ಡಾರ್ವಿನ್, ಆ.16: ಬರೋಬ್ಬರಿ 23 ವರ್ಷಗಳ ಬಳಿಕ ಆಸ್ಟ್ರೆಲಿಯಾ (Australia) ನೆಲದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಬಾಂಗ್ಲಾದೇಶ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ತವರಿನಲ್ಲೇ ಆಸೀಸ್‌ಗೆ ಸೋಲಿನ ಆಘಾತವಿಕ್ಕಿದೆ.
ಮರಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶನಿವಾರ 6 ವಿಕೆಟ್ಗೆ 351 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಬಾಂಗ್ಲಾ, ಭೋಜನ ವಿರಾಮದ ಬಳಿಕ 138 ಓವರ್ಗಳಲ್ಲಿ 426 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 228 ರನ್ ಮುನ್ನಡೆ ಸಾಧಿಸಿತು. ನಂತರ ದ್ವೀತಿಯ ಇನಿಂಗ್ಸ್ ಆರಂಭಿಸಿದ ಆಸೀಸ್ ದಿನದಂತ್ಯಕ್ಕೆ 53 ಓವರ್ಗಳಲ್ಲಿ 4 ವಿಕೆಟ್ಗೆ 161 ರನ್ ಗಳಿಸಿತ್ತು.
ಭಾನುವಾರ ನಾಲ್ಕನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ 284ರನ್‌ಗೆ ಆಲೌಟ್ ಆಯಿತು. 56 ರನ್ ಗೆಲುವಿನ ಗುರಿ ಪಡೆದ ಬಾಂಗ್ಲಾದೇಶ ಕೇವಲ ಒಂದು ವಿಕೆಟ್ ನಷ್ಟಕ್ಕೆ 57 ರನ್ ಬಾರಿಸಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಆಸ್ಟ್ರೇಲಿಯಾ ನೆಲದಲ್ಲಿ ಅತಿ ಕಟಿಮೆ ಪಂದ್ಯಗಳನ್ನಾಡಿ ಗೆಲುವು ಸಾಧಿಸಿದ ಏಷ್ಯಾದ ಮೊದಲ ತಂಡ ಎನಿಸಿತು. ಕೇವಲ 3 ಟೆಸ್ಟ್‌ಗಳಲ್ಲಿ. ಪಾಕಿಸ್ತಾನ (7) ಮತ್ತು ಭಾರತ (12) ಟೆಸ್ಟ್ ಬಳಿಕ ಗೆಲುವು ಸಾಧಿಸಿತ್ತು ಆದರೆ ಶ್ರೀಲಂಕಾ 15 ಪ್ರಯತ್ನಗಳ ನಂತರವೂ ಗೆಲ್ಲಲು ಸಾಧ್ಯವಾಗಿಲ್ಲ.
ರಾಹುಲ್ ಗಾಯದ ಬಗ್ಗೆ ಅಪ್ಡೇಟ್ ಕೊಟ್ಟ ಬ್ಯಾಟಿಂಗ್ ಕೋಚ್
2024 ರಲ್ಲಿ ರಾವಲ್ಪಿಂಡಿಯಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಗೆಲುವಿನ ನಂತರ, 9 ವಿಕೆಟ್‌ಗಳ ಗೆಲುವು ವಿಕೆಟ್‌ಗಳ ಅಂತರದ ಎರಡನೇ ಅತಿದೊಡ್ಡ ಟೆಸ್ಟ್ ಗೆಲುವಾಗಿದೆ. ಆಸ್ಟ್ರೇಲಿಯಾ 1995 ರ ನಂತರ 31 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತವನ್ನು ಹೊರತುಪಡಿಸಿ ಬೇರೆ ಏಷ್ಯನ್ ತಂಡದ ವಿರುದ್ಧ ತವರು ನೆಲದಲ್ಲಿ ಟೆಸ್ಟ್ ಸೋತಿತು.
2022 ರಲ್ಲಿ ಮೌಂಟ್ ಮೌಂಗನುಯಿಯಲ್ಲಿ ನಡೆದ ಪ್ರಸಿದ್ಧ ಗೆಲುವಿನ ನಂತರ ಸೆನಾ ದೇಶಗಳಲ್ಲಿ ಬಾಂಗ್ಲಾದೇಶದ ಎರಡನೇ ಟೆಸ್ಟ್ ಗೆಲುವು ಇದಾಗಿದೆ. ಇದು ಆಸ್ಟ್ರೇಲಿಯಾದಲ್ಲಿ ಬಾಂಗ್ಲಾದೇಶದ ಮೊದಲ ಟೆಸ್ಟ್ ಗೆಲುವು. 2017 ರ ಮಿರ್ಪುರ್ ಗೆಲುವಿನ ನಂತರ ಏಳು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇದು ಕೇವಲ ಎರಡನೇ ಗೆಲುವು.
ಮೂರನೇ ದಿನದಾಟದಲ್ಲಿ 43 ರನ್ ಗಳಿಸಿದ್ದ ಕ್ಯಾಮರಾನ್ ಗ್ರೀನ್ ಭಾನುವಾರ ಶತಕ ಬಾರಿಸಿ ಮಿಂಚಿದರು. ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿದ ಅವರು 104 ರನ್ ಗಳಿಸಿದರು. ಅಲೆಕ್ಸ್ ಕ್ಯಾರಿ 30 ರನ್ ಬಾರಿಸಿದರು. ಅಮೋಘ ಬೌಲಿಂಗ್ ನಡೆಸಿದ ಮೆಹಿದಿ ಹಸನ್ ಮಿರಾಜ್ 5 ವಿಕೆಟ್ ಗೊಂಚಲು ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕೆಡವಿದ್ದ ಹಸನ್ ಮಹಮೂದ್ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಿತ್ತು ಒಟ್ಟಾರೆ 9 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 426 ರನ್ ಕಲೆಹಾಕಿತ್ತು. ಆಸ್ಟ್ರೇಲಿಯಾ