆಲಾ ವಾಲ್ಷ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. ಪ್ರೀತಿ ಪವಾರ್ ಅವರ ಹಿಂದಿನ ವಿಜಯದ ನಂತರ, ಭಾರತವು ಮಹಿಳಾ ಬಾಕ್ಸಿಂಗ್‌ನಲ್ಲಿ ಡಬಲ್ ಚಿನ್ನದ ಪದಕ ಪೂರ್ಣಗೊಳಿಸಿತು.

CHITRAVEL-SELVA

ಗ್ಲಾಸ್ಗೋ, ಆ.1: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶನಿವಾರವೂ ಭಾರತ ಪದಕ ಬೇಟೆ ಮುಂದುವರಿದಿದೆ. ಬಾಕ್ಸಿಂಗ್‌ನಲ್ಲಿ ಪ್ರೀತಿ ಪವಾರ್ ಚಿನ್ನದ ಪದಕ್ಕ ಗೆದ್ದ ಕೆಲವೇ ನಿಮಿಷಗಳ ಅಂತರದಲ್ಲಿ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ 16.58 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ 16.52 ಮೀಟರ್ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದರು. ಜಮೈಕಾದ ಜೋರ್ಡಾನ್ ಸ್ಕಾಟ್ ಚಿನ್ನ ಗೆದ್ದರು.

ಆರಂಭಿಕ ಸುತ್ತಿನಲ್ಲಿ ಪ್ರವೀಣ್ ಚಿತ್ರವೇಲ್ 16.58 ಮೀಟರ್ ದೂರ ಜಿಗಿದು ಮೊದಲ ಸ್ಥಾನ ಪಡೆದರು. ಜೋರ್ಡಾನ್ ಸ್ಕಾಟ್ (16.52 ಮೀ) ಮತ್ತು ನ್ಯೂಜಿಲೆಂಡ್‌ನ ಎಥಾನ್ ಒಲಿವಿಯರ್ (16.50 ಮೀ) ಗಿಂತ ಕ್ರಮವಾಗಿ 2 ಮತ್ತು ಮೂರನೇ ಸ್ಥಾನಿಯಾದರು. ಸೆಲ್ವಾ ಪ್ರಭು ತಿರುಮಾರನ್ ನಾಲ್ಕನೇ ಸ್ಥಾನದಲ್ಲಿದ್ದರು.

ಫೈನಲ್‌ ಸುತ್ತಿನಲ್ಲಿ ಪ್ರವೀಣ್ ಚಿತ್ರವೇಲ್ ಲಯ ಕಳೆದುಕೊಂಡರು. ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಟ್ಟರು. ನಾಲ್ಕನೇ ಸ್ಥಾನಿಯಾಗಿದ್ದ ಸೆಲ್ವಾ ಪ್ರಭು ತಿರುಮಾರನ್ ಉತ್ತಮ ಕಮ್‌ಬ್ಯಾಕ್‌ ಮಾಡಿ ಕಂಚಿನ ಪದಕ ತನ್ನದಾಗಿಸಿಕೊಂಡರು.

ಚಿನ್ನ ಗೆದ್ದ ಜೈಸ್ಮಿನ್ ಲಂಬೋರಿಯಾ

ಮಹಿಳೆಯರ 57 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ 5-0 ಸರ್ವಾನುಮತದ ನಿರ್ಣಯದಿಂದ ಐರ್ಲೆಂಡ್‌ನ ಮೈಕೆಲಾ ವಾಲ್ಷ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. ಪ್ರೀತಿ ಪವಾರ್ ಅವರ ಹಿಂದಿನ ವಿಜಯದ ನಂತರ, ಭಾರತವು ಮಹಿಳಾ ಬಾಕ್ಸಿಂಗ್‌ನಲ್ಲಿ ಡಬಲ್ ಚಿನ್ನದ ಪದಕ ಪೂರ್ಣಗೊಳಿಸಿತು.

ಕಾಮನ್ವೆಲ್ತ್ ಬಾಕ್ಸಿಂಗ್‌; ಪ್ರೀತಿ ಪವಾರ್ ಚಿನ್ನದ ಪಂಚ್‌

ಮಹಿಳೆಯರ 10,000 ಮೀಟರ್ ಓಟದಲ್ಲಿ ಭಾರತ ಪದಕ ವಂಚಿತವಾಯಿತು. ಪ್ರಿಯಾಂಕಾ 45:53.93 ಸಮಯದಲ್ಲಿ ನಾಲ್ಕನೇ ಸ್ಥಾನ ಪಡೆದರು. ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿತು. ಮೂರು ಪದಕವನ್ನು ತನ್ನದಾಗಿಸಿಕೊಂಡಿತು. ಜೆಮಿಮಾ ಮಾಂಟಾಗ್ 42:13.40 ರಲ್ಲಿ ಚಿನ್ನ ಗೆದ್ದರು, ನಂತರ ಎಲಿಜಬೆತ್ ಮೆಕ್‌ಮಿಲೆನ್ (42:39.87) ಮತ್ತು ರೆಬೆಕ್ಕಾ ಹೆಂಡರ್ಸನ್ (43:27.46) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.