ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

DC vs PBKS: ಅಜೇಯ ಪಂಜಾಬ್‌ ಕಿಂಗ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕೀತೇ ಡೆಲ್ಲಿ ಕ್ಯಾಪಿಟಲ್ಸ್‌?

IPL 2026: ಪಂಜಾಬ್ ಕಿಂಗ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಐದು ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಅಜೇಯ ತಂಡವಾಗಿ ಉಳಿದಿದೆ. ಅವರು ತಮ್ಮ ಗೆಲುವಿನ ಓಟವನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದಾರೆ. ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. 200 ಪ್ಲಸ್‌ ಮೊತ್ತವನ್ನೂ ಬೆನ್ನಟ್ಟಿ ಗೆಲ್ಲುವ ಸಾಮರ್ಥ್ಯ ತಂಡಕ್ಕಿದೆ.

axar patel and shreyas iyer

ನವದೆಹಲಿ, ಎ.24: ಏಪ್ರಿಲ್ 25 ರಂದು ದೆಹಲಿಯ ಅರುಣ್ ಜೇಟ್ಲಿ(Arun Jaitley Stadium) ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026ರ 35 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC vs PBKS) ತಂಡ ಅಜೇಯ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಎದುರಿಸಲಿದೆ.

ಆರು ಪಂದ್ಯಗಳಿಂದ ಮೂರು ಗೆಲುವುಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿದ ಅವರು ಬಲವಾಗಿ ಪುಟಿದೇಳಲು ಉತ್ಸುಕರಾಗಿದ್ದಾರೆ. ಇದುವರೆಗೆ ತಮ್ಮ ಎರಡೂ ತವರು ಪಂದ್ಯಗಳನ್ನು ಗೆದ್ದಿರುವ ಡಿಸಿ, ತಮ್ಮ ತವರು ಮೈದಾನದಲ್ಲಿ ಮತ್ತೊಂದು ದಾಖಲೆಯನ್ನು ಕಾಯ್ದುಕೊಳ್ಳಲು ಎದುರು ನೋಡುತ್ತಿದೆ. ಆದರೆ ಎದುರಾಳಿ ಪಂಜಾಬ್‌ ಎನ್ನುವುದನ್ನು ಮರೆಯುವಂತಿಲ್ಲ.

ಪಂಜಾಬ್ ಕಿಂಗ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಐದು ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಅಜೇಯ ತಂಡವಾಗಿ ಉಳಿದಿದೆ. ಅವರು ತಮ್ಮ ಗೆಲುವಿನ ಓಟವನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದಾರೆ. ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. 200 ಪ್ಲಸ್‌ ಮೊತ್ತವನ್ನೂ ಬೆನ್ನಟ್ಟಿ ಗೆಲ್ಲುವ ಸಾಮರ್ಥ್ಯ ತಂಡಕ್ಕಿದೆ.

ಪಿಚ್‌ ರಿಪೋರ್ಟ್‌

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಬ್ಯಾಟಿಂಗ್‌ ಪಿಚ್‌ ಆಗಿದ್ದರೂ, ಪಂದ್ಯದ ಮೊದಲಾರ್ಧದಲ್ಲಿ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಆದಾಗ್ಯೂ, ಇಲ್ಲಿನ ಪಿಚ್ ಪಂದ್ಯ ಮುಂದುವರೆದಂತೆ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗುತ್ತದೆ. ಹಗಲು ಪಂದ್ಯವಾದ ಕಾರಣ ಯಾವುದೇ ಇಬ್ಬನಿ ಸಮಸ್ಯೆ ಕಾಣಸಿಗದು. ಪಂದ್ಯಕ್ಕೆ ಯಾವುದೇ ಮಳೆ ಭೀತಿಯೂ ಇಲ್ಲದ ಕಾರಣ ಸಂಪೂರ್ಣವಾಗಿ ಪಂದ್ಯ ಸಾಗಲಿದೆ.

ಮುಖಾಮುಖಿ

ಡೆಲ್ಲಿ ಮತ್ತು ಪಂಜಾಬ್‌ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 34 ಬಾರಿ ಮುಖಾಮುಖಿಯಾಗಿವೆ. ಉಭಯ ತಂಡಗಳು ತಲಾ 17 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದೆ. ಈ ಲೆಕ್ಕಾಚಾರ ನೋಡುವಾಗ ಪಂದ್ಯ ತೀವ್ರ ಪೈಪೋಟಿಯಿಂದ ನಿರೀಕ್ಷೆ ಮಾಡಬಹುದು.

