ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಜಯ್ ಹಜಾರೆಯಲ್ಲಿ ಶತಕದ ಅಬ್ಬರ ವಿಸ್ತರಿಸಿದ ದೇವದತ್ತ ಪಡಿಕ್ಕಲ್

Devdutt Padikkal: ಕೆ.ಎಲ್‌ ರಾಹುಲ್‌ 35 ರನ್‌ ಬಾರಿಸಿದರು. ಐಪಿಎಲ್‌ನಲ್ಲಿ ಅನ್‌ಸೋಲ್ಡ್‌ ಆದ ಅಭಿನವ್‌ ಮನೋಹರ್‌, ಕೆಲ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅಜೇಯ 79 ಮತ್ತು ಶ್ರೇಯಸ್‌ ಗೋಪಾಲ್‌ 29 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ತ್ರಿಪುರ ಪರ ಅಭಿಜಿತ್ ಕೆ ಸರ್ಕಾರ್ 4 ವಿಕೆಟ್‌ ಕಿತ್ತು ಮಿಂಚಿದರು.

Devdutt Padikkal

ಅಹಮದಾಬಾದ್‌, ಜ.3: ಕರ್ನಾಟಕ ತಂಡದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್‌(Devdutt Padikkal) ಅವರು ಪ್ರಸಕ್ತ ನಡೆಯುತ್ತಿರುವ ವಿಜಯ್ ಹಜಾರೆ(Vijay Hazare) ಟ್ರೋಫಿಯಲ್ಲಿ ಶತಕಗಳನ್ನು ಬಾರಿಸುತ್ತಲೇ ಇದ್ದಾರೆ. ಇದುವರೆಗೆ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕವನ್ನು ಬಾರಿಸಿದ್ದಾರೆ. ಶನಿವಾರ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಅವರ ಈ ಬ್ಯಾಟಿಂಗ್‌ ಫಾರ್ಮ್‌ ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಏಕದಿನ ಸರಣಿಯಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಎ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ಮೊದಲ ಮೂರು ಓವರ್‌ಗಳಲ್ಲಿ ಮಾಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಅವರನ್ನು ಕಳೆದುಕೊಂಡಿತು.

6 ರನ್‌ ಗಳಿಸುವಷ್ಟರಲ್ಲಿ ತಂಡದ 2 ವಿಕೆಟ್‌ ಪತನಗೊಂಡಿತು. ನಾಯಕ ಅಗರ್ವಾಲ್‌(5) ಮತ್ತು ಕರುಣ್‌ ನಾಯರ್‌(0) ವಿಕೆಟ್‌ ಕಳೆದುಕೊಂರು. ಈ ವೇಳೆ ಟೊಂಕ ಕಟ್ಟ ನಿಂತ ಪಡಿಕ್ಕಲ್, ಶಾಂತ ರೀತಿಯಲ್ಲಿ ಬ್ಯಾಟಿಂಗ್‌ ನಡೆಸುವ ಮೂಲಕ ತನ್ನ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಮತ್ತೊಂದು ತುದಿಯಲ್ಲಿ ಸ್ಮರಣ್ ರವಿಚಂದ್ರನ್ ಉತ್ತಮ ಸಾಥ್‌ ನೀಡಿದರು.



ಉಭಯ ಆಟಗಾರರು ಸೇರಿಕೊಂಡು ಮೂರನೇ ವಿಕೆಟ್‌ಗೆ 136 ರನ್‌ಗಳ ಉಪಯುಕ್ತ ಜತೆಯಾಟ ನಡೆಸಿದರು. ಸ್ಮರಣ್ ರವಿಚಂದ್ರನ್ 60 ರನ್‌ ಬಾರಿಸಿ ಅರ್ಧಶತಕ ಬಾರಿಸಿದರೆ, ಪಡಿಕ್ಕಲ್‌ ಶತಕ ಬಾರಿಸಿ ಸಂಭ್ರಮಿಸಿದರು. ಒಟ್ಟು 3 ಸಿಕ್ಸರ್‌ ಮತ್ತು 8 ಬೌಂಡರಿ ನೆರವಿನಿಂದ 108 ರನ್‌ ಗಳಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅವರ 13 ನೇ ಶತಕ ಇದಾಗಿದೆ.

ವಿಜಯ್ ಹಜಾರೆಯಲ್ಲಿ ಅವರು ಜಾರ್ಖಂಡ್ ವಿರುದ್ಧ 118 ಎಸೆತಗಳಲ್ಲಿ 147 ರನ್ ಗಳಿಸುವ ಮೂಲಕ ಈ ಋತುವನ್ನು ಪ್ರಾರಂಭಿಸಿದರು. ನಂತರ ಕೇರಳ ವಿರುದ್ಧ 137 ಎಸೆತಗಳಲ್ಲಿ 124 ರನ್, ಪುದುಚೇರಿ ವಿರುದ್ಧ 113 ರನ್ ಗಳಿಸಿದ್ದರು. ತಮಿಳುನಾಡು ಎದುರಿನ ಪಂದ್ಯದಲ್ಲಿ ಮಾತ್ರ ವಿಫಲರಾಗಿದ್ದರು.

ಇದನ್ನೂ ಓದಿ Devdutt Padikkal: ಪಾಂಡಿಚೇರಿ ವಿರುದ್ಧವೂ ಸೆಂಚುರಿ ಬಾರಿಸಿದ ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್‌!

ಕೆ.ಎಲ್‌ ರಾಹುಲ್‌ 35 ರನ್‌ ಬಾರಿಸಿದರು. ಐಪಿಎಲ್‌ನಲ್ಲಿ ಅನ್‌ಸೋಲ್ಡ್‌ ಆದ ಅಭಿನವ್‌ ಮನೋಹರ್‌, ಕೆಲ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅಜೇಯ 79 ಮತ್ತು ಶ್ರೇಯಸ್‌ ಗೋಪಾಲ್‌ 29 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ತ್ರಿಪುರ ಪರ ಅಭಿಜಿತ್ ಕೆ ಸರ್ಕಾರ್ 4 ವಿಕೆಟ್‌ ಕಿತ್ತು ಮಿಂಚಿದರು.