ಮುಂಬಯಿ: ಕೊಲಂಬೊದಲ್ಲಿ ನಡೆದಿದ್ದ ಐಸಿಸಿ ಮಹಿಳಾ ವಿಶ್ವಕಪ್‌ನ(Women’s ODI World Cup 2025) ಬಹುತೇಕ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಭಾರತದಲ್ಲಿನ ಪಂದ್ಯಕ್ಕೂ ಮಳೆ ಕಾಟ ಶುರುವಾಗಿದೆ. ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಕ್ಕೂ ಮಳೆಯ ಭೀತಿ ತೀವ್ರವಾಗಿ ಕಾಡಲಾರಂಭಿಸಿದೆ. ಅ.30 ರಂದು ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ(India vs Australia) ನಡುವಣ ಸೆಮಿ ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ, ವಿಜೇತರ ನಿರ್ಧಾರ ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಸೆಮಿಫೈನಲ್ ಪಂದ್ಯ ಒಂದು ವೇಳೆ ಮಳೆಯಿಂದ ಪೂರ್ಣಗೊಳ್ಳದಿದ್ದರೆ, ಪಂದ್ಯವನ್ನು ಮುಂದಿನ ದಿನಕ್ಕೆ (ರಿಸರ್ವ್ ಡೇ) ಮುಂದೂಡಲಾಗುತ್ತದೆ. ಎರಡನೇ ದಿನಗಳಲ್ಲಿ ಪಂದ್ಯ ಫಲಿತಾಂಶ ಕಾಣದಿದ್ದರೆ, ಲೀಗ್‌ನ ಅಂಕಗಳ ಆಧಾರದ ಮೇಲೆ ವಿಜೇತ ತಂಡವನ್ನು ನಿರ್ಧರಿಸಲಾಗುತ್ತದೆ. ಹೀಗಾದರೆ ಆಸ್ಟ್ರೇಲಿಯಾ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಆಸೀಸ್ ತಂಡ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದಿತ್ತು. ಭಾರತ ನಾಲ್ಕನೇ ಸ್ಥಾನ ಪಡೆದಿದೆ.
ಇದನ್ನೂ ಓದಿ women's World Cup: ಮಹಿಳಾ ವಿಶ್ವಕಪ್‌ನಲ್ಲಿ ಒಂದೂ ಜಯ ಕಾಣದ ಪಾಕ್; ಕೋಚ್ ವಜಾಗೊಳಿಸಲು ನಖ್ವಿ ನಿರ್ಧಾರ
ಫೈನಲ್‌ಗೆ ಮಳೆ ಬಂದರೆ?
ಫೈನಲ್ ಪಂದ್ಯಕ್ಕೂ ಮೀಸಲು ದಿನವನ್ನು ಕಾಯ್ದಿರಿಸಲಾಗಿದೆ. ಒಂದು ವೇಳೆ ಪಂದ್ಯ ಫಲಿತಾಂಶ ನೀಡದಿದ್ದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಎರಡು ದಿನಗಳಲ್ಲಿ ಪಂದ್ಯ ಫಲಿತಾಂಶ ನೀಡದಿದ್ದರೆ, ಉಭಯ ತಂಡಗಳು ಟ್ರೋಫಿಯನ್ನು ಹಂಚಿಕೊಳ್ಳುತ್ತವೆ.
ಸೆಮಿ ಅಥವಾ ಫೈನಲ್ ಪಂದ್ಯ ಟೈಗೊಂಡರೆ ಟೂರ್ನಮೆಂಟ್ ನಿಮಯದ ಪ್ರಕಾರ ಫಲಿತಾಂಶ ನಿರ್ಧರಿಸುವ ತನಕ ಸೂಪರ್ ಓವರ್ ಆಡಿಸಲಾಗುತ್ತದೆ.