RCB vs GT: ತವರಿನ ಕೊನೆಯ ಲೀಗ್‌ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಆರ್‌ಸಿಬಿ ಆಟಗಾರರು

ಸಂಭಾವ್ಯ ಉಭಯ ತಂಡಗಳು

ದೆಹಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿ.ಕೀ.), ನಿತೀಶ್ ರಾಣಾ, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್: ಅಶುತೋಷ್ ಶರ್ಮಾ.

ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್ (ವಿ.ಕೀ.), ಪ್ರಿಯಾಂಶ್ ಆರ್ಯ, ಮಿಚೆಲ್ ಓವನ್, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಇಂಪ್ಯಾಕ್ಟ್‌ ಆಟಗಾರ: ನೆಹಾಲ್ ವಧೇರಾ.

‌RCB vs GT: ಗುಜರಾತ್‌ ಟೈಟನ್ಸ್‌ ಎದುರು ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ! ಇದಕ್ಕೆ ಕಾರಣ ಇಲ್ಲಿದೆ

ಆಟಗಾರರು ನಿರ್ಮಿಸಬಹುದಾದ ದಾಖಲೆಗಳ ಪಟ್ಟಿ

ಕೆಎಲ್ ರಾಹುಲ್: ಐಪಿಎಲ್‌ನಲ್ಲಿ 5500 ರನ್‌ಗಳಿಗೆ 73 ರನ್‌ಗಳ ಅಗತ್ಯವಿದೆ.

ನಿತೀಶ್ ರಾಣಾ: ಐಪಿಎಲ್‌ನಲ್ಲಿ 3000 ರನ್‌ಗಳಿಗೆ 70 ರನ್‌ಗಳ ಅಗತ್ಯವಿದೆ

ಡೇವಿಡ್ ಮಿಲ್ಲರ್: ಟಿ20ಯಲ್ಲಿ 12000 ರನ್‌ಗಳಿಗೆ 14 ರನ್‌ಗಳ ಅಗತ್ಯವಿದೆ

ಅಕ್ಷರ್ ಪಟೇಲ್: ಐಪಿಎಲ್‌ನಲ್ಲಿ 2000 ರನ್‌ಗಳಿಗೆ 53 ರನ್‌ಗಳ ಅಗತ್ಯವಿದೆ

ಕುಲದೀಪ್ ಯಾದವ್: ಟಿ20ಯಲ್ಲಿ 250 ವಿಕೆಟ್‌ಗಳಿಗೆ 4 ವಿಕೆಟ್‌ಗಳ ಅಗತ್ಯವಿದೆ.

ಪ್ರಿಯಾಶ್ ಆರ್ಯ: 150 T20 ಬೌಂಡರಿಗಳಿಗೆ 2 ಬೌಂಡರಿಗಳು ಬೇಕಾಗಿದೆ.

ಪ್ರಿಯಾಶ್ ಆರ್ಯ: 100 T20 ಸಿಕ್ಸರ್‌ಗಳಿಗೆ 3 ಸಿಕ್ಸರ್‌ಗಳು ಅಗತ್ಯ.

ಪ್ರಭ್‌ಸಿಮ್ರಾನ್ ಸಿಂಗ್: 50 T20 ಕ್ಯಾಚ್‌ಗಳಿಗೆ 1 ಕ್ಯಾಚ್ ಬೇಕಾಗಿವೆ.

ಶ್ರೇಯಸ್ ಅಯ್ಯರ್: 4000 IPL ರನ್‌ಗಳಿಗೆ 61 ರನ್‌ಗಳು ಬೇಕಾಗಿವೆ.

ಮಾರ್ಕಸ್ ಸ್ಟೊಯಿನಿಸ್: PBKS ಪರ 500 ರನ್‌ಗಳಿಗೆ 30 ರನ್‌ಗಳು ಬೇಕಾಗಿವೆ.

ಶಶಾಂಕ್ ಸಿಂಗ್: 50 IPL ಸಿಕ್ಸರ್‌ಗಳಿಗೆ 4 ಸಿಕ್ಸರ್‌ಗಳು ಬೇಕಾಗಿವೆ.