ನವದೆಹಲಿ, ಎ.8: ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನಲ್ಲಿ ಗುಜರಾತ್ ಟೈಟಾನ್ಸ್(DC vs GT) ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್(Sanjay Bangar) ಪ್ರಶ್ನೆಯೊಂದನ್ನು ಕೇಳಿದ್ದು ಸತತ ಎರಡು ಅರ್ಧಶತಕ ಬಾರಿಸಿದ ಸಮೀರ್ ರಿಝ್ವಿಯನ್ನು ಇಂಪ್ಯಾಕ್ಟ್ ಆಟಗಾರನಾಗಿ ಬಳಸುತ್ತಿರುದು ಏಕೆ ಎಂದಿದ್ದಾರೆ.
ಈ ಋತುವಿನಲ್ಲಿ ಸತತ ಎರಡು ಅರ್ಧಶತಕಗಳನ್ನು ಬಾರಿಸಿರುವ ರಿಜ್ವಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲಾಗಿದೆ. ಆದಾಗ್ಯೂ, ಅಕ್ಷರ್ ಪಟೇಲ್ ನೇತೃತ್ವದ ತಂಡದಲ್ಲಿ ಇನ್ನೂ ಉತ್ತಮ ಆರಂಭವನ್ನು ಪಡೆಯದ ನಿತೀಶ್ ರಾಣಾ ಅವರನ್ನು ಹೊರಗಿಡುವ ಮೂಲಕ ಕ್ಯಾಪಿಟಲ್ಸ್ ರಿಝ್ವಿಯನ್ನು ಆಡುವ XI ಗೆ ಸೇರಿಸಿಕೊಳ್ಳುವ ಬಗ್ಗೆ ಯೋಚಿಸಬಹುದು ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
"ರಿಝ್ವಿ ಬ್ಯಾಟಿಂಗ್ ಬಗ್ಗೆ ಅತ್ಯುತ್ತಮವಾದ ಅಂಶವೆಂದರೆ ಅವರು ಆಟ ಆರಂಭಿಸಲು ಆತುರಪಡುವುದಿಲ್ಲ. ಟಿ20 ಸ್ವರೂಪದಲ್ಲಿಯೂ ಸಹ, ನೀವು ಭಾವಿಸುವುದಕ್ಕಿಂತ ಹೆಚ್ಚಿನ ಸಮಯವಿದೆ ಎಂದು ಅವರು ತೋರಿಸಿದ್ದಾರೆ. ಅವರು ಆಡಿದ ಎರಡೂ ಪಂದ್ಯಗಳಲ್ಲಿ, ಅವರು ಮೊದಲ 10 ಎಸೆತಗಳಲ್ಲಿ ಸಮಯ ತೆಗೆದುಕೊಂಡಿದ್ದಾರೆ. ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಆಡಿಸಬಾರದು" ಎಂದು ಸಂಜಯ್ ಬಂಗಾರ್ ಜಿಯೋ ಸಂದರ್ಶನದಲ್ಲಿ ಹೇಳಿದರು. ಸ್ಪಿನ್ನರ್‌ಗಳತ್ತ ದಾಳಿಯನ್ನು ಕೊಂಡೊಯ್ಯುವ ರಿಜ್ವಿಯ ಸಾಮರ್ಥ್ಯವನ್ನು ಬಂಗಾರ್ ಶ್ಲಾಘಿಸಿದರು.
Auqib Nabi: ಜಮ್ಮು-ಕಾಶ್ಮೀರದ ಘಾತಕ ವೇಗಿ ಔಕಿಬ್ ನಬಿ ಐಪಿಎಲ್ ಪದಾರ್ಪಣೆ ಯಾವಾಗ?
"ಡೆಲ್ಲಿ ತಂಡ ನಿಜಕ್ಕೂ ಉತ್ತರಿಸಬೇಕಾದ ಪ್ರಶ್ನೆ. ರಿಝ್ವಿಯನ್ನು ಕನಿಷ್ಠ ಆಡುವ XI ನಲ್ಲಿ ಸೇರಿಸಿಕೊಳ್ಳುವುದನ್ನು ಪರಿಗಣಿಸಿ. ಅವರು ಪ್ರಾರಂಭಿಸುವ ರೀತಿ, ಆ ನೇರ ಬೌಂಡರಿಗಳು, ಸ್ಪಿನ್ ವಿರುದ್ಧ ಗುರಿಯಿಡುವ ರೀತಿ, ಆಧುನಿಕ ಯುಗದಲ್ಲಿ ಈ ರೀತಿಯ ಬ್ಯಾಟರ್‌ಗೆ ಹೆಚ್ಚಿನ ಅವಕಾಶ ನೀಡಿ ಬೆಳೆಸಿ" ಎಂದು ಹೇಳಿದರು.
ಪಂದ್ಯಕ್ಕೆ ಮಳೆ ಭೀತಿ!
ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನುಡುವಣ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹವಾವಾನ ಇಲಾಖೆ ಈಗಾಗಲೇ ದೆಹಲಿಯಲ್ಲಿ ಆರೆಂಜ್ ಅಲರ್ಟ್ ನೀಡಿದೆ. ಸೋಮವಾರ ಕೋಲ್ಕತ್ತಾದಲ್ಲಿ ನಡೆದ ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯ ರದ್ದಾಗಿತ್ತು. ಮಂಗಳವಾರದ ರಾಜಸ್ಥಾನ್ ಮತ್ತು ಮುಂಬೈ ನಡುವಿನ ಪಂದ್ಯ ಮಳೆಯಿಂದ 11 ಓವರ್‌ಗಳಿಗೆ ಇಳಿಸಬೇಕಾಯಿತು.