ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fans slam Virat Kohli: ಯುವ ಆಟಗಾರನಿಗೆ ನಿಂದನೆ; ಕೊಹ್ಲಿ ವಿರುದ್ಧ ಭಾರೀ ಆಕ್ರೋಶ

ಯುವ ಆಟಗಾರರಿಗೆ ಸ್ಫೂರ್ತಿಯಾಗಬೇಕಿರುವ ನೀವು ಈ ರೀತಿಯ ವರ್ತನೆ ತೋರುವುದು ನಿಮಗೆ ಶೋಭೆಯಲ್ಲ ಎಂದು ನೆಟ್ಟಿಗರೊಬ್ಬರು ಕೊಹ್ಲಿಗೆ ಜಾಡಿಸಿದ್ದಾರೆ. ಮತ್ತೊಬ್ಬ ಅಭಿಮಾನಿ 'ಆಟದ ದಂತಕಥೆ'ಯಿಂದ ಇದು ಅತ್ಯುತ್ತಮ ವರ್ತನೆ ಅಲ್ಲ ಎಂದು ಕೊಹ್ಲಿಯನ್ನು ಟೀಕಿಸಿದ್ದಾರೆ.

ಮುಲ್ಲಾನ್‌ಪುರ್‌ (ಚಂಡೀಗಢ): ಅಪಾರ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡಿರುವ ವಿರಾಟ್ ಕೊಹ್ಲಿ (Virat Kohli), ಮೈದಾನದಲ್ಲಿ ಕೆಲವೊಮ್ಮೆ ತಮ್ಮ ನಡೆಯಿಂದ ಸುಖಾಸುಮ್ಮನೆ ವಿವಾದಕ್ಕೂ ಕಾರಣವಾಗುತ್ತಾರೆ. ಗುರುವಾರ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್‌ ಕಿಂಗ್ಸ್‌(RCB vs PBKS) ವಿರುದ್ಧದ ಮೊದಲ ಕ್ವಾಲಿಫೈಯರ್‌(IPL Qualifier 1) ಪಂದ್ಯದಲ್ಲಿ ಕೊಹ್ಲಿ ಪಂಜಾಬ್‌ ತಂಡದ ಯುವ ಆಟಗಾರ ಮುಶೀರ್ ಖಾನ್‌ಗೆ ಅಸಭ್ಯವಾಗಿ ನಿಂದಿಸಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕೊಹ್ಲಿಯ ಈ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಸತತವಾಗಿ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಪಂಜಾಬ್‌ ಮುಶೀರ್ ಅವರನ್ನು ಅಚ್ಚರಿ ಎಂಬಂತೆ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿಸಿತು. ಅದರಂತೆ ಬ್ಯಾಟಿಂಗ್‌ಗೆ ಬಂದ ಮುಶೀರ್, ಬ್ಯಾಟಿಂಗ್‌ ನಡೆಸಲು ಮುಂದಾದ ವೇಳೆ ಕೊಹ್ಲಿ "ವಾಟರ್ ಬಾಯ್" ಎಂದು ಕರೆದಿದ್ದಾರೆ. "ಯೇ ಪಾನಿ ಪಿಲಾತಾ ಹೈ" ("ಈ ವ್ಯಕ್ತಿ ಪಾನೀಯಗಳನ್ನು ಒಯ್ಯುತ್ತಾನೆ") ಎಂದು ಕೊಹ್ಲಿ ಹೇಳಿದ್ದಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.



ಯುವ ಆಟಗಾರರಿಗೆ ಸ್ಫೂರ್ತಿಯಾಗಬೇಕಿರುವ ನೀವು ಈ ರೀತಿಯ ವರ್ತನೆ ತೋರುವುದು ನಿಮಗೆ ಶೋಭೆಯಲ್ಲ ಎಂದು ನೆಟ್ಟಿಗರೊಬ್ಬರು ಕೊಹ್ಲಿಗೆ ಜಾಡಿಸಿದ್ದಾರೆ. ಮತ್ತೊಬ್ಬ ಅಭಿಮಾನಿ 'ಆಟದ ದಂತಕಥೆ'ಯಿಂದ ಇದು ಅತ್ಯುತ್ತಮ ವರ್ತನೆ ಅಲ್ಲ ಎಂದು ಕೊಹ್ಲಿಯನ್ನು ಟೀಕಿಸಿದ್ದಾರೆ.

ಪಂದ್ಯದಲ್ಲಿ ಕೊಹ್ಲಿ 12 ಎಸೆತಗಳಿಂದ 12 ರನ್‌ ಬಾರಿಸಿದ್ದರು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಕಿಂಗ್ಸ್‌ ಶೋಚನೀಯ ಬ್ಯಾಟಿಂಗ್‌ ಪ್ರದರ್ಶನದ ಮೂಲಕ 14.1 ಓವರ್‌ನಲ್ಲಿ 101 ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 106 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.