ಮುಂಬೈ, ಸೆ.3: ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ವೈರಲ್ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಧೋನಿ ಹುಕ್ಕಾ ಸೇದುವ ಬಗ್ಗೆ ಉಲ್ಲೇಖಿಸಿರುವುದು ಕ್ಲಿಪ್‌ನ ದೊಡ್ಡ ಚರ್ಚೆಯ ವಿಷಯವಾಗಿದೆ. ಮಾತ್ರವಲ್ಲದೆ ಪಂತ್ ಕಂಠ ಪೂರ್ತಿ ಕುಡಿದು ನಶೆಯಲ್ಲಿ ತೇಲಾಡಿದಂತೆ ಕಂಡುಬಂದಿದೆ.
ಹೋಟೆಲ್ ಕೋಣೆಯಂತೆ ಕಾಣುವ ಸ್ಥಳದಲ್ಲಿ ಪಂತ್ ಸೋಫಾದಲ್ಲಿ ಹಿರಿಯ ವ್ಯಕ್ತಿಯೊಬ್ಬರ ಜತೆ ಕುಡಿದ ಮತ್ತಿನಲ್ಲಿ ಮಾತನಾಡುತ್ತಿರುವ ಕಾಣಬಹುದು. ಧೋನಿಯೂ ಇವರ ಜತೆ ಕಾಣಿಸಿಕೊಂಡಿದ್ದಾರೆ. ಫೋಟೊ ಕ್ಲಿಕಿಸಿಕೊಂಡ ಬಳಿಕ ಧೋನಿ "ನಾನು ಹೋಗಿ ಹುಕ್ಕಾ ಸೇದುತ್ತೇನೆ" ಎಂದು ಪಂತ್ ಬಳಿ ಹೇಳಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ವೈರಲ್ ಕ್ಲಿಪ್‌ನಲ್ಲಿ ಮೇಜಿನ ಮೇಲೆ ಬಿಯರ್ ಕ್ಯಾನ್‌ಗಳು ಮತ್ತು ಕಾಕ್‌ಟೇಲ್‌ಗಳನ್ನು ತೋರಿಸಲಾಗಿದೆ, ಇದು ಖಾಸಗಿ ಪಾರ್ಟಿಯಂತೆ ಕಾಣುತ್ತಿದೆ. ಸ್ಪಷ್ಟವಾದ ಹುಕ್ಕಾ ಉಲ್ಲೇಖವು ಆನ್‌ಲೈನ್‌ನಲ್ಲಿ ಚರ್ಚೆಯ ಪ್ರಮುಖ ಕೇಂದ್ರಬಿಂದುವಾಯಿತು.
ಕೆಲ ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೈಲಿ ಅವರು ಧೋನಿಗೆ ವಿಪರೀತವಾಗಿ ಹುಕ್ಕಾ ಸೇದುವ ಅಭ್ಯಾಸವಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಾದ ಬಳಿಕ ಧೋನಿ ಹುಕ್ಕಾ ಸೇದುವ ವಿಡಿಯೊ ವೈರಲ್ ಆಗಿತು.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಪಂತ್ ಮತ್ತು ಧೋನಿ ರಾಂಚಿಯಲ್ಲಿ ಒಟ್ಟಿಗೆ ಸಮಯ ಕಳೆದ ನಂತರ ಈ ವೈರಲ್ ವಿಡಿಯೋ ಬಂದಿದೆ. ಪ್ರವಾಸಕ್ಕೆ ತಯಾರಿ ನಡೆಸುವಾಗ ಪಂತ್ ಅಕಾಡೆಮಿಯಲ್ಲಿ ತರಬೇತಿ ಪಡೆದರು, ಅಭ್ಯಾಸದ ನಂತರ ಧೋನಿ ಅವರನ್ನು ಮನೆಗೆ ಕರೆದುಕೊಂಡು ಹೋಗುವ ವಿಡಿಯೊ ಕೂಡ ವೈರಲ್ ಆಗಿತ್ತು.
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಕಿರಿಯ ವಿಕೆಟ್ ಕೀಪರ್-ಬ್ಯಾಟರ್ ಪಂತ್ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಾಗಿನಿಂದ ಧೋನಿ ಪಂತ್‌ಗೆ ಹತ್ತಿರವಾಗಿದ್ದಾರೆ.
ಏಷ್ಯಾಕಪ್‌ನಲ್ಲಿ 7 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಚಾಮರಿ ಅಟಪಟ್ಟು
2022ರ ಡಿಸೆಂಬರ್ 30ರಂದು ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಪಂತ್ ದುಬೈಯಲ್ಲಿ ಧೋನಿ ಜತೆ ಕ್ರಿಸ್ಮಸ್ ಪಾರ್ಟಿಯಲ್ಲಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತನ್ನ ಸ್ಥಾನಕ್ಕಾಗಿ ಶ್ರಮಿಸುತ್ತಿರುವುದರಿಂದ ಪಂತ್ ಅವರ ಮುಂದಿನ ರೆಡ್-ಬಾಲ್ ನಿಯೋಜನೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.